ಉಡುಪಿ ಉಪಾಹಾರ್ ಹೋಟೆಲ್ ಉದ್ಯಮಿ ಚೇತನ್ ಗೆ ಸ್ವಾಗತ
ಉಡುಪಿ ಉಪಾಹಾರ್ ಹೋಟೆಲ್ ಉದ್ಯಮಿ ಚೇತನ್ ಗೆ ಸ್ವಾಗತ
ಕಲಬುರಗಿ : ಉಡುಪಿ ಉಪಾಹಾರ್ ಗ್ರೂಪ್ ಹೋಟೆಲ್ ಪಾಲುದಾರ ಚೇತನ್ ಆನಂದ್ ಬೋಳಾರ್ ಅವರನ್ನು ಕಲ್ಬುರ್ಗಿ ಜಿಲ್ಲೆ ಹೋಟೆಲ್ ಅಸೋಸಿಯೇಷನ್ ವತಿಯಿಂದ ಸ್ವಾಗತಿಸಲಾಯಿತು.
ಡಿಸೆಂಬರ್ 18ರಂದು ಕಲಬುರಗಿಗೆ ಆಗಮಿಸಿದ ರಾಷ್ಟ್ರದ ಪ್ರಮುಖ ಹೋಟೆಲ್ ಉದ್ಯಮಿ ಚೇತನ್ ಅವರನ್ನು ಹೋಟೆಲ್ ಅಸೋಸಿಯೇಷನ್ ಅಧ್ಯಕ್ಷರಾದ ನರಸಿಂಹ ಮೆಂಡನ್ ಉದ್ಯಮಿಗಳಾದ ವೆಂಕಟೇಶ ಕಡೇಚೂರ್, ಅಂಬಯ್ಯ ಗುತ್ತೇದಾರ್ ಹಾಗೂ ಆಕಾಶವಾಣಿಯ ವಿಶ್ರಾಂತ ಕಾರ್ಯಕ್ರಮ ನಿರ್ಮಾಣ ಅಧಿಕಾರಿ ಡಾ. ಸದಾನಂದ ಪೆರ್ಲ ಶಾಲು ಹಾಗೂ ಹೂಗುಚ್ಛ ನೀಡುವುದರೊಂದಿಗೆ ಸ್ವಾಗತಿದರು. ಹೈದರಾಬಾದ್ ಮೂಲದ ಉಡುಪಿ ಉಪಹಾರ ಗ್ರೂಪಿನ ಉದ್ಯಮವನ್ನು ಕಲಬುರಗಿ ,ಪುಣೆ, ಕೊಚ್ಚಿ, ನವದೆಹಲಿ ನೋಯ್ದಾ ವಿಶಾಖಪಟ್ಟಣ,
ಜೆಮ್ ಶೆಡ್ ಪುರ ಮುಂತಾದ ಕಡೆಗಳಲ್ಲಿ ವಿಸ್ತರಿಸಿದ್ದು ದಕ್ಷಿಣ ಭಾರತ ಊಟೋಪಚಾರವನ್ನು ರಾಷ್ಟ್ರ ವ್ಯಾಪಿಗೆ ವಿಸ್ತರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಚೇತನ್ ಹೇಳಿದರು. ಗುಣಮಟ್ಟದ ಆಹಾರ ಅದರಲ್ಲೂ ಕರಾವಳಿ ಶೈಲಿಯ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇದ್ದು ನೀರ್ ದೋಸೆ, ಮಸಾಲೆ ದೋಸೆ, ಮಂಗಳೂರು ಬಜ್ಜಿ, ಬನ್ಸ್ ಎಲ್ಲೆಡೆ ಜನಪ್ರಿಯಗೊಳ್ಳುತ್ತಿದೆ ಎಂದರು. ಉಡುಪಿ ಉಪಹಾರ ಗ್ರೂಪಿನ ಎಲ್ಲಾ ಉದ್ಯಮಿಗಳು ಕರ್ನಾಟಕದಲ್ಲಿ ಹೋಟೆಲ್ ಅಸೋಸಿಯೇಷನ್ ಸದಸ್ಯತ್ವ ಸ್ವೀಕರಿಸಿ ಮತ್ತು ಇನ್ನಷ್ಟು ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ನೀಡಿ ಎಂದು ಜಿಲ್ಲಾಧ್ಯಕ್ಷರಾದ ನರಸಿಂಹ ಮಂಡನ್ ಹೇಳಿದರು.