ನೈಜ ಜಗತ್ತಿನ ಸಮಸ್ಯೆಗೆ ಸೈದ್ಧಾಂತಿಕ ಜ್ಞಾನ ಅವಶ್ಯಕ : ಖಾದ್ರಿ

ನೈಜ ಜಗತ್ತಿನ ಸಮಸ್ಯೆಗೆ ಸೈದ್ಧಾಂತಿಕ ಜ್ಞಾನ ಅವಶ್ಯಕ : ಖಾದ್ರಿ

ಮಳಖೇಡದ ಚಿಗುರು ಶಾಲೆಯ ವಿದ್ಯಾರ್ಥಿಗಳಿಂದ ವಿಜ್ಞಾನ ವಿಸ್ಮಯ ವಸ್ತು ಪ್ರದರ್ಶನ

ನೈಜ ಜಗತ್ತಿನ ಸಮಸ್ಯೆಗೆ ಸೈದ್ಧಾಂತಿಕ ಜ್ಞಾನ ಅವಶ್ಯಕ : ಖಾದ್ರಿ

ಸೇಡಂ : ವಿಜ್ಞಾನ ಪ್ರದರ್ಶನಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುವುದರಿಂದ ನೈಜ ಜಗತ್ತಿನ ಸಮಸ್ಯೆಗಳಿಗೆ ಸೈದ್ಧಾಂತಿಕ ಜ್ಞಾನವನ್ನು ಅನ್ವಯಿಸಲು ಕಲಿಯುವುದರ ಜೊತೆಗೆ ಅವರಲ್ಲಿ ಸಂಶೋಧನಾ ಸಾಮಥ್ರ್ಯ ಹೆಚ್ಚುತ್ತದೆ ಎಂದು ಮಳಖೇಡ ದರ್ಗಾದ ಹಜರತ್ ಸೈಯದ್ ಶಹಾ ಮುಸ್ತಫಾ ಖಾದ್ರಿ ಹೇಳಿದರು.

ತಾಲೂಕಿನ ಮಳಖೇಡ ಗ್ರಾಮದ ಸ್ಪೂರ್ತಿ ಸರ್ಕಾರೇತರ ಶಿಕ್ಷಣ ಸಂಸ್ಥೆಯ ಚಿರುಗು ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ಮಕ್ಕಳ ವಿಜ್ಞಾನ ವಿಸ್ಮಯ ಕಾರ್ಯಕ್ರಮವನ್ನು ಉದ್ಘಾಟಿಸಿದ ಅವರು ಮಾತನಾಡಿ, ಮಕ್ಕಳಿಗೆ ಚಿಕ್ಕ ವಯಸ್ಸಿನಲ್ಲಿಯೇ ಪ್ರಯೋಗ ಮತ್ತು ಕಲಿಕೆಯಲ್ಲಿ ಸಮಗ್ರ ಅನುಭವವನ್ನು ಪಡೆಯಲು ಅನುವು ಮಾಡಿಕೊಡುತ್ತಿರುವ ಸಂಸ್ಥೆಯ ಕಾರ್ಯ ಶ್ಲಾಘನೀಯವಾದ್ದು, ವಿಜ್ಞಾನ ಪ್ರದರ್ಶನವನ್ನು ವಿದ್ಯಾರ್ಥಿಗಳು ಈ ಪ್ರದರ್ಶನದ ಉದ್ದೇಶ ಅರ್ಥಮಾಡಿಕೊಳ್ಳುವತ್ತ ಗಮ ನೀಡಬೇಕು ಎಂದರು.

ವಿಜ್ಞಾನ ಪ್ರದರ್ಶನ ವಿದ್ಯಾರ್ಥಿಗಳು ತಮ್ಮ ವೈಜ್ಞಾನಿಕ ಯೋಜನೆಗಳನ್ನು ಪ್ರದರ್ಶಿಸುವ ಉತ್ತಮ ವೇದಿಕೆಯಾಗಿದೆ. ತಾವು ಮಾಡಿದ ಪ್ರಯೋಗಗಳು, ಮಾದರಿಗಳು ಅಥವಾ ಸಂಶೋಧನೆಗಳನ್ನು ಪ್ರಸ್ತುತಪಡಿಸಲು ಸ್ಪೂರ್ತಿ ಶಿಕ್ಷಣ ಸಂಸ್ಥೆ ಸ್ಪೂರ್ತಿಯ ಚಿಲುಮೆಯಾಗಿದೆ. ಇಂತಹ ಪ್ರದರ್ಶನಿಯ ಮೂಲಕ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ವಿಜ್ಞಾನ ಜ್ಞಾನವನ್ನು ವೃದ್ಧಿಸುವ ಕೆಲಸ ನಿರಂತರವಾಗಿ ಮಾಡುತ್ತಿದೆ. ನಿಜ ಜೀವನದಲ್ಲಿ ವಿಜ್ಞಾನವನ್ನು ಹೇಗೆ ಬಳಸಬಹುದು ಎಂಬುದನ್ನು ಮಕ್ಕಳ ಮೂಲಕ ಇಂದಿನ ಪ್ರದರ್ಶನದಲ್ಲಿ ಸುಂದರವಾಗಿ ತೋರಿಸಿದಿದ್ದಾರೆ. ಭೌತಶಾಸ್ತ್ರ, ರಸಾಯನಶಾಸ್ತ್ರ, ಜೀವಶಾಸ್ತ್ರ ಮತ್ತು ತಂತ್ರಜ್ಞಾನದ ಬಗ್ಗೆ ತಿಳಿಸುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಕಲಿತ ಈ ವಿದ್ಯೆ ಭವಿಷ್ಯದಲ್ಲಿ ನಿಮಗೆ ಸಹಕಾರಿಯಾಗಲಿದೆ ಎಂದರು. 

ಸಿಆರ್‍ಪಿ ಪ್ರಭು ಜಾಧವ ಮಾತನಾಡಿ, ವಿಜ್ಞಾನ ಪ್ರದರ್ಶನಗಳು ವಿದ್ಯಾರ್ಥಿಗಳಿಗೆ ವಿಜ್ಞಾನದಲ್ಲಿ ತೀವ್ರ ಆಸಕ್ತಿಯನ್ನು ಉತ್ತೇಜಿಸುವುದಲ್ಲದೆ, ಹೊಸ ಪ್ರಯೋಗ, ಕಲ್ಪನೆಗ ಮತ್ತು ಆವಿμÁ್ಕರಗಳ ಕಡೆಗೆ ಧ್ಯಾನ ಹರಿಯುವಂತೆ ಮಾಡುತ್ತದೆ. ಚಿಗುರು ಶಾಲೆಯಲ್ಲಿ ವಿಜ್ಞಾನ ಪ್ರದರ್ಶನ ಅತ್ಯಂತ ಅರ್ಥಪೂರ್ಣವಾಗಿ ಮಾಡಲಾಗಿದೆ ಎಂದರು.

ಸಂಸ್ಥೆಯ ಕಾರ್ಯದರ್ಶಿ ವಿದ್ಯಾ ಜೋಶಿ ಮಾತನಾಡಿ, ಶಿಕ್ಷಣ ವ್ಯವಸ್ಥೆಯಲ್ಲಿ ಬಹಳಷ್ಟು ಬದಲಾವಣೆಗಳಾಗಿದ್ದರೂ, ವಿಜ್ಞಾನವು ವಿಕಸನಗೊಳ್ಳುತ್ತಲೇ ಇದೆ. ಹೊಸ ಆಸಕ್ತಿದಾಯಕ ಸಂಗತಿಗಳು ಬೆಳಕಿಗೆ ಬರುತ್ತಲೇ ಇವೆ. ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ ಶಿಕ್ಷಣ ಮಾತ್ರವಲ್ಲದೇ, ವಿಜ್ಞಾನದ ನಾವೀನ್ಯ ಸಂಗತಿಗಳನ್ನು ತಿಳಿಸುವುದರ ಜೊತೆಗೆ ಪ್ರಾಯೋಗಿಕ ಪ್ರಯೋಗಗಳನ್ನು ಮಾಡಿಸುತ್ತಿದ್ದೇವೆ. ಪ್ರಸ್ತುತ ಇಂದಿನ ಈ ವಿಜ್ಞಾನ ವಿಸ್ಮಯದಲ್ಲಿ ಹಿಂದಿನ ಮತ್ತು ಇಂದಿನ ವಿಜ್ಞಾನ, ಪರಿಸರ ರಕ್ಷಣೆ, ಮಾಲಿನ್ಯ ನಿಯಂತ್ರಣ, ಜೀವ ವಿಜ್ಞಾನ, ಖಗೋಳಶಾಸ್ತ್ರ, ನೀರಿನ ಶುದ್ಧಿಕರಣ, ಮನುಷ್ಯನ ದೇಹರಚನೆ, ಮಳೆ ನೀರಿನ ಸಂರಕ್ಷಣೆ ಸೇರಿದಂತೆ ವಿವಿಧ ಪ್ರಕಾರಗಳ ಪ್ರದರ್ಶನವನ್ನು ನಮ್ಮ ವಿದ್ಯಾರ್ಥಿಗಳು ಮಾಡಿದ್ದಾರೆ ಎಂದರು.

ಈ ವೇಳೆ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ಕುಲಕರ್ಣಿ ಸ್ವಾಗತಿಸಿದರು. ಶಾಲೆಯ ಮುಖ್ಯ ಶಿಕ್ಷಕಿ ಅಂಬಿಕಾ ಹಾಬಾಳ ನಿರೂಪಿಸಿದರು. ವಿದ್ಯಾರ್ಥಿನಿ ಅನುರಾಧಾ ಪ್ರಾರ್ಥಿಸಿದರು. ಸ್ತುತಿ ಕುಲಕರ್ಣಿ ಭರತನಾಟ್ಯ ಪ್ರದರ್ಶಿಸಿದರು. ಜಗದೇವಿ ಹಾಗರಗಿ ವಂದಿಸಿದರು.