ಒಳ ಮೀಸಲು ತಕ್ಷಣವೇ ಜಾರಿಗೊಳಿಸಿ: ತೆಗನೂರ

ಒಳ ಮೀಸಲು ತಕ್ಷಣವೇ ಜಾರಿಗೊಳಿಸಿ: ತೆಗನೂರ

ಒಳ ಮೀಸಲು ತಕ್ಷಣವೇ ಜಾರಿಗೊಳಿಸಿ: ತೆಗನೂರ

ಕಲಬುರಗಿ: ಪರಿಶಿಷ್ಟ ಸಮುದಾಯಗಳ ಒಳ ಮೀಸಲು ಜಾರಿ ಮಾಡಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿ ಒಂದು ವರ್ಷ ಕಳೆದರೂ ರಾಜ್ಯ ಸರಕಾರ ಅನಗತ್ಯ ವಿಳಂಬ ಮಾಡುತ್ತಿರುವುದು ಸರಿಯಲ್ಲ ಎಂದು ಮಾಧಿಗ ಸಮಾಜದ ಮುಖಂಡ ಆನಂದ ತೆಗನೂರ ಹೇಳಿದ್ದಾರೆ. 

   ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು,ಅಸ್ಪೃಶ್ಯ ಜಾತಿಗಳಲ್ಲೇ ಅತ್ಯಂತ ಹಿಂದುಳಿದ ಸಮುದಾಯವಾಗಿ ರುವ ಮಾದಿಗರು ಸಾಮಾಜಿಕ ನ್ಯಾಯಕ್ಕಾಗಿ ನಾಲ್ಕು ದಶಕಗಳಿಂದ ಅವಿರತವಾಗಿ ಹೋರಾಟ ಮಾಡುತ್ತಾ ಬಂದಿದ್ದಾರೆ. ಒಳ ಮೀಸಲು ಜಾರಿ ಮಾಡಲು ಪರಿಶಿಷ್ಟ ಜಾತಿಯ ಉಪ ಜಾತಿಗಳ ನಿಖರ ಅಂಕಿ ಅಂಶಗಳ ಸಂಗ್ರಹಿಸಲು ಪರಿಶಿಷ್ಟ ಜಾತಿ ಉಪಜಾತಿಗಳ ಸಮೀಕ್ಷೆ ಮಾಡಿಸಿದರೂ ಸಮೀಕ್ಷೆ ವರದಿ ಸರಕಾರ ಕೈ ಸೇರಿಲ್ಲ.ತಕ್ಷಣ ಒಳ ಮೀಸಲಾತಿ ಜಾರಿ ಮಾಡಬೇಕು. ಒಳ ಮೀಸಲಾತಿ ಜಾರಿಯಾದ ನಂತರ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.