ದೈಹಿಕ ಶಿಕ್ಷಣಕ್ಕೆ ಉತ್ತೇಜನ ಅಗತ್ಯ: ಪಾಸೋಡಿ
ದೈಹಿಕ ಶಿಕ್ಷಣಕ್ಕೆ ಉತ್ತೇಜನ ಅಗತ್ಯ: ಪಾಸೋಡಿ
ಕಮಲನಗರ:ದೈಹಿಕ ಶಿಕ್ಷಣಕ್ಕೆ ಸರ್ಕಾರ ಉತ್ತೇಜನ ನೀಡಬೇಕು ಎಂದು ಕಲಬುರ್ಗಿ ಕೇಂದ್ರೀಯ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಎಸ್. ಪಾಸೋಡಿ ಹೇಳಿದರು.
ಪಟ್ಟಣದಲ್ಲಿ ಈಚೆಗೆ ಕಲ್ಯಾಣ ಕರ್ನಾಟಕ ಬೀದರ್ ಜಿಲ್ಲೆಯ ಸೇವಾ ನಿವೃತ್ತಿ ದೈಹಿಕ ಶಿಕ್ಷಕರ ಸ್ನೇಹ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನಿಗೆ ಜ್ಞಾನದ ಜತೆ ಆರೋಗ್ಯವೂ ಅಷ್ಟೇ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ದೈಹಿಕ ಶಿಕ್ಷಣ ಬೋಧನೆಗೆ ಆದ್ಯತೆ ಸಿಗಬೇಕು. ಇತರೆ ಶಿಕ್ಷಕರಿಗೆ ಸಿಗುವ ಎಲ್ಲ ಸೌಲಭ್ಯ ದೈಹಿಕ ಶಿಕ್ಷಕರಿಗೂ ಸಿಗಬೇಕು ಎಂದರು.
ನಿವೃತ್ತ ಪ್ರಾಂಶುಪಾಲ ಶಿವಶರಣಪ್ಪ ಪಾಟೀಲ, ವಿಜಯಕುಮಾರ ಗಂಗು, ಶಿವಲಿಂಗಪ್ಪ ಗೌಳಿ, ರಾಜ್ಯ ಸರ್ಕಾರಿ ನೌಕರ ಸಂಘದ ಉಪಾಧ್ಯಕ್ಷೆ ಅನ್ನಪೂರ್ಣ, ಪ್ರಕಾಶ ಮಾನಕರಿ, ಶಂಕರರಾವ ಪಾಟೀಲ, ಶಿವರಾಜ ಕಣಜಿ, ಪ್ರಕಾಶ ಟೋನ್ನೇ ಮಲ್ಲಿಕಾರ್ಜುನ ಟಂಕಸಾಲೆ ಸೇರಿದಂತೆ ಜಿಲ್ಲೆಯ ನಿವೃತ್ತ ಹಾಗೂ ಹಾಲಿ ದೈಹಿಕ ಶಿಕ್ಷಕರು ಪಾಲ್ಗೊಂಡರು.