ರೈತರೊಂದಿಗೆ ಎಳ್ಳಮವಾಸ್ಯೆ ಆಚರಿಸಿದ ಶಾಸಕ ಪ್ರಭು‌ ಚವ್ಹಾಣ

ರೈತರೊಂದಿಗೆ ಎಳ್ಳಮವಾಸ್ಯೆ ಆಚರಿಸಿದ ಶಾಸಕ ಪ್ರಭು‌ ಚವ್ಹಾಣ

ರೈತರೊಂದಿಗೆ ಎಳ್ಳಮವಾಸ್ಯೆ ಆಚರಿಸಿದ ಶಾಸಕ ಪ್ರಭು‌ ಚವ್ಹಾಣ

ಕಮಲನಗರ:ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು.ಬಿ ಚವ್ಹಾಣ ಅವರು ರೈತರ ಹಬ್ಬವಾದ ಎಳ್ಳಮವಾಸ್ಯೆಯನ್ನು ರೈತರೊಂದಿಗೆ ಸಾಂಪ್ರದಾಯಿಕ ಆಹಾರವಾದ ಜೋಳದ ರೊಟ್ಟಿ, ಸಜ್ಜೆ ರೊಟ್ಟಿ, ಭಜ್ಜಿಪಲ್ಯೆ, ಶೇಂಗಾ-ಎಳ್ಳಿನ ಹೋಳಿಗೆಯನ್ನು ಸೇವಿಸುವ ಮೂಲಕ ಸರಳವಾಗಿ ಆಚರಿಸಿದರು. ಈ ವೇಳೆ ಉಯ್ಯಾಲೆಯಾಡಿ ಸಂಭ್ರಮಿಸಿದರು.

ಬೆಳಗ್ಗೆ ಸ್ವ-ಗ್ರಾಮ ಘಮಸುಬಾಯಿ ತಾಂಡಾದಲ್ಲಿನ ತಮ್ಮ ಕೃಷಿ ಭೂಮಿಗೆ ತೆರಳಿ ಪೂಜೆ‌ ನೆರವೇರಿಸಿ, ಚರಗ ಚಲ್ಲುವ ಮೂಲಕ ಭೂತಾಯಿಗೆ ನಮನ ಸಲ್ಲಿಸಿ ಅನ್ನದಾತರ ಸುಖ, ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. 

ಎಳ್ಳಮವಾಸ್ಯೆ ನಮ್ಮ ಭಾಗದ ರೈತರು ಆಚರಿಸುವ ಪ್ರಮುಖ ಹಬ್ಬವಾಗಿದೆ. ಭೂತಾಯಿಯನ್ನು ಪೂಜಿಸಿ ಹೊಲದಲ್ಲಿ ಕುಳಿತು ಊಟ ಮಾಡುವ ಖುಷಿಯೇ ಬೇರೆ. ಪ್ರತಿ ವರ್ಷದಂತೆ ರೈತ ಮುಖಂಡರ ಕೃಷಿ ಜಮೀನುಗಳಿಗೆ ಭೇಟಿ ನೀಡಿ ರೈತರೊಂದಿಗೆ ಹಬ್ಬ ಆಚರಿಸುತ್ತಿದ್ದೇನೆ ಎಂದು ಹಬ್ಬದ ಸಂಭ್ರಮವನ್ನು ಹಂಚಿಕೊಂಡರು.

ನಂತರ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ರೈತರೊಂದಿಗೆ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡರು. ದಾಬಕಾದಲ್ಲಿ ಧನಾಜಿ ಜಾಧವ, ಮಾಳೆಗಾಂವನಲ್ಲಿ ಅನೀಲ‌ ದೇಶಮುಖ, ಹಕ್ಯಾಳದಲ್ಲಿ ಕಿರಣ ಪಾಟೀಲ, ಕಮಲನಗರ ಶಿವಕುಮಾರ ಜುಲ್ಫೆ, ಪಪ್ಪು ವಿಠಲ ಬಿರಾದಾರ, ಹೊಳಸಮುದ್ರ ಮಾರುತಿ ಅಳಂದೆ, ಹಲ್ಲಾಳಿ ಪ್ರವೀಣ ಕಾರಬಾರಿ, ಠಾಣಾಕುಶನೂರ ಧನರಾಜ ವಡೆಯರ್, ಅನೀಲ ಬೋಚರೆ, ಮುಧೋಳ ಉದಯ ಸೋಲಾಪೂರೆ ಹಾಗೂ ಡೊಂಗರಗಾಂವ ಗ್ರಾಮದ ಗೋವಿಂದ ಪಾಟೀಲ ಅವರ ಹೊಲಗಳಿಗೆ ಭೇಟಿ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ಇದು ಭೂಮಾತೆ ಹಾಗೂ ರೈತರ ಮಹತ್ವವನ್ನು ಸಾರುವ ಹಬ್ಬ. ನಮ್ಮ ಭಾಗದ ರೈತರು ಅತ್ಯಂತ ಸಂಭ್ರಮದಿಂದ ಆಚರಿಸುತ್ತಾರೆ. ಸಾಂಪ್ರದಾಯಿಕ ಅಡುಗೆ ತಯಾರಿಸಿ ಕುಟುಂಬಸ್ಥರೊಂದಿಗೆ ಹೊಲಗಳಿಗೆ ಹೋಗಿ ಸಹಭೋಜನ ಮಾಡುವ ವಿಶಿಷ್ಟ ಹಬ್ಬ ಇದಾಗಿದೆ ಎಂದು ಹಬ್ಬದ ಮಹತ್ವವನ್ನು ತಿಳಿಸಿದರು.

ರೈತರ ಏಳಿಗೆ ದೇಶದ ಅಭಿವೃದ್ಧಿಗೆ ಅಡಿಪಾಯವಾಗಿರುತ್ತದೆ. ನಮ್ಮೆಲ್ಲರಿಗೆ ಅನ್ನ ನೀಡಿ ಪೋಷಿಸುವ ರೈತರ ಹಿತ ಕಾಯುವುದು ನಮ್ಮೆಲ್ಲರ ಕರ್ತವ್ಯವಾಗಿದೆ‌. ಈ ದಿಶೆಯಲ್ಲಿ ನಾನು ನಿರಂತರ ಶ್ರಮ ವಹಿಸುತ್ತಿದ್ದು, ರೈತರ ಹಿತದೃಷ್ಟಿಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುತ್ತಿದ್ದೇನೆ. ರೈತರಿಗೆ ಸಂಕಷ್ಟಗಳು ಬಂದಾಗ ಮುಂದೆ ನಿಂತು ಹೋರಾಡುತ್ತಿದ್ದೇನೆ. ರೈತರು ಕೂಡ ಕೃಷಿಯಲ್ಲಿ ತಾಂತ್ರಿಕತೆಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಲು ಯತ್ನಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಮಾರುತಿ ಚವ್ಹಾಣ, ರಾಮಶೆಟ್ಟಿ ಪನ್ನಾಳೆ, ಶಿವಾನಂದ ವಡ್ಡೆ, ನಾಗೇಶ ಪತ್ರೆ, ಪ್ರತೀಕ ಚವ್ಹಾಣ, ಯೋಗೇಶ ಪಾಟೀಲ, ನಾಗನಾಥ ಚಿಕ್ಲೆ, ಭರತ ಕದಂ, ಬಂಟಿ ರಾಂಪೂರೆ, ನೀಲಕಂಠ ಪಾಟೀಲ, ಪ್ರವೀಣ ಕಾರಬಾರಿ, ಅಶೋಕ ಮೇತ್ರೆ, ಪ್ರದೀಪ ಪವಾರ, ಧನಾಜಿ ರಾಠೋಡ, ಸುಭಾಷ ಸರ್ಪಂಚ್, ಬಾಬುರಾವ ರಾಠೋಡ, ವಿಲಾಸ ಚವ್ಹಾಣ, ದೀಪಕ ಜಾಧವ ಸೇರಿದಂತೆ ಇತರರು ಉಪಸ್ಥಿತರಿದ್ದರು.