ಪದ್ಮಾವತಿ ನಾಗೇಶಪ್ಪ ಹಾಳಮಳ್ಳಿ ನಿಧನ
ಪದ್ಮಾವತಿ ನಾಗೇಶಪ್ಪ ಹಾಳಮಳ್ಳಿ ನಿಧನ
ಅಫಜಲಪುರ: ಮಾಲಗಾರ ಸಮಾಜದ ಹಿರಿಯ ಮುಖಂಡರು ಹಾಗೂ ಸಮಾಜಸೇವಕರಾಗಿದ್ದ ಲಿಂ. ನಾಗೇಶಪ್ಪ ಹಾಳಮಳ್ಳಿ ಅವರ ಧರ್ಮಪತ್ನಿ ಪದ್ಮಾವತಿ ನಾಗೇಶಪ್ಪ ಹಾಳಮಳ್ಳಿ (ವಯಸ್ಸು 86) ಅವರು ನಿನ್ನೆ ರಾತ್ರಿ ಅನಾರೋಗ್ಯ ಕಾರಣದಿಂದ ನಿಧನರಾಗಿದ್ದಾರೆ.
ಗ್ರಾಮದಲ್ಲಿ ‘ಅನ್ನಪೂರ್ಣಿ’ ಎಂದೇ ಹೆಸರುವಾಸಿಯಾಗಿದ್ದ ಪದ್ಮಾವತಿ ಹಾಳಮಳ್ಳಿ ಅವರು ಬಡವರ ಪಾಲಿಗೆ ದೇವತೆಯಂತಿದ್ದರು. ಹಸಿದು ಬಂದವರಿಗೆ ಅನ್ನ ನೀಡುವುದು, ಕೈಲಾದಷ್ಟು ಸಹಾಯ ಮಾಡುವುದು ಇವರ ಜೀವನದ ಧ್ಯೇಯವಾಗಿತ್ತು. ಬಡವರು ಮತ್ತು ನಿರ್ಗತಿಕರ ಪಾಲಿಗೆ ಬೆಳಕಾಗಿ ನಿಂತಿದ್ದರು. ಅವರು. ಅನೇಕ ಅಭಲೆಯರಿಗೆ ಸಹಕಾರ ನೀಡುತ್ತಿದ್ದರು
ಮೃತರ ಮಕ್ಕಳಾದ, ಡಾ. ಮಹಾಂತೇಶ ಹಾಳಮಳ್ಳಿ, ಮಲ್ಲಿನಾಥ ಹಾಳಮಳ್ಳಿ ಸೇರಿದಂತೆ ಅಪಾರ ಬಂಧುಬಳಗವನ್ನು ಅಗಲಿದ್ದಾರೆ.ಇವರ ಅಗಲಿಕೆಯಿಂದ ಸಮಾಜಕ್ಕೆ ತುಂಬಲಾರದ ನಷ್ಟ ಉಂಟಾಗಿದೆ ಎಂದು ಗ್ರಾಮಸ್ಥರು ಹಾಗೂ ಸಮಾಜದ ಮುಖಂಡರು ಶೋಕ ವ್ಯಕ್ತಪಡಿಸಿದ್ದಾರೆ.
ಮೃತರ ಅಂತ್ಯಕ್ರಿಯೆಯು ಇಂದು ಮಧ್ಯಾಹ್ನ 3 ಗಂಟೆಗೆ ಅಫಜಲಪುರ ತಾಲ್ಲೂಕಿನ ನೀಲೂರ ಗ್ರಾಮದ ವಕೀಲ ತೋಟದಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
