189 ನೇ ಬಸವ ಜ್ಯೋತಿ ಕಾರ್ಯಕ್ರಮ:-ಶರಣರ ಮನೆ ಮನೆಗಳಲ್ಲಿ ನಿರಂತರ ಬೆಳಗಲಿ ಬಸವ ಜ್ಯೋತಿ ಶಿವಾನಂದ ಹೈಬತಪೂರೆ.
189 ನೇ ಬಸವ ಜ್ಯೋತಿ ಕಾರ್ಯಕ್ರಮ:-ಶರಣರ ಮನೆ ಮನೆಗಳಲ್ಲಿ ನಿರಂತರ ಬೆಳಗಲಿ ಬಸವ ಜ್ಯೋತಿ ಶಿವಾನಂದ ಹೈಬತಪೂರೆ.
ಕಮಲನಗರ ತಾಲೂಕಿನ ಮುಧೋಳ (ಬಿ) ಗ್ರಾಮದಲ್ಲಿ ಬಸವ ಗಂಗಾ ಆಕ್ವಾ ಪ್ಯಾಕೇಜ್ ಡ್ರಿಂಕಿಂಗ್ ವಾಟರ ನ 4 ನೇ ವಾರ್ಷಿಕೋತ್ಸವ ಮತ್ತು ಶರಣ ನಾಗಯ್ಯ ಸ್ವಾಮಿ ಅವರ 54 ನೇ ಜನ್ಮ ದಿನಾಚರಣೆ ಹಾಗೂ ವಿಶೇಷ ಸಾಧನೆ ಮಾಡಿದ ಸಾಧಕರ ಸನ್ಮಾನ ಕಾರ್ಯಕ್ರಮವನ್ನು ನ್ಯಾಯವಾದಿಗಳು ಬಸವ ಕಥಾ ಪ್ರವಚನಕಾರರು ಆದ ಶರಣ ಶಿವಾನಂದ ಹೈಬತಪೂರೆ ಅವರು ಬಸವ ಜ್ಯೋತಿ ಬೆಳಗುವುದರೊಂದಿಗೆ ಉದ್ಘಾಟಿಸಿದರು. 12 ನೇ ಶತಮಾನದಲ್ಲಿ ಬಸವಣ್ಣನವರು ಮತ್ತು ಅವರ ಜೊತೆಗಿದ್ದ ಎಲ್ಲಾ ಶರಣ ಶರಣಿಯರ ಬದುಕು ಸರಳತೆಯಿಂದ ಕೂಡಿದ ಬದುಕು ಅವರದಾಗಿತ್ತು.ಕಾಯಕ ತತ್ವವನ್ನು ಮೈಗೂಡಿಸಿಕೊಂಡು ಸಮಾನತೆಯಿಂದ ಬಾಳುತ್ತಿದ್ದರು.ಬಸವಣ್ಣ ಮತ್ತು ಅವರ ಒಡನಾಡಿಗಳಾಗಿದ್ದ ಸಕಲ ಶರಣರ-ಶರಣೆಯರು ಪ್ರೇಮದ ಬೆಸುಗೆಯನ್ನು ಎಲ್ಲರೊಡನೆ ಬೆಸೆಯುತ್ತಿದ್ದರು.ಆಡಂಬರದ ಪೂಜೆ-, ಪುನಸ್ಕಾರಗಳು ಬಿಟ್ಟು ವೈಜ್ಞಾನಿಕ ತಳಹದಿಯ ಮೇಲಿರುವ ಲಿಂಗಪೂಜೆಯನ್ನು ಮಾಡುವಂತೆ ತಿಳಿಸಿದರು.
ಜಗಕ್ಕೆ ಸಮಾನತೆ ತತ್ವ ಸಾರಿದ ಶರಣರು ಬಸವ ಪ್ರಭು ಸ್ವಾಮೀಜಿ ಕಲ್ಯಾಣ ಮಹಾಮನೆ ಮಹಾಮಠ ಗುಣತೀರ್ಥವಾಡಿ ಬಸವಕಲ್ಯಾಣ ಧರ್ಮ ಸಭೆಯ ದಿವ್ಯ ನೇತೃತ್ವವಹಿಸಿ ಆಶಿರ್ವಚನ ನೀಡಿದ ಶ್ರೀಗಳು. ಆಧುನಿಕ ಕಾಲದಲ್ಲಿ ಟಿ.ವಿ.ಮೊಬೈಲ್ಗಳಿಂದ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಸಂಬಂಧಗಳು ಹಾಳಾಗುತ್ತಿವೆ, ಪರಸ್ಪರರಲ್ಲಿ ಸಂವಹನ ಕಡಿಮೆ ಆಗ್ತಾ ಇದೆ. ಇದರಿಂದಾಗಿ ಸಮಾಜದ ಸ್ವಾಸ್ಥ್ಯ ಹದಗೆಡುತದೆ.ಅದಕ್ಕಾಗಿ ದಿನಾಲೂ ಲಿಂಗ ಪೂಜೆ, ವಾರಕ್ಕೊಮ್ಮೆ ಸಾಮೂಹಿಕ ಪೂಜೆ, ತಿಂಗಳಿಗೊಮ್ಮೆ ಬಸವ ಜ್ಯೋತಿ ಕಾರ್ಯಕ್ರಮವನ್ನು ನಡೆಸಬೇಕು ಎಂದು ತಿಳಿಸಿದರು.
ಈ ನಿಟ್ಟಿನಲ್ಲಿ ತಮ್ಮ ಜನ್ಮ ದಿನ ಮತ್ತು ಬಸವ ಗಂಗಾ ಆಕ್ವಾ ಪ್ಯಾಕೇಜ್ ಡ್ರಿಂಕಿಂಗ್ ವಾಟರ್ ನ 4 ವಾರ್ಷಿಕೋತ್ಸವದ ಅಂಗವಾಗಿ ಹುಟ್ಟು ಹಬ್ಬವನ್ನು ದೊಡ್ಡ ದೊಡ್ಡ ಹೋಟೆಲಗೆ ಹೋಗಿ ಆಚರಿಸಿಕೊಳದ್ದೇ,ಸರಳವಾಗಿ ಸಾಮಾಜಿಕವಾಗಿ ಬಸವ ತತ್ವದೊಂದಿಗೆ ಬಸವ ಜ್ಯೋತಿ ಕಾರ್ಯಕ್ರಮ ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಮಾಡುವುದರೊಂದಿಗೆ ತಮ್ಮ ಜನ್ಮ ದಿನವನ್ನು ವಿಶೇಷವಾಗಿ ಆಯೋಜನೆ ಮಾಡಿರುವುದು ಶ್ಲಾಘನೀಯ ಮತ್ತು ಅನುಕರಣೀಯ ಕಾರ್ಯಕ್ರಮವಾಗಿದೆ ಎಂದು ಶ್ರೀಗಳು ತಮ್ಮ ಆಶೀರ್ವಚನದಲ್ಲಿ ನಾಗಯ್ಯ ಸ್ವಾಮಿ ಅವರಿಗೆ ಜನ್ಮ ದಿನದ ಶುಭಾಶಯಗಳು ತಿಳಿಸುತ್ತಾ ಹೇಳಿದರು.ನಾಗಯ್ಯಾ ಸ್ವಾಮಿ ಅವರ ಜ್ಞಾನ ದಾಸೋಹ, ಧಾರ್ಮಿಕ ದಾಸೋಹ ಕಾರ್ಯ ನಿಜಕ್ಕೂ ಅನುಕರಣೀಯವಾಗಿದೆ ಎಂದು ತಿಳಿಸಿದರು.
ಬಸವಾಭಿಮಾನಿಗಳು ಶಿವಕುಮಾರ ಪಾಂಚಾಳ ಮತ್ತು ಅವರ ತಂಡದವರಿಂದ ವಚನ ಗಾಯನವನ್ನು ಕೇಳಿ ಆನಂದಿಸಿದರು.
ಮಹಾದೇವಿ ಸ್ವಾಮಿ ನಾಗಯ್ಯ ಸ್ವಾಮಿ ದಂಪತಿಗಳು, ಪರಿವಾರದವರು ಸೇರಿ ಬಸವ ಪೂಜೆ ನೆರವೇರಿಸಿದರು.
ವಿಶೇಷ ಸಾಧಕರಿಗೆ ಸನ್ಮಾನ
ಪತ್ರಕರ್ತರಾದ ಸಂಗಮೇಶ ಮುರ್ಕೆ ಶರಣಪ್ಪಾ ಚಿಟ್ಮೆ,ಸಮೂಹ ಸಂಪನ್ಮೂಲ ವ್ಯಕ್ತಿಯಾದ ಮಾದಪ್ಪಾ ಮಡಿವಾಳ, ಶಿಕ್ಷಕರಾದ ಬಾಲಾಜಿ ಅಮರವಾಡಿ, ಮಲ್ಲಿಕಾರ್ಜುನ ಟಂಕಸಾಲೆ,ನಿವೃತ ಮುಖ್ಯಗುರುಗಳಾದ ಕಲ್ಲಪ್ಪಾ ಬಾವಗೆ ಹಾಗೂ ಸಂದೀಪ ದುಡುಕನಾಳೆ ಕೃಷಿ ಇಲಾಖೆ ಕರ್ನಾಟಕದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆ ಮತ್ತು ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಲಾಯಿತು.
ಗ್ರಾಮದ ಹಿರಿಯ ಜೀವಿಗಳಾದ ಅಮೃತಾರಾವ ವಟಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಾಲಾಜಿ ಹಲ್ಬರ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಶಿವಶೆರಣಪ್ಪಾ ವಲ್ಲೆಪೂರೆ ರಾಷ್ಟ್ರೀಯ ಬಸವದಳದ ಅಧ್ಯಕ್ಷರು ಔರಾದ
ಸಂಜೀವಕುಮಾರ ಜುಮ್ಮಾ ಬಸವ ಬಳಗದ ಅಧ್ಯಕ್ಷರು ಔರಾದ
ಔರಾದ ತಾಲೂಕಿನ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ಮುಕ್ತೆದಾರ,ವಿಶೇಷ ಸನ್ಮಾನಕ್ಕೆ ಭಾಜನರಾದ ಸನ್ಮಾನಿತರು ಹಾಗೂ ಬಸವರಾಜ್ ಬಿರಾದರ್, ಅಧ್ಯಕ್ಷರು ಅನುಭವ ಮಂಟಪ ಸಂತಪೂರ, ಧನರಾಜ ಗುಡ್ಡ, ಸಂಗಯ್ಯ ಸ್ವಾಮಿ,ಕಲ್ಲಪ್ಪ ದೇಶಮುಖ , ಅರವಿಂದ ವಟಗೆ ಸತೀಶ ಹರಡಗೆ ಕಲ್ಯಾಣ ಹಾಗೂ ಗುರುಬಸವೇಶ್ವರ ಅನುಭವ ಮಂಟಪದ ಪದಾಧಿಕಾರಿಗಳು ಮುಂತಾದವರು ವೇದಿಕೆ ಮೇಲೆ ಉಪಸ್ಥಿತರಿದ್ದರು
ಮುಧೋಳ, ತೋರ್ಣಾ,ಕಮಲನಗರ, ಕುಶ್ನುರ ಔರಾದ ಬೀದರ ಬಾಲ್ಕಿ ಸುತ್ತಮುತ್ತಲಿನ ಬಸವಾಭಿಮಾನಿಗಳು ಬಸವ ಚಿಂತಕರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ನಾಗನಾಥ ಶಂಕು ರವರು ನಿರೂಪಿಸಿದರು.,ಬಸವರಾಜ ಖೆಳಗೆ ರವರು ಸ್ವಾಗತಿಸಿದರು.,ಶಿವಕುಮಾರ ಕುಂಬಾರ ರವರು ವಂದಿಸಿದರು.