ಈಡಿಗರ ಪಾದಯಾತ್ರೆ ಹೋರಾಟ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವೆ ಸಂಸದ ರಾಜಶೇಖರ ಹಿಟ್ನಾಳ್ ಭರವಸೆ

ಈಡಿಗರ ಪಾದಯಾತ್ರೆ ಹೋರಾಟ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವೆ ಸಂಸದ ರಾಜಶೇಖರ ಹಿಟ್ನಾಳ್ ಭರವಸೆ

ಈಡಿಗರ ಪಾದಯಾತ್ರೆ ಹೋರಾಟ ಮುಖ್ಯಮಂತ್ರಿಗಳ ಜೊತೆ ಚರ್ಚಿಸುವೆ ಸಂಸದ ರಾಜಶೇಖರ ಹಿಟ್ನಾಳ್ ಭರವಸೆ

ಹೊಸಪೇಟೆ : ರಾಜ್ಯದ ಈಡಿಗ ಸೇರಿದಂತೆ 26 ಪಂಗಡಗಳ ನ್ಯಾಯೋಚಿತ ಬೇಡಿಕೆಗಳ ಬಗ್ಗೆ ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸ್ವಾಮೀಜಿಯವರ ಪಾದಯಾತ್ರೆ ಕೈಬಿಡುವಂತೆ ಒತ್ತಾಯಿಸುವುದಾಗಿ ಕೊಪ್ಪಳ ಲೋಕಸಭಾ ಕ್ಷೇತ್ರದ ಸದಸ್ಯರಾದ ಕೆ ರಾಜಶೇಖರ ಹಿಟ್ನಾಳ್ ಭರವಸೆ ನೀಡಿದರು. 

  ಕಲಬುರಗಿಯ ಚಿತ್ತಾಪುರದಿಂದ ಜ 6 ರಿಂದ ಈಡಿಗ ಬಿಲ್ಲವ ನಾಮಧಾರಿ ಸೇರಿದಂತೆ 26 ಪಂಗಡಗಳ 18 ಬೇಡಿಕೆಗಳನ್ನು ಒತ್ತಾಯಿಸಿ ಆರಂಭಗೊಂಡ ಡಾ. ಪ್ರಣವಾನಂದ ಶ್ರೀಗಳ 700 ಕಿ.ಮೀ ಐತಿಹಾಸಿಕ ಪಾದಯಾತ್ರೆ, ಕೊಪ್ಪಳ ಜಿಲ್ಲೆಯ ಹಿಟ್ನಾಳ್ ಗೆ ಆಗಮಿಸಿದ ಸಂದರ್ಭದಲ್ಲಿ ಸಮಾಜದ ಜಾಗೃತಿ ಸಭೆಯಲ್ಲಿ ಅವರು ಮಾತನಾಡಿ ಒಂದು ಸಮಾಜದ ಅಭಿವೃದ್ಧಿಗೆ ಶಿಕ್ಷಣ ಮತ್ತು ಹೋರಾಟ ಎರಡು ಅನಿವಾರ್ಯವಾಗಿದೆ. ಆದರೆ ಕುಲಕಸುಬು ಕಳೆದುಕೊಂಡ ಸಮುದಾಯಕ್ಕೆ ಪರ್ಯಾಯ ವ್ಯವಸ್ಥೆ ಮಾಡದಿರುವುದು ನೋವಿನ ಸಂಗತಿಯಾಗಿದೆ. ಈಡಿಗ ಸಮುದಾಯ ಅತ್ಯಂತ ಹಿಂದುಳಿದ ಸಮುದಾಯ ವಾಗಿದ್ದು ಸಮಾಜದಲ್ಲಿ ಬೆರೆತು ಸಹೋದರತೆಯಿಂದ ಜೀವನ ಮಾಡುತ್ತಿರುವ ಸಮಾಜವಾಗಿದೆ. ಸಮುದಾಯದ ಅಭಿವೃದ್ಧಿಗಾಗಿ 18 ಬೇಡಿಕೆಗಳನ್ನು ಮುಂದಿಟ್ಟುಕೊಂಡು ಡಾ ಪ್ರಣವಾನಂದ ಶ್ರೀಗಳು ನಡೆಸುತ್ತಿರುವ ಪಾದಯಾತ್ರೆ ನ್ಯಾಯೋಚಿತವಾಗಿದ್ದು ಕೂಡಲೇ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಇತ್ಯರ್ಥಪಡಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಯೋಜನೆಗಳನ್ನು ಜಾರಿ ಮಾಡಿ ಜನಪರ ಆಡಳಿತವನ್ನು ನೀಡಿದ್ದಾರೆ. ಮುಖ್ಯಮಂತ್ರಿಗಳು ಈಡಿಗ ಸಮಾಜಕ್ಕೂ ನ್ಯಾಯ ಕಲ್ಪಿಸುವ ನಂಬಿಕೆ ಇದೆ ಎಂದು ಹಿಟ್ನಾಳ್ ಹೇಳಿದರು. ಡಾ.ಪ್ರಣವಾನಂದ ಶ್ರೀಗಳು ಹಾಗೂ ಇತರ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

  *ಹೊಸಪೇಟೆ ನಗರಕ್ಕೆ ಆಗಮಿಸಿದ ಐತಿಹಾಸಿಕ ಪಾದಯಾತ್ರೆ*     

ಐತಿಹಾಸಿಕ ಪಾದಯಾತ್ರೆಯ 19ನೆಯ ದಿನ ಬೂದುಗುಂಪ ಕ್ರಾಸ್ ನಿಂದ ಪ್ರಾರಂಭವಾಗಿ ಮಧ್ಯಾಹ್ನ ಪ್ರಸಾದವನ್ನು ಹಿಟ್ನಾಳ್ ನಲ್ಲಿ ಸ್ವೀಕರಿಸಿ ಸಂಜೆ ಸಮಯದಲ್ಲಿ ಭವ್ಯ ಮೆರವಣಿಗೆಯೊಂದಿಗೆ ಹೊಸಪೇಟೆ ನಗರಕ್ಕೆ ಆಗಮಿಸಿತು.

   ಮಾಜಿ ಸಂಸದರಾದ ಶ್ರೀ ಕರಡಿ ಸಂಗಣ್ಣನವರು ಮತ್ತು ಸಾವಿರಾರು ಸಂಖ್ಯೆಯಲ್ಲಿ ಕುಲಬಾಂಧವರು ಭಾಗವಹಿಸಿದರು. 

ಬೂದುಗುಂಪದಲ್ಲಿಯೂ , ಹಿಟ್ನಾಳ್ ನಲ್ಲಿಯೂ , ಮತ್ತು ಹೊಸಪೇಟೆ ನಗರದಲ್ಲಿ ಕೂಡ ಕುಲಬಾಂಧವರು ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು.

ವಿಜಯನಗರದ ಜಿಲ್ಲಾಧ್ಯಕ್ಷರಾದ ಚಂದ್ರಣ್ಣ, ಕೊಪ್ಪಳ ಜಿಲ್ಲಾಧ್ಯಕ್ಷರಾದ ಕಾಶಿ ವಿಶ್ವನಾಥ್ ಮತ್ತು ಎಲ್ಲಾ ತಾಲೂಕು ಅಧ್ಯಕ್ಷರುಗಳು ಪಾದಯಾತ್ರೆಯನ್ನು ವಿಜಯನಗರಕ್ಕೆ ಹಸ್ತಾಂತರಿಸಿದರು .

ಬೂದುಗುಂಪ ಕ್ರಾಸಿನಲ್ಲಿಯೂ , ಹಿಟ್ನಾಳ್ ನಲ್ಲಿಯೂ, ಹೊಸಪೇಟೆಯಲ್ಲಿಯೂ ಸಮಾಜ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು. 

 ಕುಕನೂರು, ಕಾರಟಗಿ ಗಂಗಾವತಿ, ಯಲಬುರ್ಗಾ ,ಕುಷ್ಟಗಿ ಮತ್ತು ಎಲ್ಲಾ ಭಾಗಗಳಿಂದಲೂ ಕುಲಬಾಂಧವರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಜ 25ರಂದು ಐತಿಹಾಸಿಕ ಪಾದಯಾತ್ರೆ ಹೊಸಪೇಟೆಯಿಂದ ಆರಂಭಗೊಂಡಿತು.