ಪಂಚ ಕನ್ಯೆಯರ ಪಂಚ ಕಥೆ ಅವಳು ಭರದ ಚಿತ್ರೀಕರಣ. ತೆರೆಗೆ ಆಗಷ್ಟ್ 2025ಕ್ಕೆ ನಿರೀಕ್ಷೆ

ಪಂಚ ಕನ್ಯೆಯರ ಪಂಚ ಕಥೆ ಅವಳು ಭರದ ಚಿತ್ರೀಕರಣ. ತೆರೆಗೆ ಆಗಷ್ಟ್ 2025ಕ್ಕೆ ನಿರೀಕ್ಷೆ

ಪಂಚ ಕನ್ಯೆಯರ ಪಂಚ ಕಥೆ ಅವಳು ಭರದ ಚಿತ್ರೀಕರಣ. ತೆರೆಗೆ ಆಗಷ್ಟ್ 2025ಕ್ಕೆ ನಿರೀಕ್ಷೆ

ಲೇಖನ ವರದಿ: ವೀರಣ್ಣ ಮಂಠಾಳಕರ್

ಬಯಲು ಸಿಂಹ ಸುದ್ಧಿ

ಕನ್ನಡ ಕೌಟುಂಬಿಕ ಚಿತ್ರಗಳ ಸಾಲಿನಲ್ಲಿ *ಅವಳು* ಮತ್ತೊಂದು ಇತಿಹಾಸ ನಿರ್ಮಿಸುವುದರಲ್ಲಿ ಸಂದೇಹವಿಲ್ಲ, ರಸಗುಲ್ಲಾ ಮಾದರಿಯ ಚೆಲ್ಲು ಚೆಲ್ಲಾದ ಚಿತ್ರಗಳ ಮದ್ಯೆ ಒಂದು ಕೌಟುಂಬಿಕ ಚಿತ್ರ ಸದ್ದಿಲ್ಲದೆ ತೆರೆಕಾಣಲು ಭರದಿಂದ ಚಿತ್ರೀಕರಣ ಮುನ್ನುಗ್ಗುತ್ತಿದೆ.

ಪ್ರಪಂಚದ ಅತಿ ಚಿಕ್ಕ ವಯಸ್ಸಿನ ಪತ್ರಿಕಾ ಸಂಪಾದಕರು ಹೆಗ್ಗಳಿಕೆಗೆ ಪಾತ್ರರಾಗಿದ್ದ ಉತ್ತರ ಕರ್ನಾಟಕದ ಕಾಂತ್ರಿಕಾರಿ ಪತ್ರಕರ್ತ ರಾ. ದೇ. ಕಾರಭಾರಿ ರಚಿಸಿದ ಪಂಚ ಕನ್ಯೆಯರ ಕಥಾ ಹಂದರ ಇಂದು ಚಲನಚಿತ್ರವಾಗಿ ನಿರ್ಮಾಣವಾಗುತ್ತಿದ್ದು, ರಾ ದೇ ಕಾರಭಾರಿ ಯವರ ಮಡದಿ ಸಾಮಾಜಿಕ ಹೋರಾಟಗಾರ್ತಿ ಶ್ರೀಮತಿ ಮೇರಿ ರಾದೇ ಕಾರಭಾರಿಯವರು ಅವಳು ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಹ ನಿರ್ದೇಶಕಿಯಾಗಿ ಸುನೀತಾ ಆರ್ ಕಾರ್ಯ ನಿರ್ವಹಿಸಿದ್ದಾರೆ

ರಾ. ದೇ.ಕಾರಭಾರಿ ಯವರ ಬರವಣಿಗೆಯಿಂದ ಅದ್ಬುತವಾಗಿ ಮೂಡಿ ಬಂದಿರುವ ಕಥೆಗೆ ಅವರೇ ಚಿತ್ರ ಕಥೆಯಾಗಿ ಮಾರ್ಪಡಿಸಿ ಅದಕ್ಕೆ ಪ್ರೇಕ್ಷಕರ ಮನದಲ್ಲಿ ಉಳಿಯುವ ಸಂಭಾಷಣೆ ನೀಡಿದ್ದಾರೆ.

`ಅವಳು` ಚಿತ್ರದಲ್ಲಿರುವ ನಾಯಕಿಯರ ಜೀವನವನ್ನು ಅದ್ಬುತವಾಗಿ ಚಿತ್ರಿಸಿದ್ದು ಚಿತ್ರದಲ್ಲಿ *ವೇಶ್ಯೆ, ಸಮಾಜ ಸೇವಕಿ, ಬಡ ಮಹಿಳೆ, ತಾಯಿ, ಶಿಕ್ಷಕಿ ಹೀಗೆ ಐದು ಪ್ರಧಾನ ಪಾತ್ರದ ನಾಯಕಿಯರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿದ್ದು ಇದರೊಂದಿಗೆ ವಿಶೇಷವಾಗಿ ಮಹಿಳಾ ಪೊಲೀಸ್, ಮಹಿಳಾ ಜಿಲ್ಲಾಧಿಕಾರಿ ಪಾತ್ರಗಳು ಹೆಣೆದುಕೊಂಡಿದ್ದು, ಚಿತ್ರಕ್ಕೆ ಇವರ ಪಾತ್ರಗಳು ಎದ್ದು ನಿಲ್ಲುತ್ತವೆ. 

ಇಂದಿನ ಮಕ್ಕಳಿಗೆ ಅವಶ್ಯವಿರುವ ಶಕ್ಷಣಿಕ ವಿಷಯವೂ ಚಿತ್ರದಲ್ಲಿ ಒಳಗೊಂಡಿದೆ ಚಿತ್ರ ನಿರ್ಮಾಣದ ಸಾರಥ್ಯವನ್ನು ಇಂಡಿಯನ್ ಫಿಲ್ಮ್ ಮೇಕರ್ ಅಸೋಶಿಯೇಷನ್ ನ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ದಿಲೀಪ್ ಕುಮಾರ್ ಎಚ್ ಆರ್ ವಹಿಸಿಕೊಂಡಿದ್ದು ಇದರ ಪೋಸ್ಟ್ ಪ್ರೊಡಕ್ಷನ್ ಸ್ಕೈ ಲೈನ್ ಸ್ಟುಡಿಯೋ ನಿರ್ವಹಿಸಲಿದೆ.

ಚಿತ್ರದಲ್ಲಿ ಐದು ಹಾಡುಗಳಿದ್ದು ಹಾಡುಗಳು ಚಲನ ಚಿತ್ರ ವೀಕ್ಷಕರನ್ನು ವಿಶೇಷವಾಗಿ ರಂಜಿಸಲಿದೆ. 

ಉತ್ತರ ಕರ್ನಾಟಕದ ಗದಗ ಮೂಲಕ ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ಚಿತ್ರ ಮೂಡಿ ಬರುತಿದ್ದು, ಕಾರಭಾರಿ ಮೋಷನ್ಸ್ ಕೂ ಆಪರೇಟಿವ್ ಫಿಲ್ಮ್ ಚೇಂಬರ್ ಅಸೋಶಿಯೇಶನ್ ಇದರ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ, ಚಿತ್ರದ ಚಿತ್ರೀಕರಣ ಉತ್ತರ ಕರ್ನಾಟಕದ ಗದಗ ನಲ್ಲಿ ನಡೆದಿದ್ದು ಬರುವ ಆಗಸ್ಟ್ 2025ಕ್ಕೆ ತೆರೆಕಾಣುವ ನಿರೀಕ್ಷೆ ಇದೆ.

ಚಿತ್ರದಲ್ಲಿರುವ ಪಾತ್ರಗಳು ಅಷ್ಟೇ ಅಲ್ಲದೆ ಚಿತ್ರದ ಬಹುತೇಕ ತಂಡ ಮಹಿಳಾ ಶಕ್ತಿಯನ್ನು ಕೇಂದ್ರಿಕರಣಗೊಂಡಿದೆ. ಚಿತ್ರದ ಕ್ಯಾಮೆರಾ, ಸ್ಪಾಟ್ ಗರ್ಲ್ಸ್ ಸೇರಿದಂತೆ ಬಹುತೇಕ ಕಾರ್ಯಗಳು ಮಹಿಳಾ ತಂಡದಿಂದಲೇ ಆಗುತ್ತಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.

ಚಿತ್ರವನ್ನು ಕನ್ನಡದಲ್ಲಿ ಬಿಡುಗಡೆ ಮಾಡಿದ ಬಳಿಕ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಭಾಷಾಂತರ ಮಾಡಿ ದೇಶವ್ಯಾಪ್ತಿ ಚಿತ್ರವನ್ನು ಬಿಡುಗಡೆ ಮಾಡುವ ಇಂಗಿತವನ್ನು ಚಿತ್ರ ನಿರ್ಮಾಪಕ ರಾ. ದೇ. ಕಾರಭಾರಿ ಈ ಮೂಲಕ ಪ್ರಕಟಿಸಿದ್ದಾರೆ. ಚಿತ್ರದಲ್ಲಿ ಬಹುತೇಕ ರಂಗ ಭೂಮಿ ಕಲಾವಿದರು ಹಾಗೂ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದ್ದು ಅವಳು ಚಿತ್ರದ ಮೂಲಕ ಸಂಗೀತ ನಿರ್ದೇಶಕರು ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ಚಿತ್ರರಂಗವನ್ನು ಪ್ರವೇಶ ಮಾಡಲಿದ್ದಾರೆ. ಅಂತೂ ಹೊಸ ವಿಭಿನ್ನ ವಿಶಿಷ್ಠ ಪಾತ್ರಗಳೊಂದಿಗೆ ತೆರೆ ಕಾಣಲು ಹಂಬಲಿಸುತ್ತಿರುವ ಚಿತ್ರ ತಂಡ ಮಹಿಳಾ ಚಲಚಿತ್ರ ಸಮಾಜಕ್ಕೆ ಒಂದು ಹೊಸ ಸಂದೇಶ ನೀಡಲು ಹೊರಟಿದೆ.