ನಿಸರ್ಗ ವಿದ್ಯಾ ನಿಕೇತನ ಶಾಲೆ – ರಜತ ಮಹೋತ್ಸವ ಸಂಪನ್ನ

ನಿಸರ್ಗ ವಿದ್ಯಾ ನಿಕೇತನ ಶಾಲೆ – ರಜತ ಮಹೋತ್ಸವ ಸಂಪನ್ನ

ನಿಸರ್ಗ ವಿದ್ಯಾ ನಿಕೇತನ ಶಾಲೆ – ರಜತ ಮಹೋತ್ಸವ ಸಂಪನ್ನ

ಭಾರತೀಯ ಪರಂಪರಾ ಆಧಾರಿತ ಶಿಕ್ಷಣ ನೀಡುತ್ತಿರುವುದು ಅನುಕರಣೀಯ – ಪ್ರೊ. ರಾಮಚಂದ್ರಭಟ್ ಕೋಟೆಮನೆ

ಭಾರತೀಯ ಶಿಕ್ಷಣ ಪದ್ಧತಿ ಎಂದರೆ ಕೇವಲ ಪಠ್ಯಾಧ್ಯಯನವಲ್ಲ; ಅದು ಮಾನವನ ಸಂಪೂರ್ಣ ವ್ಯಕ್ತಿತ್ವವನ್ನು ರೂಪಿಸುವ ಸಂಸ್ಕಾರಾಧಾರಿತ ಜೀವನ ಶಿಕ್ಷಣವಾಗಿದೆ. ಗುರು–ಶಿಷ್ಯ ಪರಂಪರೆ, ಮೌಲ್ಯಚಿಂತನೆ, ಪ್ರಕೃತಿಯೊಂದಿಗೆ ಸಹಜ ನಂಟು ಮತ್ತು ಆತ್ಮವಿಕಾಸವೇ ಇದರ ಜೀವಾಳ.

ಈ ಶಾಶ್ವತ ಪರಂಪರೆಯನ್ನು ಆಧುನಿಕ ಶಿಕ್ಷಣದೊಂದಿಗೆ ಸಮನ್ವಯಗೊಳಿಸಿ, ಕಳೆದ 25 ವರ್ಷಗಳಿಂದ ಜ್ಞಾನ–ಸಂಸ್ಕಾರ–ಶಿಸ್ತುಗಳ ಸಮಗ್ರ ಶಿಕ್ಷಣವನ್ನು ನೀಡುತ್ತಿರುವ ನಿಸರ್ಗ ವಿದ್ಯಾ ನಿಕೇತನ ಶಾಲೆಯ ರಜತ ಮಹೋತ್ಸವವು ಈ ಶಿಕ್ಷಣ ಯಾತ್ರೆಯ ಮಹತ್ವದ ಮೈಲಿಗಲ್ಲಾಗಿದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿದ ವೇದವಿಜ್ಞಾನ ಗುರುಕುಲದ ಪ್ರೊ. ರಾಮಚಂದ್ರಭಟ್ ಕೋಟೆಮನೆ ಹೇಳಿದರು.

ಶಾಲೆಯ ಪ್ರಾಂಶುಪಾಲ ಡಾ. ಉದಯ್ ರತ್ನ ಕುಮಾರರ ದೂರದೃಷ್ಟಿಯ ನೇತೃತ್ವದಲ್ಲಿ, ರಜತ ಮಹೋತ್ಸವವನ್ನು ಕೇವಲ ಒಂದೇ ದಿನದ ಆಚರಣೆಗೆ ಸೀಮಿತಗೊಳಿಸದೆ, ವರ್ಷವಿಡೀ ವೈವಿಧ್ಯಮಯ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾ, ಸೇವಾ ಹಾಗೂ ಮೌಲ್ಯಾಧಾರಿತ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿರುವುದು ಶಾಲೆಯ ವಿಶೇಷತೆಯಾಗಿದೆ. ಇವು ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ನಾಯಕತ್ವ, ಸಾಮಾಜಿಕ ಹೊಣೆಗಾರಿಕೆ ಹಾಗೂ ಭಾರತೀಯ ಸಂಸ್ಕೃತಿಯ ಅರಿವನ್ನು ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಪ್ರಕೃತಿ ಸಂಪದ – ರಜತ ಮಹೋತ್ಸವ ವಿಶೇಷ ಸಂಚಿಕೆ ಲೋಕಾರ್ಪಣೆ ಮಾಡಿದ ಪ್ರಣವ ಮೀಡಿಯಾ ಹೌಸ್‌ನ ಡಾ. ಗುರುರಾಜ ಪೋಶೆಟ್ಟಿಹಳ್ಳಿ ಹೇಳಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಖ್ಯಾತ ಗಾಯಕ ಶಶಿಧರ ಕೋಟೆ ಮಾತನಾಡಿ, ನಿಸರ್ಗದೊಂದಿಗೆ ಸಹಬಾಳ್ವೆ, ಸಂಸ್ಕೃತಿಯ ಗೌರವ, ರಾಷ್ಟ್ರಭಕ್ತಿ, ಆತ್ಮವಿಶ್ವಾಸ ಹಾಗೂ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಇಂತಹ ಗುರುಗಳ ಆಶೀರ್ವಾದದಲ್ಲಿ ರೂಪುಗೊಳ್ಳುವ ವಿದ್ಯಾರ್ಥಿಗಳೇ ನಾಳೆಯ ಸಂಸ್ಕಾರಯುತ ಹಾಗೂ ಜವಾಬ್ದಾರಿಯುತ ನಾಗರಿಕರಾಗುತ್ತಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಸಾಕ್ಷಿ ಟ್ರಸ್ಟ್‌ನ ಟ್ರಸ್ಟಿ ಡಾ. ಆರ್.ವಿ. ಜಹಾಗೀರದಾರ, ಮುಖ್ಯ ಶಿಕ್ಷಕಿ ಜಯಮಾಲಾ ಬಿ., ಆಡಳಿತಾಧಿಕಾರಿ ಧನುಷ್ ಕುಮಾರ್ ವೇದಪುರಿ ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.