ಚಂದ್ರಂಪಳ್ಳಿ ಜಲಾಶಯ ಉಕ್ಕಿ ಹರಿದು ಸೇತುವೆ ಸಂಪರ್ಕ ಕಡಿತ — ವಾಹನ ಸಂಚಾರ ಸಂಪೂರ್ಣ ಸ್ಥಗಿತ
ಮಳೆಯ ಪರಿಣಾಮ: ಚಿಂಚೋಳಿ ತಾಲ್ಲೂಕಿನಲ್ಲಿ ರಸ್ತೆ ಸಂಪರ್ಕ ವ್ಯತ್ಯಯ — ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆ
ಚಿಂಚೋಳಿ ತಾಲ್ಲೂಕಿನಲ್ಲಿ ನಿರಂತರ ಧಾರಾಕಾರ ಮಳೆಯಿಂದಾಗಿ ಹಲವು ಭಾಗಗಳಲ್ಲಿ ರಸ್ತೆ ಸಂಪರ್ಕ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ. ವಿಶೇಷವಾಗಿ ಚಂದ್ರಂಪಳ್ಳಿ – ಐನೊಳಿ ಮಾರ್ಗವು ಉಕ್ಕಿ ಹರಿಯುತ್ತಿರುವ
ಚಂದ್ರಂಪಳ್ಳಿ ಜಲಾಶಯದಿಂದ ಕಡಿತಗೊಂಡಿದ್ದು, ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ.
ಅದೇ ರೀತಿ ಗಾರಂಪಳ್ಳಿ ಗ್ರಾಮದ ಸೇತುವೆಯ ಮೇಲೂ ನದಿನೀರು ಹರಿಯುತ್ತಿರುವುದರಿಂದ ಗ್ರಾಮಸ್ಥರು ಹಾಗೂ ವಾಹನ ಸಂಚಾರ ಸಂಪೂರ್ಣವಾಗಿ ಅಡಚಣೆಗೊಳಗಾಗಿದೆ. ನದಿಯ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಏರುತ್ತಿದ್ದು, ಇನ್ನೂ ಹೆಚ್ಚಿನ ನೀರು ಜಲಾಶಯದಿಂದ ಬಿಡುಗಡೆ ಆಗುತ್ತಿರುವ ಕಾರಣ ಪರಿಸ್ಥಿತಿ ಗಂಭೀರ ರೂಪ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸಾರ್ವಜನಿಕರಿಗೆ ಜಿಲ್ಲಾ ಆಡಳಿತದ ಎಚ್ಚರಿಕೆ ಸೂಚನೆ
* ಸೇತುವೆ ಮತ್ತು ನದೀ ತಟ ಪ್ರದೇಶಗಳಲ್ಲಿ ಯಾರೂ ಅಲೆದಾಡಬಾರದು.
* ಬ್ರಿಜ್ ಮೇಲೆ ವಾಹನಗಳು, ಪಶುಸಂಪತ್ತು ಅಥವಾ ಯಾವುದೇ ಸಾಮಾನುಗಳನ್ನು ತೆಗೆದುಕೊಂಡು ಹೋಗುವುದನ್ನು ಕಟ್ಟುನಿಟ್ಟಾಗಿ ತಪ್ಪಿಸಿಕೊಳ್ಳಬೇಕು.
* ರೈತರು ತಮ್ಮ ಪಶುಗಳು ಹಾಗೂ ಕೃಷಿ ಸಾಧನಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು.
* ಸಾರ್ವಜನಿಕರು ನಿರಂತರವಾಗಿ ಸ್ಥಳೀಯ ಆಡಳಿತದ ಸೂಚನೆಗಳನ್ನು ಪಾಲಿಸಬೇಕು.
* ಮಕ್ಕಳನ್ನು ಹಾಗೂ ವಯೋವೃದ್ಧರನ್ನು ಅಪಾಯ ಪ್ರದೇಶಗಳಲ್ಲಿ ಇರಿಸದೆ ಎತ್ತರದ, ಸುರಕ್ಷಿತ ಪ್ರದೇಶಗಳಿಗೆ ಕೊಂಡೊಯ್ಯಬೇಕು.
* ವಿದ್ಯುತ್ ತಂತಿ, ನೀರಿನಿಂದ ಆವರಿಸಿದ ರಸ್ತೆಗಳಲ್ಲಿ ಪ್ರಯಾಣಿಸಬಾರದು.
ಸಾರ್ವಜನಿಕರಿಗೆ ಮನವಿ
ಜಿಲ್ಲಾ ಆಡಳಿತವು ಎಲ್ಲಾ ನಾಗರಿಕರಿಗೂ ಮನವಿ ಮಾಡಿಕೊಳ್ಳುವುದೇನಂದರೆ — ಅನಾವಶ್ಯಕ ಪ್ರಯಾಣ ಮಾಡದೇ ಸುರಕ್ಷತೆಯನ್ನು ಮೊದಲಿಗಾಗಿಸಿಕೊಳ್ಳಬೇಕು. ಜೀವಹಾನಿ ಆಗದಂತೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ತಕ್ಷಣ ಸಮೀಪದ ಪೊಲೀಸ್ ಠಾಣೆ ಅಥವಾ ತಹಶೀಲ್ದಾರ್ ಕಚೇರಿಯನ್ನು ಸಂಪರ್ಕಿಸಬೇಕು.
-ಜಿಲ್ಲಾ ಆಡಳಿತ, ಕಲಬುರಗಿ(ಅಧಿಕೃತ ಪ್ರಕಟಣೆ)
ಚಿಕ್ಕಲಿಂಗದಳ್ಳಿ ಕೆರೆ ಭರ್ತಿಗೆ ಕೇವಲ 1 ಅಡಿ (feet) ಮಾತ್ರ ಬಾಕಿ ಇದ್ದು ಅಪಾಯ ಮಟ್ಟಕ್ಜೆ ವಾಲುತಿದ್ದು ಕೆರೆ ಒಡೆಯುವ ಸಂಭವವಿದೆ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿದ್ದು ಶಾಸಕರಿಗೆ ಕಾಲ ಕಾಲಕ್ಕೆ ಮಾಹಿತಿ ನೀಡುತ್ತಾ.ಜನರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿಲೂ ಅಧಿಕಾರಿಗಳಿಗೆ ಸೂಚಿಸಿದ್ದಾರೆ...
ಹಾಗೇ ಕೆರ ದಂಡೆಯ ಕೆಳಗಡೇ ಬರುವ ಸೋಮನಿಂಗದಳ್ಳಿ ಹಾಗೂ ಕಲ್ಲೂರ ಗ್ರಾಮದ ಜನರು ಎಚ್ಚರಿಕೆಯಿಂದ ಇರಲೂ ತಮ್ಮಲ್ಲಿ ವಿನಂತಿ
ಆಗ್ನಿ ಶಾಮಕ ಅಧಿಕಾರಿಗಳ ತಂಡ ಶಾಸಕರ ಸೂಚನೆಯ ಮೇರೆಗೆ ಕಲ್ಲೂರ ಗ್ರಾಮಕ್ಕೆ ತೆರಳಿದೆ...