ಮಹಿಳಾ ಸಬಲಿಕರಣದ ಸಂಕೇತ – "ಮಾತೃ ಶಕ್ತಿ" ವಿಶೇಷ ಮಹಿಳಾ ಜಾಥಾ ಉಮೇಶ ಎಸ್. ಪಾಳಾ

ಮಹಿಳಾ ಸಬಲಿಕರಣದ ಸಂಕೇತ – "ಮಾತೃ ಶಕ್ತಿ" ವಿಶೇಷ ಮಹಿಳಾ ಜಾಥಾ  ಉಮೇಶ ಎಸ್. ಪಾಳಾ

ಮಹಿಳಾ ಸಬಲಿಕರಣದ ಸಂಕೇತ – "ಮಾತೃ ಶಕ್ತಿ" ವಿಶೇಷ ಮಹಿಳಾ ಜಾಥಾ ಉಮೇಶ ಎಸ್. ಪಾಳಾ

ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಅಂಗವಾಗಿ ಕಲಬುರಗಿಯಲ್ಲಿ ವಿಶೇಷ ಕಾರ್ಯಕ್ರಮ

ಕಲಬುರಗಿ: ಮಾನವತೆಯ ಮಹಾನ್ ದೂತರಾದ ಡಾ. ಬಾಬಾ ಸಾಹೇಬ ಭಿಮರಾವ ಅಂಬೇಡ್ಕರ್ ರವರ 134ನೇ ಜಯಂತಿಯ ಅಂಗವಾಗಿ, ಅಂಬೇಡ್ಕರ್ ರವರು ಮಹಿಳೆಯರಿಗೆ ನೀಡಿರುವ ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರುವ ಉದ್ದೇಶದಿಂದ "ಮಾತೃ ಶಕ್ತಿ" ಎಂಬ ವಿಶೇಷ ಮಹಿಳಾ ಜಾಥಾವನ್ನು ದಿನಾಂಕ 14.04.2025ರಂದು ಬೆಳಿಗ್ಗೆ 9.30 ಕ್ಕೆ ಹಮ್ಮಿಕೊಳ್ಳಲಾಗಿದೆ.

ಈ ಜಾಥಾ ಕಲಬುರಗಿ ನಗರದ ಸರ್ದಾರ್ ವಲ್ಲಭಭಾಯಿ ಪಟೇಲ್ ವೃತ್ತದಿಂದ ಪ್ರಾರಂಭವಾಗಿ ಜಗತ್‌ನಲ್ಲಿರುವ ಡಾ. ಅಂಬೇಡ್ಕರ್ ಪ್ರತಿಮೆವರೆಗೆ ಸಾಗಲಿದೆ. ಮಹಿಳಾ ಸಬಲಿಕರಣವು ರಾಷ್ಟ್ರ ಜಾಗೃತಿಗೆ ಕಾರಣವಾಗಬಲ್ಲದು ಎಂಬ ಧ್ಯೇಯವಾಕ್ಯವನ್ನು ಮೆರೆದಿರುವ ಈ ಜಾಥಾ, ಸಮಾಜದಲ್ಲಿ ಮಹಿಳೆಯರ ಪಾತ್ರವನ್ನು ಗಮನ ಸೆಳೆಯುವಂತಿದೆ.

ಈ ವಿಶೇಷ ಕಾರ್ಯಕ್ರಮವನ್ನು ಡಾ. ಬಿ.ಆರ್. ಅಂಬೇಡ್ಕರ್ ಇಂಟಿಗ್ರೇಟೆಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಆಯೋಜಿಸಿದ್ದು, ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉಮೇಶ ಎಸ್. ಪಾಳಾ ಅವರು ಮಾತನಾಡುತ್ತಾ, "ಈ ಜಾಥಾ ಮಹಿಳಾ ಸಂಘಟನೆಗಳು ಮತ್ತು ಊರಿನ ಸಮುದಾಯದ ಹೆಣ್ಣುಮಕ್ಕಳ ಸಹಭಾಗಿತ್ವದಿಂದ ಮತ್ತಷ್ಟು ಶಕ್ತಿಯಾಗಲಿದೆ" ಎಂದು ಹೇಳಿದರು.

ಸಾರ್ವಜನಿಕರ ವಿಶೇಷ ಸಹಕಾರ ಮತ್ತು ಮಹಿಳೆಯರ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಿಕೆಯನ್ನು ಆಯೋಜಕರು ಕೋರಿದ್ದಾರೆ.