ಕಲ್ಯಾಣ ಕರ್ನಾಟಕದ ಶಿಕ್ಷಕ ಅಭ್ಯರ್ಥಿಗಳಿಗೆ ಬಂಪರ್ ಕೊಡುಗೆ 5200 ಕ್ಕೂ ಅಧಿಕ ಶಿಕ್ಷಕರ ಭರ್ತಿಗೆ ಆದೇಶ
ಕಲ್ಯಾಣ ಕರ್ನಾಟಕದ ಶಿಕ್ಷಕ ಅಭ್ಯರ್ಥಿಗಳಿಗೆ ಬಂಪರ್ ಕೊಡುಗೆ 5200 ಕ್ಕೂ ಅಧಿಕ ಶಿಕ್ಷಕರ ಭರ್ತಿಗೆ ಆದೇಶ
ಬೆಂಗಳೂರು : ಕಲ್ಯಾಣ ಕರ್ನಾಟಕದ ಶಿಕ್ಷಕ ಅಭ್ಯರ್ಥಿಗಳ ಬಹುದಿನಗಳ ಬೇಡಿಕೆ ಈಡೇರಿಕೆಗೆ ಕಾಲ ಸನ್ನಿಹೀತವಾಗಿದ್ದು, ಈ ಪ್ರದೇಶದ 7 ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ತುಂಬದೆ ಇರುವ ಸುಮಾರು 5267 ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ಆದೇಶಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಯವ್ಯಯದಲ್ಲಿ ಕೊಟ್ಟ ಮಾತಿನಂತೆ ಶಿಕ್ಷಕರ ನೇಮಕಕ್ಕೆ ಕ್ರಮ ವಹಿಸಿದ್ದಾರೆ.
1ನೇ ತರಗತಿಯಿಂದ 5 ನೇ ತರಗತಿ ವರೆಗಿನ ಅಂದಾಜು 4,424 ಶಿಕ್ಷಕರು (ಪಿಎಸ್‌ಟಿ), 6ನೇ ತರಗತಿಯಿಂದ 8ನೇ ತರಗತಿ ವರೆಗಿನ 78 ಶಿಕ್ಷಕರು ರು (ಜಿಪಿಟಿ), ದೈಹಿಕ ಶಿಕ್ಷಣ ಶಿಕ್ಷಕ 380 ಹುದ್ದೆಗಳು ಸೇರಿದಂತೆ ಒಟ್ಟು 5267 ಹುದ್ದೆಗಳಿಗೆ ನೇಮಕಾತಿ ನಡೆಯಲಿದ್ದೂ. ಈ ನೇಮಕಾತಿಗೆ ಪೂರ್ವ ತಯಾರಿಗಳು ಮುಕ್ತಾಯಗೊಂಡ ನಂತರ ಮತ್ತು ನೇಮಕಾತಿ ಆದೇಶ ನೀಡುವ ಮುಂಚೆ ಈ ಹುದ್ದೆಗಳಿಗೆ ತಗಲುವ ಹಣಕಾಸಿನ ಆಯವ್ಯಯ ಅಂದಾಜು ಸಿದ್ದಪಡಿಸಿ ಪ್ರಸ್ತಾವನೆ ಸಲ್ಲಿಸಲು ಆರ್ಥಿಕ ಇಲಾಖೆಗೆ ಸರ್ಕಾರ ಸೂಚಿಸಿದೆ ಎಂದು ಮೂಲಗಳು ಖಚಿತ ಪಡಿಸಿವೆ.