ಕನ್ನಡದ ಮರ್ಯಾದೆ ಕಳೆಯುತ್ತಿರುವ ವಿಶ್ವವಿದ್ಯಾಲಯ

ಕನ್ನಡದ ಮರ್ಯಾದೆ ಕಳೆಯುತ್ತಿರುವ ವಿಶ್ವವಿದ್ಯಾಲಯ

ಕನ್ನಡದ ಮರ್ಯಾದೆ ಕಳೆಯುತ್ತಿರುವ ವಿಶ್ವವಿದ್ಯಾಲಯ

ಕಲಬುರಗಿ: ವಿಜಯಪುರ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಕನ್ನಡದ ಕಗ್ಗೊಲೆಯಾಗಿದೆ. ಪಿಎಚ್.ಡಿ ಪ್ರವೇಶಾತಿಯ ಪ್ರಶ್ನೆಪತ್ರಿಕೆಯಲ್ಲಿ ಕನ್ನಡವನ್ನು ಅತ್ಯಂತ ಬೇಜವಾಬ್ದಾರಿಯಾಗಿ ಪ್ರಕಟಿಸಲಾಗಿದೆ. ಪ್ರತಿಷ್ಠಿತ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಇಂತಹ ಅಚಾತುರ್ಯ ಕೆಲಸಗಳು ನಡೆಯುವುದು ವ್ಯಕ್ತಿಗತ ಅವಮಾನವಲ್ಲ; ಬದಲಿಗೆ ಇದು ಕರ್ನಾಟಕದ ಮರ್ಯಾದೆ ಕಳೆಯುವಂತಹ ಕೆಲಸವಾಗಿದೆ.

ವಿಶ್ವವಿದ್ಯಾಲಯದ ಕುರ್ಚಿಗಳು ಮಾರಾಟಕ್ಕಿವೆ ಎಂಬ ಮಾತು ಆಗಾಗ ಕೇಳಿಬರುತ್ತವೆ. ಹಾಗೆ ಮಾರಾಟಗೊಂಡ ಕುರ್ಚಿಯ ಮೂಲಕ ಹಿಂಬಾಗಿಲ ಮೂಲಕ ಪ್ರವೇಶ ಪಡೆಯುವ ಪ್ರಾಧ್ಯಾಪಕರಿಂದ ಇದಕ್ಕಿಂತ ಹೆಚ್ಚಿನ ಭಾಷಾಪ್ರಾವಿಣ್ಯತೆ ನಿರೀಕ್ಷಿಸಲು ಹೇಗೆ ಸಾಧ್ಯ. ಇಂತಹ ಅಚಾತುರ್ಯಗಳು ಕೇವಲ ಭಾಷಿಕ ತೊಡಕಿನಂದಷ್ಟೆ ಅಲ್ಲದೆ ವೃತ್ತಿಯ ಮೇಲಿನ ಅಗೌರವದಿಂದಲೂ ಘಟಿಸುತ್ತವೆ ಎಂಬುದನ್ನು ನಾವು ಮರೆಯಬಾರದು. ಇಂಥವರು ಯಾವ ಲೆಕ್ಕದ ಮೇಲೆ ಸರ್ಕಾರಿ ನೌಕರಿ ಪಡೆದಿದ್ದಾರೆ ಎಂಬುದೇ ಯಕ್ಷ ಪ್ರಶ್ನೆಯಾಗಿದೆ. ಈ ಪ್ರಶ್ನೆಪತ್ರಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.