ಶ್ರೀ ಗೊಲ್ಲಾಳೇಶ್ವರ ಮಹಾರಥೋತ್ಸವ – 2025: ಭಕ್ತಿ, ಪರಂಪರೆ ಹಾಗೂ ಭವ್ಯತೆಗೂ ಹೆಸರಾಗಿರುವ ಗೋಲಗೇರಿ ಜಾತ್ರೆ

ಶ್ರೀ ಗೊಲ್ಲಾಳೇಶ್ವರ ಮಹಾರಥೋತ್ಸವ – 2025: ಭಕ್ತಿ, ಪರಂಪರೆ ಹಾಗೂ ಭವ್ಯತೆಗೂ ಹೆಸರಾಗಿರುವ ಗೋಲಗೇರಿ ಜಾತ್ರೆ
ವಿಜಾಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಲಿಂಗಯ್ಯನ ಊರೆಂದು ಖ್ಯಾತಿ ಪಡೆದ ಗೋಲಗೇರಿ ಗ್ರಾಮದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಶ್ರೀ ಗೊಲ್ಲಾಳೇಶ್ವರ ಮಹಾರಥೋತ್ಸವ ವಿಜೃಂಭಣೆಯಿಂದ ಜರುಗುತ್ತಿದೆ. ಶಿವನ ಭಕ್ತಿಗೆ ಜೀವವಿಟ್ಟ ಗೊಲ್ಲಾಳನ ಕಥೆಯನ್ನು ಹೊಂದಿರುವ ಈ ಪವಿತ್ರ ಕ್ಷೇತ್ರದಲ್ಲಿ, 30 ಮಾರ್ಚ್ 2025 ರಿಂದ 16 ಏಪ್ರಿಲ್ 2025ರವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆಯ ಇತಿಹಾಸ ಮತ್ತು ಆದ್ಯಕ್ಷತೆ:
ಈ ಜಾತ್ರೆಯು ಗೊಲ್ಲಾಳ ಎನ್ನುವ ಶಿವಭಕ್ತನ ಕುರಿತ ಪೌರಾಣಿಕ ಕಥೆಯನ್ನು ನೆನೆಸಿಕೊಳ್ಳುವ ಮಹೋತ್ಸವಾಗಿದೆ. ಕುರಿ ಕಾಯುವ ಜೊತೆಗೆ ಶಿವನ ಮೇಲಿನ ನಿಷ್ಠೆಯಿಂದ ಪ್ರಸಿದ್ಧಿ ಪಡೆದ ಗೊಲ್ಲಾಳ, ಶಿವನ ಲಿಂಗ ಪ್ರತಿಷ್ಠೆಗೆ ಸಂಬಂಧಿಸಿದ ಆಧ್ಯಾತ್ಮಿಕ ಘಟನೆಯಿಂದ ಪ್ರಸಿದ್ಧಿ ಪಡೆದಿದ್ದಾನೆ. ಈ ಭಕ್ತನ ಆತ್ಮನಿಷ್ಠೆಗೆ ಕೊಡುಗೆಯಾಗಿ ಶಿವನು ಪ್ರತಿಷ್ಠಿತ ಲಿಂಗರೂಪದಲ್ಲಿ ಈ ಕ್ಷೇತ್ರದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿದ್ದಾರೆ.
ಪ್ರಮುಖ ಕಾರ್ಯಕ್ರಮಗಳು:
-12 ಏಪ್ರಿಲ್ ಶನಿವಾರ – ಸಂಜೆ 5:30 ರಿಂದ ಪೂಜ್ಯ ಶ್ರೀ ಸಿದ್ರಾಮಪ್ಪ ದೇವರಮನಿ ಮತ್ತು ಪೂಜ್ಯ ಶ್ರೀ ವರಪುತ್ರ ಹೋಳನ್ನಾ ದೇವರಮನಿ ಅವರ ನೇತೃತ್ವದಲ್ಲಿ ಪಂಚಲೋಹದ ಕಳಸಾರೋಹಣ ಹಾಗೂ ಭೂಚಕ ಕೊಡೆ ಏರಿಸುವುದು. ನಂತರ ಭಕ್ತಿಪೂರ್ಣ ವಾತಾವರಣದಲ್ಲಿ ಮಹಾರಥೋತ್ಸವ ನಡೆಯಲಿದೆ.
-13 ಏಪ್ರಿಲ್ – ದನಗಳ ಜಾತ್ರೆ; ಶ್ರೀ ಗೊಲ್ಲಾಳೇಶ್ವರ ಟ್ರಸ್ಟ್ ಕಮಿಟಿ, ಎ.ಪಿಎಂಸಿ ಸಿಂದಗಿ ಮತ್ತು ಗೊಲಗೇರಿ ಗ್ರಾಮಸ್ಥರು ಇದರ ಆಯೋಜಕರು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಹ್ವಾನಿಸಲಾಗಿದೆ.
14 ಏಪ್ರಿಲ್ ಸೋಮವಾರ– ಕಡುಬಿನ ಕಾಳಗ ಮತ್ತು ಉಚ್ಚಾಯಿ ಕಾರ್ಯಕ್ರಮ, ಭಕ್ತರನ್ನು ಭಾವನಾತ್ಮಕ ರೀತಿಯಲ್ಲಿ ಆಕರ್ಷಿಸುತ್ತವೆ.
- ಜಾತ್ರಾ ಅವಧಿಯಲ್ಲಿ ಶ್ರೀ ಗೊಲ್ಲಾಳೇಶ್ವರ ಮಹಾಪುರಾಣ ವಾಚನ ನಡೆಯುತ್ತಿದ್ದು, ಮೇ|| ಗುರುಶಾಂತಯ್ಯ ಹಿರೇಮಠ ಹಾಗೂ ತಬಲಾ ಪ್ರಭುಲಿಂಗಯ್ಯ ಮಠ ಅಮೃತವಾಣಿ ಮೂಲಕ ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾರೆ. ಸಂಗೀತ ಸೇವೆಯನ್ನು ಶ್ರೀ ಗೌಡಪ್ಪ ಗವಾಯಿಗಳು ನಿರ್ವಹಿಸುತ್ತಿದ್ದಾರೆ.
ಸಾಮಾನ್ಯ ಮಾಹಿತಿಗಳು:
ಭಕ್ತರು, ರೈತರು ಮತ್ತು ಊರ ಮಹಾಜನರು ಈ ಪವಿತ್ರ ಜಾತ್ರೆಯಲ್ಲಿ ಭಾಗವಹಿಸಿ ಭಗವಂತನ ಕೃಪೆಗೆ ಪಾತ್ರರಾಗಬೇಕೆಂದು ಶ್ರದ್ಧಾ ಪೂರ್ವಕವಾಗಿ ಆಹ್ವಾನಿಸಲಾಗುತ್ತಿದೆ. ಸ್ಥಳದಲ್ಲಿ ಸಕಲ ವ್ಯವಸ್ಥೆಗಳನ್ನು ಕಟ್ಟಿ ಕೊಡುವ ಮೂಲಕ ಭಕ್ತರ ಅನುಭವ ಸುಗಮವಾಗಿಸಲು ಪ್ರಯತ್ನಿಸಲಾಗುತ್ತಿದೆ.
— ಕಳಬುರ್ಗಿ ಜಿಲ್ಲೆಯಿಂದ, ವರದಿ: ಉದಯಕುಮಾರ್ ಜೇವರ್ಗಿ KKP ಪತ್ರಿಕೆ