ವಾಡಿ|| ಚೊಚ್ಚಲ ವಿಶ್ವಧ್ಯಾನ ದಿನಾಚರಣೆ
ವಾಡಿ|| ಚೊಚ್ಚಲ ವಿಶ್ವಧ್ಯಾನ ದಿನಾಚರಣೆ
ವಾಡಿ: ಪಟ್ಟಣದಲ್ಲಿ ಓಂ ಶಾಂತಿ ಕೇಂದ್ರದಲ್ಲಿ ಬ್ರಹ್ಮ ಕುಮಾರಿ ಸಂಸ್ಥೆ ಹಾಗು ಪತಂಜಲಿ ಯೋಗ ಸಮಿತಿ ವತಿಯಿಂದ 'ವಿಶ್ವಧ್ಯಾನ ದಿನ' ಆಚರಿಸಲಾಯಿತು.
ಈ ವೇಳೆ ಸಾನಿಧ್ಯ ವಹಿಸಿದ ಹಲಕರ್ಟಿ ಶ್ರೀಸಿದ್ದೇಶ್ವರ ಹಿರೇಮಠದ ಪೀಠಾಧಿಪತಿ
ಶ್ರೀ ರಾಜಶೇಖರ ಸ್ವಾಮೀಜಿ ಮಾತನಾಡಿ ವಿಶ್ವದ ಸಮಗ್ರ ಯೋಗಕ್ಷೇಮ, ಸಂತೃಪ್ತಿ, ಶಾಂತಿ, ಕರುಣೆ ಮತ್ತು ಸ್ಪಷ್ಟತೆಗಳನ್ನು ಎಲ್ಲರಲ್ಲೂ ತರುವುದೇ ಈ ಧ್ಯಾನ ದಿನದ ಉದ್ದೇಶವಾಗಿದೆ ಎಂದರು.
ನಾವೆಲ್ಲರೂ ಒಂದಾಗಿ ಗೌರವ, ಶಾಂತಿ ಮತ್ತು ಏಕತೆ ತುಂಬಿದ ಪ್ರಪಂಚದ ಸೃಷ್ಟಿಗಾಗಿ,
ನಮ್ಮ ದೇಶದ ಅತಿ ಪುರಾತನ ಸಂಪ್ರದಾಯದ ಧ್ಯಾನವನ್ನು ಉತ್ಸಾಹದಿಂದ ಆಚರಿಸಿ, ಸ್ವೀಕರಿಸಿ ಬೇಕಾಗಿದೆ ಆದ್ದರಿಂದ ಪ್ರತಿದಿನವೂ ಧ್ಯಾನ ಮನುಷ್ಯನ ಆರೋಗ್ಯಕ್ಕೂ ಮನಶ್ಶಾಂತಿಗೂ ಹಾಗು ವಿಶ್ವದ ಏಕತೆಗೆ ಬಹಳ ಪ್ರಯೋಜನವಾಗಿದೆ.ಎಂದು ಹೇಳಿದರು.
ಓಂ ಶಾಂತಿ ಕೇಂದ್ರದ ಸಂಚಾಲಕರಾದ *ಬ್ರಹ್ಮ ಕುಮಾರಿ ಮಹಾನಂದ* ಮಾತನಾಡಿ
ಇತ್ತೀಚಿನ ಒತ್ತಡದ ಜೀವನಕ್ಕೆ ಧ್ಯಾನ ಅವಶ್ಯಕವಾಗಿದೆ.ಧ್ಯಾನ ಬರೀ ಯೋಗಿಗಳಿಗಷ್ಟೇ ಸಂಬಂಧಿಸಿದ್ದಲ್ಲ. ಒಬ್ಬ ವ್ಯಕ್ತಿ ಮಾನಸಿಕ ನೆಮ್ಮದಿ ಪಡೆದುಕೊಳ್ಳಲು, ನೆಮ್ಮದಿ ಜೀವನ ಸಾಗಿಸಲು, ಆರೋಗ್ಯಕರ ಜೀವನಕ್ಕೆ ಹಾಗೂ ಅತ್ಯುತ್ತಮ ವ್ಯಕ್ತಿಯಾಗಿ ಬದಲಾಗಲು ಧ್ಯಾನ ಮುಖ್ಯವಾಗಿದೆ.
ಧ್ಯಾನದಿಂದ ನಮ್ಮ ಗಮನ ಬೇರೆಡೆಗೆ ಹೋಗದಂತೆ ಮಾಡಲು, ಶಾಂತ ಮನಸ್ಸು, ಭಾವನೆಗಳು ಮತ್ತು ಆಲೋಚನೆಗಳ ಸ್ಪಷ್ಟತೆ, ವಿಶ್ರಾಂತಿ, ಆಂತರಿಕ ಶಕ್ತಿ ಮತ್ತು ಒತ್ತಡದ ಸಂದರ್ಭಗಳಲ್ಲಿಯೂ ಕೂಡ ಭಾವನೆಗಳನ್ನು ಸಮತೋಲನದಲ್ಲಿಡುವ ಸಾಮರ್ಥ್ಯವನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಯೋಗಾಭ್ಯಾಸ, ಪ್ರಾಣಾಯಾಮ ಹಾಗೂ ಧ್ಯಾನದ ಅಭ್ಯಾಸ ಮಾಡಿಸಿ ಮಾತನಾಡಿ
ಮುಂಜಾನೆ ಅಥವಾ ಸಂಜೆ ಧ್ಯಾನಕ್ಕೆ ಸರಿಯಾದ ಸಮಯವಾಗಿದೆ,
ನಮ್ಮ ಕೆಲಸ ಮಧ್ಯ ಹತ್ತೋ ಇಪ್ಪತ್ತೋ ನಿಮಿಷ ಬಿಡುವು ಸಿಕ್ಕಾಗಲೂ ಧ್ಯಾನ ಮಾಡಬಹುದು.ಆರಾಮಾಗಿ ಕುಳಿತುಕೊಂಡು, ಸರಳವಾಗಿ ಉಸಿರಿನ ಮೇಲೆ ಗಮನ ಕೇಂದ್ರೀಕರಿಸಿವುದಾಗಿದೆ.
ಧ್ಯಾನವನ್ನು ವೈಜ್ಞಾನಿಕವಾಗಿ ಮಾಡುವ ಮೂಲಕ ಮನಸ್ಸಿನ ನೆಮ್ಮದಿ ಶಾಂತಿಗಳನ್ನು ಕಂಡುಕೊಳ್ಳಬಹುದು.
ಧ್ಯಾನದ ಅಭ್ಯಾಸದಿಂದ ನಮ್ಮ ಕೆಲಸದಲ್ಲಿ ಹೆಚ್ಚಿನ ಏಕಾಗ್ರತೆ ಕ್ರಿಯಾಶೀಲತೆ ಜೊತೆಗೆ ದೇಹವು ಆರೋಗ್ಯಕರವಾಗಿರುತ್ತದೆ. ಧ್ಯಾನದಿಂದ ಒತ್ತಡ ಕಡಿಮೆಯಾಗಿ ಮನಸ್ಸು ಶಾಂತವಾಗುತ್ತದೆ. ಸಂಬಂಧಗಳ ಉತ್ತಮ, ಪ್ರೀತಿಯುತ ನಿರ್ವಹಣೆ ಸಾಧ್ಯವಾಗುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವೀರಶೈವ ಸಮಾಜದ ಅಧ್ಯಕ್ಷ ಶರಣಗೌಡ ಚಾಮನೂರ,ಸಿದ್ದಣ್ಣಕಲ್ಲಶೆಟ್ಟಿ,ಹರಿ ಗಲಾಂಡೆ,ಶಿವಶಂಕರ ಕಾಶೆಟ್ಟಿ,ಬಸನಗೌಡ ಪಾಟೀಲ,ರವಿ ನಾಯಕ,ಸಂಗಣ್ಣ ಇಂಡಿ,ಸುಭಾಷ ಬಳಚಡ್ಡಿ,ಡಾ.ರಮೇಶ ಸಿಂಗ್,ಪರಮಾನಂದ ಅಗ್ರವಾಲ,
ಸೋನು ಸಿಂಗ್,ನಿರ್ಮಲ ಇಂಡಿ,ಪ್ರೇಮಾವತಿ ಕಾಶೆಟ್ಟಿ, ಯಂಕಮ್ಮ ಗೌಡಗಾಂವ,ಸೀಮಾ ಶೆಟಗಾರ,ಸಂಗೀತ ಯಾರಿ,ಲಕ್ಮೀ ಹರನಾಳ,ಶಾಂತ ಅಗ್ರವಾಲ,
ಪೂರ್ಣಿಮಾ ಹರನಾಳ ಸೇರಿದಂತೆ ಇತರರು ಪಾಲ್ಗೊಂಡಿದ್ದರು.