ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಸ್ವಚ್ಛ ಭಾರತ ಮಿಷನ್–2.0 ತರಬೇತಿ ಶಿಬಿರ

ಸಾರ್ವಜನಿಕರ ಆರೋಗ್ಯ ವೃದ್ಧಿಸಲು ಸ್ವಚ್ಛ ಭಾರತ ಮಿಷನ್–2.0 ತರಬೇತಿ ಶಿಬಿರ
ಗದಗ:ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣದಲ್ಲಿ ಅಕ್ಟೋಬರ್ 10, 2025ರಂದು ಪಟ್ಟಣ ಪಂಚಾಯಿತಿ ನರೇಗಲ್ಲ, ಪೌರಾಡಳಿತ ನಿರ್ದೇಶನಾಲಯ ಗದಗ, ಜಿಲ್ಲಾಡಳಿತ ಗದಗ, ನಗರಾಭಿವೃದ್ಧಿ ಕೋಶ ಹಾಗೂ ಹುಬ್ಬಳ್ಳಿಯ ರೂರಲ್ ಡೆವಲಪ್ಮೆಂಟ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಸ್ವಚ್ಛ ಭಾರತ ಮಿಷನ್–2.0 ಮಾಹಿತಿ ಮತ್ತು ತರಬೇತಿ ಕಾರ್ಯಾಗಾರ ಯಶಸ್ವಿಯಾಗಿ ನೆರವೇರಿತು.
ಕಾರ್ಯಕ್ರಮವನ್ನು ಪಟ್ಟಣ ಪಂಚಾಯಿತಿಯ ಅಧ್ಯಕ್ಷ ಶ್ರೀ ಫಕೀರಪ್ಪ ಮಳ್ಳಿಯವರು ಉದ್ಘಾಟಿಸಿದರು.ಉಪಾಧ್ಯಕ್ಷ ಶ್ರೀ ಕುಮಾರಸ್ವಾಮಿ ಕೋರಧಾನಮಠ ಮಾತನಾಡಿ, “ಸ್ವಚ್ಛ ಭಾರತ ಮಿಷನ್ ನಮ್ಮ ಮನೆಯಿಂದ ಪ್ರಾರಂಭವಾಗಿ ಪ್ರತಿಯೊಂದು ಗ್ರಾಮ ಹಾಗೂ ಪಟ್ಟಣ ಪಂಚಾಯಿತಿಗೆ ವಿಸ್ತರಿಸಬೇಕು. ಸ್ವಚ್ಛತೆ ಎಲ್ಲರ ಜವಾಬ್ದಾರಿ,” ಎಂದು ಹೇಳಿದರು.
ಘನ ತ್ಯಾಜ್ಯ ನಿರ್ವಹಣೆ ತಜ್ಞ ಕೊಟ್ರೇಶ್ ಹುಬ್ಬಳ್ಳಿ ಮಾತನಾಡಿ, “ಘನ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸುವುದು, ಮರುಬಳಕೆ ಹಾಗೂ ವೈಜ್ಞಾನಿಕವಾಗಿ ಸಂಸ್ಕರಿಸುವುದು ಸ್ವಚ್ಛ ಭಾರತ ಮಿಷನ್–2.0 ರ ಪ್ರಮುಖ ಉದ್ದೇಶಗಳು. ಹಸಿ ಕಸದಿಂದ ಕಾಂಪೋಸ್ಟ್ ತಯಾರಿಸಿ ಮಣ್ಣನ್ನು ಸಮೃದ್ಧಿಗೊಳಿಸಬಹುದು,” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಚೇರ್ಮನ್ ಮುತ್ತಪ್ಪ ನುಲ್ಕಿ, ಆರೋಗ್ಯ ನಿರೀಕ್ಷಕರು ಮಲ್ಲೇಶಪ್ಪ ಬರದೂರ,ಶಿವಕುಮಾರ್ ಇಳಕಲ್, ಮುಖ್ಯಾಧಿಕಾರಿ ಮಹೇಶ್ ನಿಡಶೇಶಿ,ಸದಸ್ಯರು ದಾವುದಲಿ ಕುದರಿ, ಈರಪ್ಪ ಜೋಗಿ, ಫಕೀರಪ್ಪ ಬಮಲಾಪೂರ, ಮಲ್ಲಿಕ್ ಸಾಬ್ ರೋಣದ, ಮಲ್ಲಿಕಾರ್ಜುನ ಭೂಮನಗೌಡ್ರ, ಅಕ್ಕಮ್ಮ ಮಣ್ಣೋಡ್ಡರ, ಶ್ರೀಶೈಲಪ್ಪ ಬಂಡಿಹಾಳ, ಕಳಕನಗೌಡ ಪೋಲಿಸ್ ಪಾಟೀಲ್, ಯಲ್ಲಪ್ಪ ಮಣ್ಣೋಡ್ಡರ, ಎಂ.ಎಚ್. ಸೀತಿಮಣಿ, ರಮೇಶ್ ಹಲಗಿ ಸೇರಿದಂತೆ ಪೌರಕಾರ್ಮಿಕರು ಹಾಗೂ ಪಟ್ಟಣ ಪಂಚಾಯಿತಿಯ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಕ್ರಮವನ್ನು ಆರೀಫ್ ಮೀರ್ಜಾ ನಿರ್ವಹಿಸಿದರು.
— ವರದಿ: ಎಚ್.ವಿ. ಈಟಿ, ಗದಗ