ವಚನಗಳ ಮೂಲಕ ಸಮಾನತೆ ದಾರಿತೋರಿದ ಮಹಾಜ್ಞಾನಿ ಶಿವಯೋಗಿ ಸಿದ್ಧರಾಮೇಶ್ವರರು : ಬಸವರಾಜ ಮಲಿ

ವಚನಗಳ ಮೂಲಕ ಸಮಾನತೆ ದಾರಿತೋರಿದ ಮಹಾಜ್ಞಾನಿ ಶಿವಯೋಗಿ ಸಿದ್ಧರಾಮೇಶ್ವರರು : ಬಸವರಾಜ ಮಲಿ

ಚಿಂಚೋಳಿ ಆಡಳಿತ ಸೌಧ ಪ್ರಜಾಸೌಧದಲ್ಲಿ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಜಯಂತಿ ಆಚರಣೆ

ವಚನಗಳ ಮೂಲಕ ಸಮಾನತೆ ದಾರಿತೋರಿದ ಮಹಾಜ್ಞಾನಿ ಶಿವಯೋಗಿ ಸಿದ್ಧರಾಮೇಶ್ವರರು : ಬಸವರಾಜ ಮಲಿ

ಚಿಂಚೋಳಿ: ಚಿಂಚೋಳಿ ಆಡಳಿತ ಸೌಧದ ಪ್ರಜಾಸೌಧದಲ್ಲಿ ಭೋವಿ ಸಮಾಜದ ಆರಾಧಕ ಶಿವಯೋಗಿ ಶ್ರೀ ಸಿದ್ಧರಾಮೇಶ್ವರರ ಜಯಂತಿಯನ್ನು ಭಕ್ತಿಭಾವದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಂಚ ಗ್ಯಾರೆಂಟಿ ಯೋಜನೆ ಸಮಿತಿ ಅಧ್ಯಕ್ಷ ಬಸವರಾಜ ಮಲಿ ಅವರು, 12ನೇ ಶತಮಾನದಲ್ಲೇ ಅನುಭವ ಮಂಟಪವನ್ನು ರಾಜ್ಯಭವನದಂತೆ ನಡೆಸಿ ಸಮಾಜಕ್ಕೆ ಸಮಾನತೆ, ಶೋಷಣೆಯ ವಿರೋಧ ಮತ್ತು ಮಾನವೀಯತೆಯ ದಾರಿಯನ್ನು ತೋರಿಸಿದವರು ಸೋಲ್ಲಾಪೂರದ ಶ್ರೀ ಶಿವಯೋಗಿ ಸಿದ್ಧರಾಮೇಶ್ವರರು ಎಂದು ಹೇಳಿದರು. ವಚನಗಳ ಮೂಲಕ ಜಾತಿ-ವರ್ಗ ಭೇದವಿಲ್ಲದ ಸಮಸಮಾಜ ನಿರ್ಮಾಣದ ಸಂದೇಶವನ್ನು ಅವರು ನೀಡಿದ್ದಾರೆ ಎಂದರು.

ಶಿವಯೋಗಿ ಸಿದ್ಧರಾಮೇಶ್ವರರು ಕೇವಲ ಧಾರ್ಮಿಕ ನಾಯಕನಲ್ಲ, ಸಮಾಜ ಸುಧಾರಕ ಹಾಗೂ ಮಹಾಜ್ಞಾನಿಯಾಗಿದ್ದು, ಅವರ ಚಿಂತನೆಗಳು ಇಂದಿಗೂ ಪ್ರಸ್ತುತವಾಗಿವೆ. ಅವರ ಆದರ್ಶಗಳನ್ನು ಯುವಜನತೆ ಅಳವಡಿಸಿಕೊಂಡರೆ ಸಮನ್ವಿತ ಹಾಗೂ ನ್ಯಾಯಸಮ್ಮತ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿದರು.

 ಅವರು ತಾಲೂಕ ಆಡಳಿತ ಸೌಧ ಪ್ರಜಾಸೌಧದಲ್ಲಿ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಜಂಯತಿ ಪ್ರಯುಕ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

12ನೇ ಶತಮಾನದಲ್ಲಿ ಜಗಜ್ಯೋತಿ ಬಸವಣ್ಣ, ಸೋಲ್ಲಾಪೂರದ ಶ್ರಿ ಶಿವಯೋಗಿ ಸಿದ್ದರಾಮೇಶ್ವರರು ಮತ್ತು ಅಲ್ಲಮ ಪ್ರಭುಗಳು ಲೋಕ ಕಲ್ಯಾಣಕ್ಕಾಗಿ ಕ್ರಾಂತಿಯನ್ನು ಮಾಡಿವರು. ಅಕ್ಷರ ಜ್ಞಾನವಿಲ್ಲದಿದ್ದರೂ ಶಿವಯೋಗಿ ಸಿದ್ಧರಾಮೇಶ್ವರರು ಮಹಾ ಜ್ಞಾನಿಗಳಾಗಿದ್ದರು ಎಂದರು.

ಅಧ್ಯಕ್ಷತೆ ವಹಿಸಿ ಆಡಳಿತಾಧಿಕಾರಿ ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಮಾತನಾಡಿ, ಶಾಂತ ಸ್ವಭಾವ ಹೊಂದಿರುವ ಸಮಾಜ ಭೋವಿ ಸಮಾಜವಾಗಿದ್ದು, ತಮ್ಮ ಕಾಯಕದಲ್ಲಿ ಕೈಲಾಸವನ್ನು ಕಂಡಂತಹವರು. ಸರಕಾರದ ಸೌಲಭ್ಯಗಳನ್ನು ಸದುಪಯೋಗಿಸಿಕೊಂಡು ಶೈಕ್ಷಣಿಕವಾಗಿ ಸಮಾಜ ಇನ್ನೂ ಬಲಿಷ್ಠಗೊಳ್ಳಬೇಕೆಂದರು.

ಮುಖಂಡ ಹಣಮಂತ ಭೋವಿ ಮಾತನಾಡಿ, ಕಲ್ಲುಗಳಿಂದ ಹೊಡೆದಾಡುವುದನ್ನು ಕಲಿಸದೇ ಪುಸ್ತಕ ಮತ್ತು ಪೇನಿನ್ನ ಜೊತೆಗೆ ಹೊಡೆದಾಡುವುದನ್ನು ಮಕ್ಕಳಿಗೆ ಕೆಲಿಸಿ, ಅಕ್ಷರ ಜ್ಞಾನ ಹೆಚ್ಚಿಸಿಕೊಳ್ಳುವುದಕ್ಕೆ ಪ್ರೋತ್ಸಾಹಿಸಿ ಭೋವಿ ಸಮಾಜವನ್ನು ಮುಖ್ಯವಾಹಿನಿಗೆ ತರುವ ಕೆಲಸ ಸಮಾಜದ ಬಂಧುಗಳು ಮಾಡಬೇಕೆಂದು ಮನವಿ ಮಾಡಿದರು.

ಪ್ರಾಚಾರ್ಯ ಪ್ರೊ. ಮಲ್ಲಿಕಾರ್ಜುನ ಪಾಲಾಮೂಲ ಅವರು ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ಕುರಿತು ಉಪನ್ಯಾಸ ನೀಡಿದರು.

ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಚಂದಾಪೂರದ ಪ್ರಜಾಸೌಧದ ವರೆಗೆ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ಬೃಹತ್ ಮೇರವಣಿಗೆ ನಡೆಸುವುದರ ಜೊತೆಗೆ ಕಲ್ಲು ಗಾಣಿಗರಿಕಯ ಸಿದ್ದರಾಮೇಶ್ವರ ವೃತ್ತಕ್ಕೆ ತೆರೆಳಿ ಪೂಜೆ ಸಲ್ಲಿಸಿ, ಪ್ರಸಾದ ಸವಿದರು. 

ಈ ಸಂದರ್ಭದಲ್ಲಿ ಭೋವಿ ಸಮಾಜದ ಅಧ್ಯಕ್ಷ ಜಗನ್ನಾಥ ರಾಜಾಪೂರ, ವೀರಶೈವ ಲಿಂಗಾಯತ್ ಮಹಾಸಭಾದ ಯುವ ಅಧ್ಯಕ್ಷ ವಿರೇಶ ಯಂಪಳ್ಳಿ, ಪುರಸಸಭೆ ಮಾಜಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಕೆ.ಎಂ.ಬಾರಿ, ಶ್ರೀಕಾಂತ್ ಪಿತ್ತಲ್, ಅಬ್ದುಲ್ ಬಾಷೀದ್, ಗೋಪಾಲ ಇಡಗೊಟ್ಟಿ, ವಿಠಲ್ ಕುಸಾಳೆ,ವಕೀಲ ಶ್ರೀನಿವಾಸ್ ಬಂಡಿ, ಅಜೀತ್ ಪಾಟೀಲ್, ವಿಜಯಕುಮಾರ್ ಚೆಂಗಂಟೆ, ಗಿರಿ ನಾಟಿಕಾರ್, ರಾಜು ತೋಡಿ, ಅಧಿಕಾರಿಗಳಾದ ವೆಂಕಟೇಶ ದುಗ್ಗನ್, ವೀರಶೆಟ್ಟಿ ರಾಠೋಡ, ನಾಗಶೆಟ್ಟಿ ಭದ್ರಶೆಟ್ಟಿ, ದೇವೀಂದ್ರಪ್ಪ, ಅವರು ಉಪಸ್ಥಿತರಿದರು.