ಇಂದು ಬಸವಕಲ್ಯಾಣದಿಂದ ಜ್ಯೋತಿ ಯಾತ್ರೆ
ಕಲಬುರಗಿ: ಬಸವಕಲ್ಯಾಣ ದಿಂದ ಗೋಣಿಬೀಡಿನ ವರೆಗೆ ದಶಮಾನೋತ್ಸವ ಕಾರ್ಯಕ್ರಮ ನಿಮಿತ್ತ ಇಂದು ಜ್ಯೋತಿ ಯಾತ್ರೆ ಹೊರಡಿತು ಎಂದು ಅಂಬಾರಾಯ ಮಡ್ಡೆ ತಿಳಿಸಿದರು.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗೋಣಿಬೀಡಿನ ಶ್ರೀ ಶೀಲಸಂಪಾದನ ಮಠದಲ್ಲಿ ನಡೆಯುತ್ತಿರುವ ಅನುಭಾವ ಸಂಗಮ ದಶಮಾಸೋತ್ಸವ ಕಾರ್ಯಕ್ರಮ ನಿಮಿತ್ಯ ಶ್ರೀ ಮ. ನಿ. ಪ್ರ. ಸ್ವ. ಡಾ. ಸಿದ್ದಲಿಂಗ ಮಹಾಸ್ವಾಮಿಗಳು ಇವರ ಆದೇಶದ ಮೇರೆಗೆ ಇಂದು ಕುರಿಕೋಟ ಗ್ರಾಮದ ಶ್ರೀ ಶಿವಲಿಂಗೇಶ್ವರ ವೀರಕ್ತ ಮಠದ ಸದಭಕ್ತರು ಮಹಾತ್ಮಾ ಬಸವೇಶ್ವರರ ಕಾರ್ಯಕ್ಷೇತ್ರ ಬಸವಕಲ್ಯಾಣದಿಂದ ಜ್ಯೋತಿ ಯಾತ್ರೆ ಹೊರಟಿತು. ಇಂದು ಕೂಡಲಸಂಗಮ ಕ್ಷೇತ್ರದವರೆಗೂ ಸಾಗುವ ಜ್ಯೋತಿ ಯಾತ್ರೆ, ನಾಳೆ ಗೋಣಿಬಿಡು ತಲುಪಲಿದೆ. 11.08.2024ರಂದು ನಡೆಯುವ ಅನುಭಾವ ಸಂಗಮ ಕಾರ್ಯಕ್ರಮಕ್ಕೆ ಸಾಕ್ಷಿ ಆಗಲಿದೆ ಎಂದರು .
ಮಠದ ಭಕ್ತರಾದ ಚನವೀರಪ್ಪ ಸಲಗರ, ಸಂಗಣ್ಣ ಚೀಲಶೆಟ್ಟಿ, ಶಾಂತವೀರ ಚೀಲಶೆಟ್ಟಿ, ರಾಜಕುಮಾರ ಬಸವಣ್ಣ, ಚನ್ನವೀರಯ್ಯ ಹಿರೇಮಠ, ಅಣವೀರ ಜ್ಯಾಂತಿ, ದೇಶಮುಖ ಬಸವಣ ಮುಂತಾದವರು ಜ್ಯೋತಿ ಯಾತ್ರೆಯ ಜೊತೆಗೆ ಪ್ರಯಾಣ ಬೆಳೆಸಿದ್ದಾರೆ.ಎಂದು ತಿಳಿಸಿದರು.