ಕನ್ನಡ ನುಡಿಗಾಗಿಯೇ ಬದುಕಿದ ತಮ್ಮಣ್ಣಪ್ಪ ಚಿಕ್ಕೋಡಿ- ಶರಣಗೌಡ ಪಾಟೀಲ ಪಾಳಾ

ಕನ್ನಡ ನುಡಿಗಾಗಿಯೇ ಬದುಕಿದ ತಮ್ಮಣ್ಣಪ್ಪ ಚಿಕ್ಕೋಡಿ- ಶರಣಗೌಡ ಪಾಟೀಲ ಪಾಳಾ

ಕನ್ನಡ ನುಡಿಗಾಗಿಯೇ ಬದುಕಿದ ತಮ್ಮಣ್ಣಪ್ಪ ಚಿಕ್ಕೋಡಿ- ಶರಣಗೌಡ ಪಾಟೀಲ ಪಾಳಾ

ಕಲಬುರಗಿ : ಕನ್ನಡ ನಾಡು, ನುಡಿ ಮತ್ತು ಸಂಘಟನೆಯ ಸಲುವಾಗಿ ಹೋರಾಡಿದವರು ತಮ್ಮಣ್ಣಪ್ಪ ಚಿಕ್ಕೋಡಿ ಎಂದು ಪತ್ರಕರ್ತ ಶರಣಗೌಡ ಪಾಟೀಲ್ ಪಾಳಾ ಹೇಳಿದರು.

ಕಲಬುರಗಿ ನಗರದ ಎಸ್ ವಿ ಪಿ ವೃತದ ನೇಕಾರರ ಸೇವಾ ಸಂಸ್ಥೆಯಲ್ಲಿ ತಮ್ಮಣ್ಣಪ್ಪ ಅವರ 92 ನೇ ಪುಣ್ಯಸ್ಮರಣೆ ಕಾರ್ಯಕ್ರಮ ನಡೆಯಿತು . ಸ್ವತಃ ಸಾಹಿತಿಗಳಾಗಿದ್ದ ತಮ್ಮಣ್ಣಪ್ಪ ‘ರಾಮಲಿಂಗಸುತ’ ಎಂಬ ಅಂಕಿತದಲ್ಲಿ ಅವರು ಕವಿತೆಗಳನ್ನು ಬರೆಯುತ್ತಿದ್ದರು. ‘ಉಷಾ ಪರಿಣಯ’, ‘ಪ್ರಮೀಳಾ ಸ್ವಯಂವರ’, ‘ಗಿರಿಜಾ ಸ್ವಯಂವರ’, ‘ಭೀಮಸೇನ’ ಮತ್ತು ‘ಶಾರದಾ’ ಎಂಬ ನಾಟಕಗಳನ್ನು ರಚನೆ ಮಾಡಿದ್ದಾರೆ.

 ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ಅವರಿಗೆ ತಮ್ಮ ಮಗಳನ್ನು ಕೊಟ್ಟು ಮದುವೆ ಮಾಡಿ, ಅವರ ಜತೆಗೂಡಿ ಸಾವಿರಾರು ವಚನಗಳನ್ನು ಸಂಗ್ರಹಿಸಿ,

 ‘ಶಿವಾನುಭವ’ ಮತ್ತು‘ ನವ ಕರ್ನಾಟಕ’ (1917) ಪತ್ರಿಕೆಯನ್ನು ಹೊರತಂದರು.

  1915ರಲ್ಲಿ ಕನ್ನಡ ಸಾಹಿತ್ಯ ಪರಿಷತ್ತುನ ದಕ್ಷಿಣ ಮಹಾರಾಷ್ಟ್ರ ಸಂಸ್ಥಾನಗಳನ್ನು ಪ್ರತಿನಿಧಿಸಿ. ಗಡಿನಾಡಲ್ಲಿ ಕನ್ನಡ ಧ್ವಜವನ್ನು ಎತ್ತಿ ಹಿಡಿದರು 

 1925ರಲ್ಲಿ ಬೆಳಗಾವಿಯಲ್ಲಿ ನಡೆದ 11ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತಾಧ್ಯಕ್ಷರಾಗಿದ್ದರು. 1928­ರಲ್ಲಿ ಕಲಬುರ್ಗಿಯಲ್ಲಿ ನಡೆದ ಸಮ್ಮೇಳನದಲ್ಲಿ ಆಂಧ್ರ ಮತ್ತು ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗುತ್ತಿ­ರುವ ಅನ್ಯಾಯವನ್ನು ದ.ರಾ.ಬೇಂದ್ರೆ ಖಂಡಿಸಿದಾಗ ಅದನ್ನು ತಮ್ಮಣ್ಣಪ್ಪನವರು ಅನುಮೋದಿಸಿದ್ದರು. 

14.11.1933 ರಲ್ಲಿ ಮೃತ್ಯುಪತ್ರವನ್ನು ಬರೆಯಿಸು­ತ್ತಾರೆ. ರಬಕವಿಯಲ್ಲಿರುವ ತಮ್ಮ ಮನೆಯನ್ನು ಮಾರಿ ಅದರಿಂದ ಬಂದ ನಾಲ್ಕು ಸಾವಿರ ರೂಪಾಯಿಗಳನ್ನು ಬನಹಟ್ಟಿಯ ಹೈಸ್ಕೂಲ್‌ಗೆ ನೀಡಬೇಕು. ತಮ್ಮ ಬಳಿಯಿರುವ ಮೌಲ್ಯ ಗ್ರಂಥಗಳನ್ನು ಬೆಳಗಾವಿಯ ಲಿಂಗರಾಜ ಕಾಲೇಜಿಗೆ ನೀಡಬೇಕು ಎಂದು ಬರೆಯಿಸಿದ್ದರು.

ಕಾರ್ಯಕ್ರಮದ ಸಂಸ್ಥೆಯ ಅಧ್ಯಕ್ಷ ಪ್ರೊ. ಅನಾದಿ ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು, ಶ್ರವಣ ಕುಮಾರ ಮುನ್ನೊಳ್ಳಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು 

ಜೇವರ್ಗಿ ಕ. ಸಾ. ಪ ಅಧ್ಯಕ್ಷ ಎಸ್. ಕೆ. ಬಿರಾದಾರ, ಸಾಹಿತಿ ಸೂರ್ಯಕಾಂತ ಸೊನ್ನದ, ಸಂಘದ ಅಧ್ಯಕ್ಷ ಶಿವಲಿಂಗಪ್ಪಾ ಅಷ್ಟಗಿ, ಸತೀಶ ಜಮಖಂಡಿ ನ್ಯಾಯವಾದಿ ಜೆ. ಎಸ್. ವಿನೋದ ಕುಮಾರ ಛಾಯಾಗ್ರಾಹಕ ರಾಜು ಕೊಷ್ಠಿ ಇತರರು ಭಾಗವಹಿಸಿದ್ದರು.