ಚಿಕ್ಕಮಗಳೂರು ಮೆಡಿಕಲ್ ಸೈ.ನೂತನ ಕಟ್ಟಡ ಕಾಮಗಾರಿಗೆ ಸಚಿವ ಶರಣಪ್ರಕಾಶ ಪಾಟೀಲರಿಂದ ಪರಿಶೀಲನೆ

ಚಿಕ್ಕಮಗಳೂರು  ಮೆಡಿಕಲ್ ಸೈ.ನೂತನ ಕಟ್ಟಡ ಕಾಮಗಾರಿಗೆ ಸಚಿವ ಶರಣಪ್ರಕಾಶ ಪಾಟೀಲರಿಂದ ಪರಿಶೀಲನೆ

ಚಿಕ್ಕಮಗಳೂರು ಸಿಮ್ಸ್ ನೂತನ ಕಟ್ಟಡ ಕಾಮಗಾರಿಗೆ ಸಚಿವ ಶರಣಪ್ರಕಾಶ ಪಾಟೀಲರಿಂದ ಪರಿಶೀಲನೆ

ಚಿಕ್ಕಮಗಳೂರು: ಚಿಕ್ಕಮಗಳೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ (ಸಿಮ್ಸ್) ಆವರಣದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡ ಕಾಮಗಾರಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಶರಣಪ್ರಕಾಶ ಪಾಟೀಲ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಪರಿಶೀಲನೆಯ ಸಂದರ್ಭದಲ್ಲಿ, ಸ್ಥಳೀಯ ಶಾಸಕರಾದ ಶ್ರೀ ಹೆಚ್.ಡಿ. ತಮ್ಮಯ್ಯ, ಮಾಜಿ ಸಚಿವ ಶ್ರೀ ಜಿ.ಹೆಚ್. ಶ್ರೀನಿವಾಸ್ ಹಾಗೂ ಸಿಮ್ಸ್ ನಿರ್ದೇಶಕರಾದ ಡಾ. ಹರೀಶ್ ಉಪಸ್ಥಿತರಿದ್ದರು.

ಸಚಿವರು ಕಾಮಗಾರಿಯ ಗುಣಮಟ್ಟ, ಕಾಮಗಾರಿ ಪ್ರಗತಿ ಮತ್ತು ನಿರ್ಧಿಷ್ಟ ವೇಳಾಪಟ್ಟಿಗೆ ಅನುಗುಣವಾಗಿ ಮುಕ್ತಾಯಗೊಳ್ಳುವ ವಿಚಾರದಲ್ಲಿ ಅಧಿಕಾರಿಗಳಿಗೆ ಸೂಕ್ತ ಸೂಚನೆ ನೀಡಿದರು. ಸಾರ್ವಜನಿಕರಿಗೆ ಉತ್ತಮ ಆರೋಗ್ಯ ಸೌಲಭ್ಯ ನೀಡುವ ಉದ್ದೇಶದಿಂದ ಈ ಕಟ್ಟಡ ನಿರ್ಮಾಣವಾಗುತ್ತಿದ್ದು, ರಾಜ್ಯ ಸರ್ಕಾರದ ನಿರ್ಧಾರ ಇದಾಗಿದೆ ಎಂದು ಅವರು ಹೇಳಿದರು.