ಘಮಸುಬಾಯಿ ತಾಂಡಾದಲ್ಲಿ ಶಾಸಕ ಪ್ರಭು ಚವ್ಹಾಣ ಸಂಕ್ರಾಂತಿ ಆಚರಣೆ

ಘಮಸುಬಾಯಿ ತಾಂಡಾದಲ್ಲಿ ಶಾಸಕ ಪ್ರಭು ಚವ್ಹಾಣ ಸಂಕ್ರಾಂತಿ ಆಚರಣೆ

ಘಮಸುಬಾಯಿ ತಾಂಡಾದಲ್ಲಿ ಶಾಸಕ ಪ್ರಭು ಚವ್ಹಾಣ ಸಂಕ್ರಾಂತಿ ಆಚರಣೆ

ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಘಮಸುಬಾಯಿ ತಾಂಡಾ ನಿವಾಸದಲ್ಲಿ ಜ.15ರಂದು ಸಾರ್ವಜನಿಕರೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ಸಾಂಪ್ರದಾಯಿಕವಾಗಿ ಆಚರಿಸಿದರು.

ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಆತ್ಮೀಯರು, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರಿಗೆ ಎಳ್ಳು ಬೆಲ್ಲ‌ ಹಂಚಿ ಶುಭ ಕೋರಿದರು. ತಾಂಡಾದಲ್ಲಿ ಸಂಸ್ಕೃತಿ ಹಾಗೂ ಗ್ರಾಮೀಣ ಪರಂಪರೆಯನ್ನು ಪ್ರತಿಬಿಂಬಿಸುವ ರೀತಿಯಲ್ಲಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಮಕರ ಸಂಕ್ರಾಂತಿ ನಮ್ಮ ಭಾರತೀಯ ಸಂಸ್ಕೃತಿಯ ಮಹತ್ವದ ಹಬ್ಬವಾಗಿದೆ. ಸೂರ್ಯನ ಪಥ ಬದಲಾವಣೆಯ ಹೊಸ ಆರಂಭವನ್ನು ಮತ್ತು ಕತ್ತಲೆಯಿಂದ ಬೆಳಕಿನತ್ತ, ನಿರಾಶೆಯಿಂದ ಆಶೆಯತ್ತ ಸಾಗುವ ಸಂಕೇತ ನೀಡುವ ಈ ಹಬ್ಬವನ್ನು ದೇಶಾದ್ಯಂತ ವಿವಿಧ ಹೆಸರುಗಳಿಂದ ಆಚರಿಸಲಾಗುತ್ತದೆ.

ಈ ಹಬ್ಬವು ಕೃಷಿ ಸಂಸ್ಕೃತಿಯ ಪ್ರತೀಕ. ರೈತರು ವರ್ಷಪೂರ್ತಿ ಮಾಡಿದ ಪರಿಶ್ರಮಕ್ಕೆ ಫಲ ದೊರೆಯುವ ಸಮಯದಲ್ಲಿ ಈ ಹಬ್ಬ ಆಚರಿಸುವುದು ವಿಶೇಷವಾಗಿದೆ. ಎಳ್ಳು–ಬೆಲ್ಲ ಹಂಚಿಕೊಂಡು ಎಳ್ಳು ಬೆಲ್ಲ ತಿನ್ನಿ, ಒಳ್ಳೆ ಮಾತಾಡಿ ಎಂದು ಹೇಳುವ ಮೂಲಕ ಪರಸ್ಪರ ಸೌಹಾರ್ದತೆ, ಪ್ರೀತಿ ಮತ್ತು ಸಹಬಾಳ್ವೆಯ ಸಂದೇಶವನ್ನು ನೀಡುತ್ತದೆ.

ಮಕರ ಸಂಕ್ರಾಂತಿ ಹಬ್ಬವು ಶಾಂತಿ, ಸಹೋದರತ್ವ ಹಾಗೂ ಸಮೃದ್ಧಿಯ ಸಂಕೇತವಾಗಿದೆ. ಇಂತಹ ಹಬ್ಬಗಳು ಸಮಾಜದಲ್ಲಿ ಏಕತೆ ಮತ್ತು ಸೌಹಾರ್ದತೆಯನ್ನು ಮತ್ತಷ್ಟು ಬಲಪಡಿಸುತ್ತವೆ ಎಂದು ಸಂಕ್ರಾಂತಿಯ ಮಹತ್ವದ ಬಗ್ಗೆ ತಿಳಿಸಿದರು.

ರೈತರ ಸಂಭ್ರಮದ ಹಬ್ಬವಾಗಿರುವ ಸಂಕ್ರಾಂತಿ ನಾಡಿನ ಜನತೆಗೆ ನೆಮ್ಮದಿ ಕಲ್ಪಿಸಲಿ, ಎಲ್ಲರಿಗೂ ಸುಖ, ಶಾಂತಿ, ಸಂತೋಷ ಮತ್ತು ಸಮೃದ್ಧಿ ಹೊತ್ತು ತರಲೆಂದು ಹಾರೈಸುತ್ತೇನೆ‌‌ ಎಂದು ಶುಭ ಕೋರಿದರು. ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.