ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿದ ಸಿದ್ದರಾಮಯ್ಯ
ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿದ ಸಿದ್ದರಾಮಯ್ಯ
ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟ ಮತ್ತು ಅಲೆಮಾರಿ ಮಹಾ ಒಕ್ಕೂಟದ ವತಿಯಿಂದ. ಭಾಗ್ಯಗಳ ಸರದಾರ. ಗ್ಯಾರೆಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿರುವ ಮಾನ್ಯ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಸಿದ್ದರಾಮಯ್ಯ ಸಾಹೇಬರು ಕರ್ನಾಟಕ ಇತಿಹಾಸದಲ್ಲಿ ಒಂದು ಹೊಸ ಚಾಪನ್ನು ಮೂಡಿಸಿದ್ದಾರೆ. ರಾಜ್ಯದಲ್ಲಿ ಅತಿ ಹೆಚ್ಚು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರವನ್ನು ನಡೆಸಿ ದಾಖಲೆ ರಾಮಯ್ಯ ರಾಗಿ ಹೊರಹಮ್ಮಿದ್ದಾರೆ. ಅವರು ತಮ್ಮ ಜೀವನದುದ್ದಕ್ಕೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್. ಜಗಜ್ಯೋತಿ ಬಸವೇಶ್ವರರ ಸಮ ಸಮಾಜದ ಸಿದ್ಧಾಂತದ ಪರಿಕಲ್ಪನೆಯನ್ನು ಇಟ್ಟುಕೊಂಡು ರಾಜ್ಯದ ಎಲ್ಲ ಜಾತಿ ಜನಾಂಗದವರಿಗೆ ಸಾಮಾಜಿಕ ನ್ಯಾಯ ಸಿಗಬೇಕೆಂದು ಹೋರಾಟಗಳನ್ನು ಮಾಡುತ್ತಾ ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ. ಮೊದಲಬಾರಿ ಮುಖ್ಯಮಂತ್ರಿಯಾದ ಸಂದರ್ಭದಲ್ಲಿ ಈ ರಾಜ್ಯದ ಜನರು ಹಸಿವಿನಿಂದ ಬಳಲಬಾರದೆಂದು ಅನ್ನ ಭಾಗ್ಯ ಯೋಜನೆ. ಖಾಸಗಿ ಶಾಲೆಯ ಮಕ್ಕಳನ್ನು ನೋಡಿ ಸರ್ಕಾರಿ ಶಾಲೆಯ ಮಕ್ಕಳಲ್ಲಿ ತಾರತಮ್ಯ ನೀತಿ ಬರಬಾರದೆಂದು ಅವರಿಗೆ ಶೂ ಭಾಗ್ಯವನ್ನು ಮಕ್ಕಳು ಪೌಷ್ಟಿಕತೆಯಿಂದ ಇರಲು ಕ್ಷೀರಭಾಗ್ಯವನ್ನು. ಕೃಷಿಭಾಗ್ಯ ಶಾದಿ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ಈ ನಾಡಿಗೆ ನೀಡಿದ್ದಾರೆ. ನಂತರ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿ ಆಗಿ ಪಂಚ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತಂದು ರಾಜ್ಯದಲ್ಲಿರುವ ಎಲ್ಲ ಜಾತಿ ಜನಾಂಗದವರಿಗೆ ಅನುಕೂಲವನ್ನು ಮಾಡಿಕೊಟ್ಟಿದ್ದಾರೆ. ವಿಶೇಷವಾಗಿ ರಾಜ್ಯದಲ್ಲಿರುವ ಎಲ್ಲ ಮಹಿಳೆಯರಿಗೆ ವಿಶಿಷ್ಟ ಕಾರ್ಯಕ್ರಮಗಳನ್ನು ಜಾರಿಗೆ ತಂದು ಅವರ ಬಾಳಿಗೆ ಬೆಳಕಾಗಿದ್ದಾರೆ. ರಾಜ್ಯದ ಶ್ರಮಿಕ ವರ್ಗದವರಿಗೆ. ಕೂಲಿಕಾರರಿಗೆ ನೇಕಾರರಿಗೆ ದಲಿತರಿಗೆ ಅಲ್ಪ ಸಂಖ್ಯಾತರಿಗೆ ಹಿಂದುಳಿದವರಿಗೆ ಈ ಯೋಜನೆಗಳಿಂದ ಒಂದು ದೊಡ್ಡ ಆನೆಬಲ ಬಂದಂತಾಗಿದೆ. ಬೆಲೆ ಏರಿಕೆ ನೀತಿಯಿಂದ ರಾಜ್ಯದಿಂದ ಗುಳೆ ಹೋಗುವುದನ್ನು ತಪ್ಪಿಸಲಾಗಿದೆ ಅವರಿಗೆ ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡಿ ನೆಮ್ಮದಿಯ ಬದುಕನ್ನು ಸಾಗಿಸಲು ಮಾನ್ಯ ಸಿದ್ದರಾಮಯ್ಯನವರು ಸರಕಾರದಿಂದ ಅನುಕೂಲ ಮಾಡಿಕೊಟ್ಟಿದ್ದಾರೆ. ಮತ್ತು ಕನ್ನಡ ನಾಡು ನುಡಿ ಜಲ ಅತ್ಯಂತ ಪ್ರೀತಿಯಿಂದ ಕಂಡು ಕರ್ನಾಟಕದ ಗೌರವವನ್ನು ಹೆಚ್ಚಿಸಿದ್ದಾರೆ. ಎಲ್ಲ ಕಾರಣಕ್ಕಾಗಿ ಇತಿಹಾಸದಲ್ಲಿ ಅವರ ಹೆಸರು ಸುವರ್ಣಾಕ್ಷರಗಳಿಂದ ಬರೆಯಲ್ಪಡುವಂತಾಗಿದೆ. ಕರ್ನಾಟಕ ರಾಜ್ಯದ ಇಲ್ಲಿಯವರೆಗೆ ಆಗಿರುವ ಎಲ್ಲ ಮುಖ್ಯಮಂತ್ರಿಗಳ ಅವಧಿಗಳು ಮೀರಿ ಇಂದು ದಾಖಲೆ ರಾಮಯ್ಯ ಎನಿಸಿಕೊಂಡಿದ್ದಾರೆ ಇವರಿಗೆ ರಾಜ್ಯದಲ್ಲಿ ಹಲವಾರು ಹೆಸರುಗಳಿಂದ ಕರೆಯಲ್ಪಡಲಾಗುತ್ತಿದೆ ಅನ್ನ ರಾಮಯ್ಯ ಗ್ಯಾರಂಟಿ ರಾಮಯ್ಯ ಭಾಗ್ಯಗಳ ರಾಮಯ್ಯ ಹೀಗೆ ಹಲವು ಹೆಸರುಗಳಿಂದ ಜನಾನುರಾಗಿ ಆಗಿದ್ದಾರೆ. ಅತಿ ಹೆಚ್ಚು ದೀರ್ಘಾವಧಿ ಸಿಎಂ ಆಗಿ ಹೊರಹೊಮ್ಮುತ್ತಿರುವ ಈ ಸಂದರ್ಭದಲ್ಲಿ ಇಂದು ಕಲ್ಬುರ್ಗಿ ನಗರದಲ್ಲಿ ಅಂಬೇಡ್ಕರ್. ಬಸವೇಶ್ವರ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರವರ ಮೂರ್ತಿಗಳಿಗೆ ಗೌರವ ಪೂರ್ವಕ ಮಾಲಾರ್ಪಣೆ ಮತ್ತು ಪೂಜಾ ಕಾರ್ಯಕ್ರಮವನ್ನು ಮಹಾಂತೇಶ್ ಎಸ್ ಕೌಲಗಿ ವಕೀಲರು ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರು ಇವರ ನೇತೃತ್ವದಲ್ಲಿ ಮಾಡಲಾಯಿತು ಮತ್ತು ವಿಶೇಷವಾಗಿ ಕಲಬುರ್ಗಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಬಡ ರೋಗಿಗಳಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು. ಈ ಮೂಲಕ ಮಾನ್ಯ ಸಿದ್ದರಾಮಯ್ಯ ಸಾಹೇಬರಿಗೆ ಗೌರವ ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಲಾಯಿತು. ಸಂದರ್ಭದಲ್ಲಿ ಮುಖಂಡರುಗಳಾದ ಬಸಯ್ಯ ಗುತ್ತೇದಾರ್. ಭೀಮಶ ಕನ್ನ. ಮಲ್ಲಿಕಾರ್ಜುನ್ ಪೂಜಾರಿ. ಸಾಯ್ಬಣ್ಣ ಹೇಳವರ್. ಚಂದ್ರಶೇಖರ್ ಗೊಂದಳಿ. ಚಂದು ಪವಾರ್. ಕುಮಾರ್ ಯಾದವ್. ಲಕ್ಷ್ಮಣ್ ಪೂಜಾರಿ ಅರುಣ ಕುಮಾರ್ ಕಟಬು. ಸ್ವಾಮಿ ಬುರುಗುರೆ. ಈರಣ್ಣ ಬಡಿಗೇರ್. ಕೆ ಪ್ರಧಾನಿ. ಅಂಬರಾಯ ಪೂಜಾರಿ. ಅಂಬರಾಯ ಬೋಳೆವಾಡ ನಾಗಣ್ಣ ಕೆಸರಟಿಗಿ ಅನುಪಮಾ ಸುಳೇಕರ್ ಸಾವಿತ್ರಿ ಕೊರಳಿ. ಮಹಾನಗರ ಪಾಲಿಕೆ ಸದಸ್ಯರು ನಿಂಗಮ್ಮ ಕಟ್ಟಿಮನಿ. ಅಮೋಘಸಿದ್ಧ .ಶ್ರೀಮಂತ. ಶರಣಪ್ಪ. ವಿಜಯಕುಮಾರ್. ಶರಣಪ್ಪ ಕೆಸರಟಗಿ ಹಲವಾರು ಮುಖಂಡರು ಭಾಗವಹಿಸಿ ಮಾನ ಸಿದ್ದರಾಮಯ್ಯ ಸಿಹಿ ಹಂಚಿಕೊಂಡು ಸಂಭ್ರಮಿಸಲಾಯಿತು.
