ಹಬ್ಬದ ಪ್ರಯುಕ್ತ ಉದಯಕುಮಾರ ಪಾಟೀಲ್ ಔತಣಕೂಟ ಏರ್ಪಡಿಸಿ, ಸಂಭ್ರಮಿಸಿದ ರೈತ ಮುಖಂಡ ಉದಯಕುಮಾರ ಪಾಟೀಲ್

ಹಬ್ಬದ ಪ್ರಯುಕ್ತ  ಉದಯಕುಮಾರ ಪಾಟೀಲ್ ಔತಣಕೂಟ ಏರ್ಪಡಿಸಿ, ಸಂಭ್ರಮಿಸಿದ ರೈತ ಮುಖಂಡ ಉದಯಕುಮಾರ ಪಾಟೀಲ್

ಎಳ್ಳಮಾವಾಸ್ಯೆಯ ಹಬ್ಬ : ಸಂಭ್ರಮದಿಂದ ಆಚರಿಸಿದ ರೈತಾಪಿ ವರ್ಗ

ಹಬ್ಬದ ಪ್ರಯುಕ್ತ ಉದಯಕುಮಾರ ಪಾಟೀಲ್ ಔತಣಕೂಟ ಏರ್ಪಡಿಸಿ, ಸಂಭ್ರಮಿಸಿದ ರೈತ ಮುಖಂಡ ಉದಯಕುಮಾರ ಪಾಟೀಲ್ 

ಚಿಂಚೋಳಿ : ಎಳ್ಳಮಾವಾಸ್ಯೆಯ ಹಬ್ಬದ ಪ್ರಯುಕ್ತ ತಾಲೂಕಿನ ನಾಗಇದ್ಲಾಯಿ ಗ್ರಾಮದ ರೈತ ಮುಖಂಡ ಉದಯಕುಮಾರ ಮಾಲಿ ಪಾಟೀಲ್ ಅವರು ಹಿತೈಷಿಗಳಿಗೆ ಔತಣಕೂಟ ಏರ್ಪಡಿಸಿ, ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.

ಬಳಿಕ ಮಾತನಾಡಿದ ಅವರು ಎಳ್ಳಮಾವಾಸ್ಯೆಯ ಹಬ್ಬ ರೈತಾಪಿ ವರ್ಗಗಳ ಕುಟುಂಬಕ್ಕೆ ಸಂಭ್ರಮಿಸುವ ಹಬ್ಬವಾಗಿದೆ. ರೈತರು ಕುಟುಂಬದ ಮತ್ತು ಹಿತೈಷಿಗಳೊಂದಿಗೆ ತಮ್ಮ ಹೊಲಗಳಿಗೆ ತೆರಳಿ ಭೂಮಿಗೆ ಚೆರಗ ಚೆಲ್ಲಿ, ಭೂಮಿ ತಾಯಿಗೆ ಕೃತಜ್ಞತೆ ಸಲ್ಲಿಸುವ ದಿನವನ್ನಾಗಿ ಎಳ್ಳಮಾವಾಸ್ಯೆಯ ಹಬ್ಬವನ್ನು ಆಚರಿಸಲಾಗುತ್ತದೆ. ರೈತರು ಉತ್ತಮ ಬೆಳೆಗಾಗಿ ಎಳ್ಳು-ಬೆಲ್ಲ ಮತ್ತು ವಿಶೇಷ ಖಾದ್ಯಗಳನ್ನು (ಹೋಳಿಗೆ, ಪಲ್ಯ, ರೊಟ್ಟಿ) ಹೊಲದಲ್ಲಿ ಚೆಲ್ಲಿ ಭೂಮಿ ತಾಯಿಗೆ ಧನ್ಯವಾದ ಸಲ್ಲಿಸುವ ದಿನವೂ ಆಗಿದ್ದು, ಶನಿ ದೋಷ ನಿವಾರಣೆಗೂ ಪೂಜೆ ಸಲ್ಲಿಸುವ ಎಳ್ಳಮಾವಾಸ್ಯೆಯ ದಿನವಾಗಿದೆ ಎಂದರು. 

ರೈತ ಮುಖಂಡ ಉದಯಕುಮಾರ ಮಾಲಿ ಪಾಟೀಲ್ ಏರ್ಪಡಿಸಲಾಗಿದ್ದ ಔತಣಕೂಟದಲ್ಲಿ ಭಾಜಪ ಹಿರಿಯ ಮುಖಂಡ ಭೀಮಶೆಟ್ಟಿ ಮುರುಡ, ವಕೀಲ ಶ್ರೀಮಂತ ಕಟ್ಟಿಮನಿ ,ಕೆ. ಎಂ. ಬಾರಿ,ಹಿರಿಯ ಪತ್ರಕರ್ತ ಶಾಮರಾವ ಓಂಕಾರ, ಜಗನ್ನಾಥ ಶೇರಿಕಾರ, ಮಹೇಬೂಬ್ ಶಾ ಅಣವಾರ, ಚಾಂದ ಚಾವೂಸ್, ಕಂದಾಯ ನೀರಿಕ್ಷಕ ಕೇಶವ ಕುಲಕರ್ಣಿ, ಕಾರ್ತಿಕ್ ಸಜ್ಜನ್, ಅರಣ್ಯ ಅಧಿಕಾರಿ ಸಿದ್ಧಾರೂಢ ಹೊಕ್ಕಂಡಿ , ರಾಜಶೇಖರ ಹಿತ್ತಲ್, ಶಂಕರಯ್ಯ ಮಠಪತಿ,ವಿಜಯ ಕುಮಾರ ಮಾಲಿ ಪಾಟೆಲ್ ಅವರು ಉಪಸ್ಥಿತರಿದ್ದರು.