ಸೈನ್ಯದ ಕನ್ನಡ ಉತ್ಸವ
ಸೈನ್ಯದ ಕನ್ನಡ ಉತ್ಸವ
ಕಲಬುರಗಿ: ನಗರದ ಸಿದ್ದಾರ್ಥ ವೃತ್ತ (ಗೋವಾ ಹೊಟೇಲ್) ಟ್ಯಾಂಕ್ ಬಂಡ್ ಮುಖ್ಯ ರಸ್ತೆಯ ಆವರಣ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮಹಾಮಂಟಪದಲ್ಲಿ ಕನ್ನಡ ಸೈನ್ಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಸಯುಕ್ತಾಶ್ರಯದಲ್ಲಿ ೪ನೇ ದಿನದ ಕನ್ನಡ ಸೈನ್ಯದ ಕನ್ನಡ ಉತ್ಸವ ಕಾರ್ಯಕ್ರಮವನ್ನು ಕೆಕೆಆರ್‌ಟಿಸಿ ಮಾಜಿ ಅಧ್ಯಕ್ಷ ಇಲಿಯಾಸ್ ಸೇಠ್ ಭಾಗವಾನ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸುಜಾತಾ ಜಂಗಮಶೆಟ್ಟಿ, ನ್ಯಾಯವಾದಿ ಹಾಗೂ ಕನ್ನಡ ಸೈನ್ಯಯ ಸಂಸ್ಥಾಪಕ ಅಧ್ಯಕ್ಷ ಸೋಮನಾಥ ಎಲ್ ಕಟ್ಟಿಮನಿ, ಕೆ. ಎ.ಕಲ್ಬುರ್ಗಿ, ಪರ್ತಕರ್ತ ಬಸವರಾಜ್ ಚಿನಿವಾರ, ಎಂ.ಇ. ಮೋಹನ್, ಡಾ.ವೇಣುಗೋಪಾಲ್ ದೇಶಪಾಂಡೆ, ವಿಜಯಕುಮಾರ್ ಬೇಲೂರ, ಶಿವಾನಂದ ಅಣಜಿಗಿ, ನಾಗರಾಜ್ ಕಟ್ಟಿಮನಿ, ಶ್ರೀಧರ್ ಕಟ್ಟಿಮನಿ, ಅಭಿಷೇಕ ಹೋದಲ್ಲೂರ, ರವಿಚಂದ್ರ ಕೋರೆ, ಜೂನಿಯರ್ ವಿಷ್ಣುವರ್ಧನ್ ಅವರಂದ ಸಾಂಸ್ಕೃತಿಕ ನೃತ್ಯ ಜನಪದ ನೃತ್ಯ ಚಿತ್ರಗೀತೆಗಳ ನೃತ್ಯ ಹಾಗೂ ವಿಜಯಲಕ್ಷ್ಮಿ ಮಂಗಳೂರ ಅವರಿಂದ ಶಾಸ್ತ್ರೀಯ ನೃತ್ಯ. ಹಾಸ್ಯ ಚಕ್ರವರ್ತಿ ಗುಂಡಣ್ಣ ಡಿಗ್ಗಿವರಿಂದ ನಗೆ ಹಬ್ಬ, ಡಾ. ರಾಜಶೇಖರ್ ಎಲ್ ಕಟ್ಟಿಮನಿ ಅವರು ಕಾರ್ಯಕ್ರಮ ನಿರೂಪಿಸಿದರು. ನೂರಾರು ಸಂಖ್ಯೆಯಲ್ಲಿ ಕನ್ನಡ ಅಭಿಮಾನಿಗಳು ಕನ್ನಡ ಸೈನ್ಯ ಕಾರ್ಯಕರ್ತರು, ಸಾರ್ವಜನಿಕರು ಭಾಗವಹಿಸಿದರು.