ಕನಕದಾಸರ 'ಕಟ್ಟುವ ಸಂಸ್ಕೃತಿ' ರಾಷ್ಟ್ರಜೀವನದ ಇಂದಿನ ನಮ್ಮ ಆದರ್ಶವಾಗಬೇಕು -- ಮುಕ್ಕಣ್ಣ ಕರಿಗಾರ

ಕನಕದಾಸರ 'ಕಟ್ಟುವ ಸಂಸ್ಕೃತಿ' ರಾಷ್ಟ್ರಜೀವನದ ಇಂದಿನ ನಮ್ಮ ಆದರ್ಶವಾಗಬೇಕು -- ಮುಕ್ಕಣ್ಣ ಕರಿಗಾರ

ಕನಕದಾಸರ 'ಕಟ್ಟುವ ಸಂಸ್ಕೃತಿ' ರಾಷ್ಟ್ರಜೀವನದ ಇಂದಿನ ನಮ್ಮ ಆದರ್ಶವಾಗಬೇಕು -- ಮುಕ್ಕಣ್ಣ ಕರಿಗಾರ

 ಹಾವೇರಿ : ಕನಕದಾಸರು ತಮ್ಮ ಸಾಮಾಜಿಕ ಪ್ರಜ್ಞೆ, ಸಮಾಜೋದ್ಧಾರ ಬದ್ಧತೆಯಿಂದ ದಾಸರಲ್ಲಿ ವಿಶಿಷ್ಟರಾಗಿದ್ದಾರೆ,ದಾಸಸಾಹಿತ್ಯದಲ್ಲಿ ತಮ್ಮದೆ ಅನನ್ಯತೆಯನ್ನು ಎತ್ತಿಹಿಡಿದಿದ್ದಾರೆ.ನಮ್ಮ ದೇಶದಲ್ಲಿ ಎರಡು ವಿಭಿನ್ನ ವಿಚಾರಧಾರೆಗಳು ಪ್ರವಹಿಸುತ್ತಿದ್ದು ಕೆಡಹುವ ಸಂಸ್ಕೃತಿ ಒಂದಾದರೆ ಕಟ್ಟುವ ಸಂಸ್ಕೃತಿ ಮತ್ತೊಂದು.ಕೆಡಹುವ ಸಂಸ್ಕೃತಿಯ ಜನರು ಸಮಾಜ,ರಾಷ್ಟ್ರ ಜೀವನದಲ್ಲಿ ಕುಂದು ಕೊರತೆಗಳನ್ನು ಕಾಣುತ್ತ ಸಮಾಜವೆಂಬ ಸೌಧವನ್ನು ಕೆಡವಲು ಬಯಸುತ್ತಾರೆ. ಕನಕದಾಸರು ಕಟ್ಟುವ ಸಂಸ್ಕೃತಿಗೆ ಸೇರಿದ ಸಮಾಜ ಸುಧಾರಕರಾಗಿದ್ದು ಅವರು ಭಾರತೀಯ ಸಮಾಜದಲ್ಲಿ ಇದ್ದ ಮೌಢ್ಯ,ಕಂದಾಚಾರ ಮೊದಲಾದವುಗಳ ವಿರುದ್ಧ ಜನರಲ್ಲಿ ಅರಿವು ಮೂಡಿಸಿ ಅವರನ್ನು ಸರಿ ದಾರಿಗೆ ತರುವ ಪ್ರಯತ್ನ ಮಾಡಿದರು.ಕನಕದಾಸರ ಕಟ್ಟುವ ಸಂಸ್ಕೃತಿ ನಮ್ಮೆಲ್ಲರ ಆದರ್ಶವಾಗಬೇಕು.ಮನಸ್ಸುಗಳನ್ನು ಒಡೆಯುವವರ ನಡುವೆ ಕನಕದಾಸರ ಮನಸ್ಸುಗಳನ್ನು ಒಂದುಕೂಡಿಸುವ ಸಮನ್ವಯ ಸಂಸ್ಕೃತಿಯನ್ನು ನಾವು ಎತ್ತಿ ಹಿಡಿಯಬೇಕಿದೆ" ಎಂದರು ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಮುಕ್ಕಣ್ಣ ಕರಿಗಾರ ಅವರು.

   ಅವರಿಂದು ಹಾವೇರಿ ಜಿಲ್ಲೆಯ ಕಾಗಿನೆಲೆಯ ಕನಕದಾಸರ ಐಕ್ಯಮಂಟಪದಲ್ಲಿ ನಡೆದ ' ಲೋಕಗುರು ಕನಕದಾಸರ ಕೀರ್ತನೆಗಳ ಅರ್ಥಲೋಕ' ಕಾರ್ಯಕ್ರಮದ ನಾಲ್ಕನೇ ಸಂಚಿಕೆಯ ಕಾರ್ಯಕ್ರಮದಲ್ಲಿ ಕನಕದಾಸರ ' ಎನಗೂ ಆಣೆ ದೇವ ನಿನಗೂ ಆಣೆ' ಕೀರ್ತನೆಯ ಅರ್ಥ ವಿವರಿಸುತ್ತ ಮಾತನಾಡುತ್ತಿದ್ದರು.

   ಪ್ರಾಧಿಕಾರದ ಸಂಶೋಧಕರಾದ ಡಾಕ್ಟರ್ ಜಗನ್ನಾಥ ಗೇನಣ್ಣನವರ್ ಕನಕದಾಸರ ಕೀರ್ತನೆಯನ್ನು ಹಾಡಿದರು.ಪ್ರಾಧಿಕಾರದ ಲೆಕ್ಕಾಧೀಕ್ಷಕರಾದ ಸಿ ಬಿ ಸಪ್ಪಿನ್ ಅವರ ಪ್ರಾರ್ಥನೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಪರಮೇಶ ಧಾರವಾಡ ಸ್ವಾಗತಿಸಿದರೆ ಪ್ರಕಾಶ ಬಾಡ ವಂದಿಸಿದರು.ಸಂತೋಷ ಬಾಡ ಕಾರ್ಯಕ್ರಮ ನಿರ್ವಹಿಸಿದರು.ಪ್ರವೀಣ ಮತ್ತು ಪ್ರಕಾಶ ಕಾಗಿನೆಲೆ ಇಬ್ಬರು ಇಂದಿನ ಕಾರ್ಯಕ್ರಮದ ಸಿಹಿ ತಿಂಡಿ ವ್ಯವಸ್ಥೆ ಮಾಡಿದ್ದರು.ಪ್ರಾಧಿಕಾರದ ಫೋಟೋ ಗ್ರಾಫರ್ ವಿಜಯ್ ಬ್ಯಾಡಗಿ ವಿಡಿಯೋ ರೆಕಾರ್ಡ್ ಮಾಡಿದರು.