ಪ್ರಣವಾನಂದ ಶ್ರೀಗಳ ಪಾದಯಾತ್ರೆ ಇಂದು ( ಜ 8) ಜೇವರ್ಗಿಗೆ
ಪ್ರಣವಾನಂದ ಶ್ರೀಗಳ ಪಾದಯಾತ್ರೆ ಇಂದು ( ಜ 8) ಜೇವರ್ಗಿಗೆ
ಕಲಬುರಗಿ : ಕರದಾಳು ಶಕ್ತಿ ಪೀಠದಿಂದ ಬೆಂಗಳೂರು ಫ್ರೀಡಂ ಪಾರ್ಕ್ ವರೆಗೆ ಡಾ. ಪ್ರಣಮನಂದ ಶ್ರೀಗಳ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆ ಚಿತಾಪುರ ಶಾಬಾದ್ ದಾಟಿ ಇಂದು (ಜ.8) ಜೇವರ್ಗಿ ಪ್ರವೇಶಿಸಲಿದೆ. ದಾರಿ ಇದ್ದಕ್ಕೂ ವ್ಯಾಪಕ ಜನಬೆಂಬಲ ವ್ಯಕ್ತವಾಗುತ್ತಿದ್ದು ಸರ್ವ ಸಮುದಾಯದವರು ಸ್ವಾಮೀಜಿಯವರ ಪಾದಯಾತ್ರೆಯನ್ನು ಸ್ವಾಗತಿಸಿ ಹಾರಾರ್ಪಣೆ ಮಾಡಿ ಗೌರವ ಸಲ್ಲಿಸುವ ಮಾಡುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ.
ಶಹಾಬಾದ್ ನಿಂದ ಬೆಳಿಗ್ಗೆ ಹೊರಟು ಮರಗೋಳ ಕ್ರಾಸ್, ತೊನಸಳ್ಳಿ, ಜೇವರಗಿ ತಾಲೂಕು ಶಹಾಬಾದ ಕ್ರಾಸ್,ಕಟ್ಟಿಸಂಗಾವಿ ಮಾರ್ಗವಾಗಿ ಸಜ್ಜನ ಕಲ್ಯಾಣ ಮಂಟಪಕ್ಕೆ ಆಗಮಿಸಲಿದೆ.ಸಂಜೆ ಏಳು ಗಂಟೆಗೆ ಬಹಿರಂಗ ಸಭೆ ನಡೆಯಲಿದ್ದು ತೆಲಂಗಾಣದ ಮಾಜಿ ಶ್ರೀನಿವಾಸಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಾಲರಾಜ್ ಗುತ್ತೇದಾರ್, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ನಿತಿನ್ ಗುತ್ತೇದಾರ್ ಯುವ ನಾಯಕರಾದ ಸಂತೋಷ್ ಗುತ್ತೇದಾರ,ಮಹಾದೇವ ಗುತ್ತೇದಾರ್,ವೆಂಕಟೇಶ ಎಂ ಕಡೇಚೂರ್, ಸೇರಿದಂತೆ ಸಮುದಾಯದ ಹಿರಿಯ ಮುಖಂಡರು ಭಾಗವಹಿಸಲಿದ್ದಾರೆ.ಶುಕ್ರವಾರ ಚಿಗರಳ್ಳಿ ಕ್ರಾಸ್,ಆಂದೋಲಮೂಲಕ ಸಾಗಿ,ಚಿಕ್ಕಮುಡಬಾಳದಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕಾಗಿ ಮಾಧ್ಯಮ ಸಂಚಾಲಕರಾದ
ಪ್ರಣವಾನಂದ ಶ್ರೀಗಳ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್
ಡಾ. ಪ್ರಣವಾನಂದ ಶ್ರೀಗಳು ಬೆಂಗಳೂರಿಗೆ ಕೈಗೊಂಡ ಪಾದಯಾತ್ರೆಯಲ್ಲಿ ಈಡಿಗ ಮುಖಂಡರಾದ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ್ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎಚ್ ಆರ್ ಶ್ರೀನಾಥ್ ಗಂಗಾವತಿ ಅವರು ಚಿತ್ತಾಪುರದಲ್ಲಿ ಭೇಟಿ ಮಾಡಿ ಹೆಜ್ಜೆ ಹಾಕಿದರು
ಡಾ.ಸದಾನಂದ ಪೆರ್ಲ ತಿಳಿಸಿದ್ದಾರೆ
