12 ನೆಯ ಶತಮಾನದ ಶರಣರು ನಿರಹoಕಾರಿಗಳಾಗಿದ್ದರು... ಪ್ರೊ. ಮಾಸಿಮಾಡೆ

12 ನೆಯ ಶತಮಾನದ ಶರಣರು    ನಿರಹoಕಾರಿಗಳಾಗಿದ್ದರು...  ಪ್ರೊ. ಮಾಸಿಮಾಡೆ

12 ನೆಯ ಶತಮಾನದ ಶರಣರು ನಿರಹoಕಾರಿಗಳಾಗಿದ್ದರು.ಪ್ರೊ. ಮಾಸಿಮಾಡೆ 

     ಚಿಂಚೋಳಿ - 12ನೇ ಶತಮಾನದ ಶರಣರು ಕಾಯಕವೇ ತಮ್ಮ ಜೀವನದ ಉಸಿರಾಗಿಸಿಕೊಂಡಿದ್ದರು. ಕಾಯಕದಿಂದ ಉತ್ಪನ್ನವಾದ ಆದಾಯವನ್ನು ದಾಸೋಹಕ್ಕಾಗಿ ಬಳಸುತ್ತಿದ್ದರು. ಹೀಗಾಗಿ ಅವರಿಗೆ ಅತಿಯಾಸೆ ಇರಲಿಲ್ಲ. ಅವರಲ್ಲಿ ಅಹಂ ಇರಲಿಲ್ಲ. ನಾನು ಎನ್ನುವ ಭಾವ ಅವರ ಹತ್ತಿರ ಸುಳಿಯಲಿಲ್ಲ. ಆದುದರಿಂದಲೇ ಸಾಮಾನ್ಯ ಕಸಗುಡಿಸುವ ಮಹಿಳೆ, ಬಟ್ಟೆ ಒಗೆಯುವ ವ್ಯಕ್ತಿಗಳು ಶರಣರಾದರು. ಅವರನ್ನು ಒಂಬೈನೂರು ವರ್ಷಗಳಾದರೂ ನಾವು ಸ್ಮರಿಸುತ್ತೇವೆ ಎಂದು ಬೀದರಿನ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅವರು ಅಭಿಪ್ರಾಯ ಪಟ್ಟರು. ಮಂಗಳವಾರ ಇಲ್ಲಿನ ಚಂದಾಪುರದ ಹಾರಕೂಡ ಶ್ರೀ ಚನ್ನಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ; ಚಿಂಚೋಳಿ ತಾಲೂಕಾ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹೊರ ತಂದ ಹೊಸ ವರ್ಷ 2026 ರ ಕ್ಯಾಲೆಂಡರ ಬಿಡುಗಡೆ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಬೀದರ ವಿಶ್ವವಿದ್ಯಾಲಯದ ಕನ್ನಡ ಉಪನ್ಯಾಸಕರು ಡಾ. ರಾಮಚಂದ್ರ ಗಣಾಪೂರ ಅವರು ಆಧುನಿಕ ವಚನಕಾರ ಡಾ. ಸಿದ್ದಯ್ಯ ಪುರಾಣಿಕ ಅವರ ಕುರಿತು ಉಪನ್ಯಾಸ ನೀಡಿದರು. ಪುರಾಣಿಕರು ರಚಿಸಿದ ಆಧುನಿಕ ವಚನಗಳು, ಅವರ ಕಾವ್ಯ ಹಾಗೂ ಮಕ್ಕಳ ಸಾಹಿತ್ಯ ಕ್ಷೇತ್ರಕ್ಕೆ ಅವರು ನೀಡಿದ ಕೊಡುಗೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬೀದರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕರಾದ ಡಾ. ಈಶ್ವರಯ್ಯ ಕೊಡಂಬಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗೀತಾರಾಣಿ ಐನೋಳಿ, ಚನ್ನಬಸಯ್ಯ ಮಠ, ನಾಗೇಶ್ ಬಿ. ಶೀಲವಂತ ಅತಿಥಿಗಳಾಗಿದ್ದರು. ಶರಣಯ್ಯ ಸ್ವಾಮಿ ಅಲ್ಲಾಪುರ ಐನೂಲಿ, ವಿಶ್ವನಾಥ ಮಠಪತಿ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಗಣಪತಿ ದೇವಕತ್ತೆ ಸ್ವಾಗತಿಸಿದರು. ಬಸವರಾಜ ಐನೋಳಿ ನಿರೂಪಿಸಿ ವಂದಿಸಿದರು.