ವರಿಷ್ಠ ನಾಗರಿಕರ ಪರಿ ಸಂಘದ ಸಭೆ ಹಾಗೂ ನೂತನ ಪಧಾಧಿಕಾರಿಗಳ ಆಯ್ಕೆ
ವರಿಷ್ಠ ನಾಗರಿಕರ ಪರಿ ಸಂಘದ ಸಭೆ ಹಾಗೂ ನೂತನ ಪಧಾಧಿಕಾರಿಗಳ ಆಯ್ಕೆ
ಕಲಬುರಗಿ: ಭಾರತೀಯ ಮಜ್ದೂರ ಸಂಘದ ಕಲಬುರಗಿ ಜಿಲ್ಲೆ ಜಿಲ್ಲಾಧ್ಯಕ್ಷರಾದ ಶ್ರೀ ಶ್ರೀಕಾಂತ್ ಸ್ವಾಮಿ ರವರ ಅಧ್ಯಕ್ಶತೆಯಲ್ಲಿ ವರಿಷ್ಠ ನಾಗರಿಕರ ಪರಿ ಸಂಘದ ಸಭೆ ಹಾಗೂ ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಕಲಬುರಗಿಯಲ್ಲಿ ಜರುಗಿತು,
ಈ ಸಭೆ ಉದ್ದೇಶಿಸಿ ಶ್ರೀಕಾಂತ್ ಸ್ವಾಮಿ ರವರು ಮಾತನಾಡಿ ಹಿರಿಯ ನಾಗರಿಕರು ವಯಸ್ಸಾಗಿರುವ ಕಾರಣ ಕೆಲಸದಿಂದ ಅಥವಾ ವ್ಯವಸಾಯ ಮಾಡುವದರಿಂದ ನಿವೃತ್ತಿಯನ್ನು ಹೊಂದುತ್ತಾರೆ ಆದ್ದರಿಂದ ದೈನಂದಿನ ದಿನಚರಿಯಲ್ಲಿ ನಿಧಾನವಾಗಿ ಬದಲಾವಣೆಗಳಾಗುತ್ತವೆ ಇದರಿಂದ ಮನಸ್ಸು, ಬುದ್ದಿ ಹಾಗೂ ಶರೀರದಲ್ಲಿ ನೇರ ಪರಿಣಾಮಗಳಾಗಿ ಶರೀರದಲ್ಲಿ ಹಲವಾರು ರೋಗಗಳು ಕಾಣಿಸಿಕೊಳ್ಳುತ್ತವೆ,ನಿರ್ದಿಷ್ಟ ಕೆಲಸಗಳು ಆಗದೆ ಸಮಯ ಕಳೆಯುವದು ಕಷ್ಟ ಆಗುತ್ತೆ, ಕುಟುಂಬದಲ್ಲೂ ಕೂಡ ತನ್ನ ಮನಸ್ಸಿನಂತೆ ಕೆಲಸ ಕಾರ್ಯಗಳು ಆಗದೆ ದುಃಖವುಂಟು ಮಾಡುವುದು, ಕೆಲವೊಂದು ಸಾರಿ ಆರ್ಥಿಕ ಕಾರಣಗಳಿಂದ ಕುಟುಂಬವು ವೃದ್ಧರನ್ನು ತ್ಯಾಗ ಮಾಡುವುದು ಇದೆ, ಇದರಿಂದ ಅನಾಥರಾಗುವ ಸಂಭವನು ಇದೆ, ಕೆಲವು ಕುಟುಂಬದ ಮಕ್ಕಳು ಒಳ್ಳೆಯ ಸಂಸ್ಕಾರದಿಂದ ಬೆಳೆದು ತನ್ನ ತಂದೆ ತಾಯಿ ಯನ್ನು ಪೂಜನಿಯವಾಗಿ ನೋಡಿಕೊಳ್ಳುತ್ತಾರೆ ಆದರೆ ದಿನೇ ದಿನೇ ಇಂತಹವರು ಗಣನೀಯವಾಗಿ ಕಡಿಮೆಯಾಗುತ್ತಿದ್ದಾರೆ, ಈಗ ದೇಶದಲ್ಲಿ ವೃದ್ಧರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಸುಮಾರು 15 ಕೋಟಿಗಿಂತ ಹೆಚ್ಚು ಹಿರಿಯರ ಸಂಖ್ಯೆ ಇದೆ, ಅದಕ್ಕಾಗು ಸರ್ಕಾರವು ಇವರಿಗೆ ಪ್ರತ್ಯಕವಾದ ಕಾನೂನುಗಳನ್ನು ರೂಪಿಸಿದೆ, ಹಿರಿಯರ ಹಾಗೂ ನಿವೃತ್ತರ ಹೆಸರಿನಲ್ಲಿ ಹಲವಾರು ಸಂಘಗಳು ಗುರುತಿಸಿಕೊಂಡಿವೆ ಆದರೆ ಅವರ ಉದ್ದೇಶ ಕೇವಲ ನಿವೃತ್ತಿ ವೇತನ, ವೇತನದ ಹೆಚ್ಚಳದ ಸಮಸ್ಯೆಗಳ ಬಗ್ಗೆ ಮಾತ್ರ ಕೂಡಿದೆ, ಇನ್ನು ಹಲವಾರು ವಿಷಯಗಳ ಸಮಸ್ಯೆಗಳು ಇದ್ದು ಇದರ ಸಮಗ್ರ ರೂಪದ ಸಂಘಟನೆ ಕೊರತೆ ಇದೆ,
ಈ ಒಂದು ಕಾರಣಗಳಿಂದ ಭಾರತಿಯ ಮಜ್ದುರ ಸಂಘ ವು ವೃದ್ಧರ ಸಮಸ್ಯಗಳು ಮುಂದಿಟ್ಟು ವರಿಷ್ಟ ನಾಗರಿಕ ಪರಿಸಂಘ ವನ್ನು ಸ್ಥಾಪನೆ ಮಾಡಿರುತ್ತಾರೆ, ಬಿ.ಎಂ.ಎಸ್ ಸಂಘವು
ಸೇವೆಯ ಆಧಾರ: 1.ಮಾಸಿಕ 5000 ರೂಪಾಯಿಗಳ ಪಿಂಚಣಿ ಖಾತ್ರಿ ಪಡಿಸುವದು. ಸಾಮಾಜಿಕ ಭದ್ರತೆ( ಗ್ರ‍್ಯಾಚೂಟಿ, ಭವಿಷ್ಯನಿಧಿ), ಸರ್ಕಾರಿ ಸೌಲಭ್ಯಗಳಾದ ರೇಲ್ವೆ, ಬಸ್, ವಿಮಾನದ ಪ್ರಯಾಣ ಬೆಲೆಯಲ್ಲಿ ರಿಯಾಯಿತಿ ನೀಡುವದು. ವಾರಕ್ಕೊಮ್ಮೆ ಸಮ್ಮಿಲನ ಆಗುವುದು.
ಆರೋಗ್ಯದ ಆಧಾರ: ಉಚಿತ ಚಿಕಿತ್ಸೆ ಸೌಲಭ್ಯಗಳನ್ನು ಪಡೆಯುವದು.ಔಷದ ಬ್ಯಾಂಕ್ ಸ್ಥಾಪಿಸಲು ಒತ್ತಾಯಿಸಿ ಉಚಿತ ಔಷಧಿಗಳನ್ನು ಪಡೆಯುವದು. ಉಚಿತ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡುವದು. ಕಣ್ಣಿನ ದಾನ ಮಾಡಲು ಪ್ರೋತ್ಸಾಹ ನೀಡುವುದು. ಆಯುರ್ವೇದಿಕ್ ಹಾಗೂ ಹೋಮಿಯೋಪತಿಗೆ ನಶೆ ಮುಕ್ತಿಗೆ ಪ್ರೋತ್ಸಾಹ ನೀಡುವುದು.
ಯೋಗದ ಆಧಾರ: ದಿನನಿತ್ಯ ಯೋಗಾಭ್ಯಾಸ ಮಾಡುವದು. ಅಂತರ್ ರಾಷ್ಟ್ರೀಯ ಯೋಗ ದಿನ ಹಾಗೂ ವರಿಷ್ಠ ನಾಗರಿಕ ದಿವಸ ಆಚರಣೆ ಮಾಡವದು.
ಶಿಕ್ಷಣ ಕ್ಷೇತ್ರ : ಪ್ರವಾಸೋದ್ಯಮ ಹಾಗೂ ಭಾರತ್ ದರ್ಶನ ಕಾರ್ಯಕ್ರಮ, ಕುಟುಂಬ ಸಾಮರಸ್ಯ, ಸ್ವಚ್ಛತಾ ಅಭಿಯಾನ, ಪರಿಸರ. ವೃದ್ಯಾಪ್ಯ ಕೇಂದ್ರಗಳ ಸ್ಥಾಪನೆ ಒತ್ತು ನೀಡಿ: ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳ ಪಡೆದು ಹಿರಿಯ ನಾಗರಿಕರಿಗೆ ಒಂದು ಒಳ್ಳೆಯ ಜೀವನ ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಮಜ್ದೂರ ಸಂಘವು ವರಿಷ್ಠ ನಾಗರಿಕ ಪರಿಸಂಘವನ್ನು ಸ್ಥಾಪಿಸಿರುತ್ತಾರೆ ಎಂದು ತಿಳಿಸಿದರು ,ಅದರಂತೆ ಕಲಬುರಗಿ ಜಿಲ್ಲೆಯಲ್ಲಿ ಕೂಡ ಹೊಸ ಪಧಾಧಿಕಾರಿಗಳ ಆಯ್ಕೆ ಮಾಡಲಾಯಿತು.
ಇದೆ ಸಂಧರ್ಭದಲ್ಲಿ ಭಾರತೀಯ ಮಜ್ದೂರ ಸಂಘದ ಮಾಜಿ ರಾಜ್ಯಾಧ್ಯಕ್ಷರಾದ ಶಂಕರ ಸುಲೇಗಾಂವ್, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಸುಗಣ್ಣ ಅವಂತಿ, ವರಿಷ್ಠ ನಾಗರಿಕರ ಪರಿಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಬಾಬುರಾವ್ ಮಾನುಕಟ್ಟಿ , ರಜೆಯ ಉಪಾಧ್ಯಕ್ಷರಾದ ಐ.ಬಿ ಹಿರೇಮಠ, ರಾಜ್ಯ ಕಾರ್ಯದರ್ಶಿಗಳಾದ ಬಿರಾದಾರ ಎಂ, ಎಸ್ ಎಸ್ ಡೆಂಗಿ, ನಿವೃತ್ತ ಪ್ರಾಂಶುಪಾಲರಾದ ಸುಭಾಷ್ ಚಂದ್ರನಾಯಕ್ ವಾಡ, ಉಲೇಪ್ಪ ದೊಡ್ಡಮನಿ, ವಿ.ಮೂಲಗೆ ಇನ್ನಿತರರು ಸಭೆಯಲ್ಲಿ ಭಾಗಿಯಾಗಿದ್ದರು.