ಮಾದನ ಹಿಪ್ಪರಗಾದಲ್ಲಿ ಕೃಷಿ ವಿಜ್ಞಾನಿಗಳಿಂದ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ

ಮಾದನ ಹಿಪ್ಪರಗಾದಲ್ಲಿ ಕೃಷಿ ವಿಜ್ಞಾನಿಗಳಿಂದ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ

ಮಾದನ ಹಿಪ್ಪರಗಾದಲ್ಲಿ ಕೃಷಿ ವಿಜ್ಞಾನಿಗಳಿಂದ ರೈತರಿಗೆ ವೈಜ್ಞಾನಿಕ ಮಾರ್ಗದರ್ಶನ

ಆಳಂದ: ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಮಾದನ ಹಿಪ್ಪರಗಾ ಹಾಗೂ ಪರಿವರ್ತನ ಪ್ರತಿಷ್ಠಾನ ಟ್ರಸ್ಟ್ ಕಲಬುರಗಿ ಇವರ ಸಂಯುಕ್ತ ಆಶ್ರಯದಲ್ಲಿ, ಹಿಪ್ಪರಗಾ ಗ್ರಾಮದ ಸೊನ್ನ ಕ್ರಾಸ್ ಹತ್ತಿರ ಕೃಷಿ ವಿಜ್ಞಾನಿಗಳೊಂದಿಗೆ ಚರ್ಚಾಗೋಷ್ಠಿ ನಡೆಯಿತು.

ರೈತರ ಸಾಮಾಜಿಕ–ಆರ್ಥಿಕ ಸಬಲೀಕರಣ ಹಾಗೂ ವೈಜ್ಞಾನಿಕ ಕೃಷಿ ಜಾಗೃತಿ ಮೂಡಿಸುವ ಉದ್ದೇಶದಿಂದ ಮಾದನ ಹಿಪ್ಪರಗಾ ಗ್ರಾಮದಲ್ಲಿ ವಿಶಿಷ್ಟ ಕೃಷಿ ಮಾರ್ಗದರ್ಶನ ಕಾರ್ಯಕ್ರಮವನ್ನು ಉಭಯ ಟ್ರಸ್ಟ್ ಗಳು ಆಯೋಜಿಸಿದ್ದರು.

ಕೃಷಿ ವಿಜ್ಞಾನ ಕೇಂದ್ರ, ಕಲಬುರಗಿಯ ವಿಜ್ಞಾನಿಗಳಾದ ಡಾ. ಜಹೀರ್ (ಬೆಳೆ ರೋಗಶಾಸ್ತ್ರಜ್ಞ),ಡಾ. ಯೂಸುಫ್ ಅಲಿ (ವ್ಯವಸಾಯ ಶಾಸ್ತ್ರ ತಜ್ಞ) ಹಾಗೂ ಡಾ. ಸನಮತಿ ನಾಯಕ್ (ತೋಟಗಾರಿಕೆ ವಿಜ್ಞಾನಿ) ವಿಜ್ಞಾನಿಗಳು ರೈತರಿಗೆ ಬೆಳೆ ರೋಗ ನಿರ್ವಹಣೆ, ವಿಜ್ಞಾನಾಧಾರಿತ ಕೃಷಿ ಪದ್ಧತಿಗಳು, ತೋಟಗಾರಿಕೆಯ ಮಹತ್ವ ಮತ್ತು ನವೀನ ತಂತ್ರಜ್ಞಾನಗಳ ಬಗ್ಗೆ ಸವಿಸ್ತಾರ ಮಾಹಿತಿಯನ್ನು ನೀಡಿದರು.

ಈ ಸಂದರ್ಭದಲ್ಲಿ ಶಾಲಾ ಮಿತ್ರ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿನಾಥ್, ಪರಿವರ್ತನ ಪ್ರತಿಷ್ಠಾನ ಅಧ್ಯಕ್ಷ ಅರ್ಜುನ್ ಹತ್ತಿ, ಪಶುಸಂಗೋಪನಾ ಇಲಾಖೆಯ ಆಳಂದ ತಾಲೂಕಿನ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಸೇರಿದಂತೆ ಉಭಯ ಟ್ರಸ್ಟುಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಮಾದನ ಹಿಪ್ಪರಗಾ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ 60 ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಫಲಪ್ರದ ವೈಜ್ಞಾನಿಕ ಮಾಹಿತಿಯನ್ನು ಪಡೆದುಕೊಂಡರು.

 ಶ್ರೀ ಗುರುನಾಥ್ ಸೊನ್ನದ್, ಶ್ರೀ ಮಲ್ಲಿಕಾರ್ಜುನ ಸುಗುಮಳೆ ಲಿಂಗದಳ್ಳಿ, ಶ್ರೀ ಶಾಂತಲಿಂಗಪ್ಪ ಸಲ್ಗರ್, ಶ್ರೀಶೈಲ್ ಪಾಟೀಲ, ಶಿವಪುತ್ರಪ್ಪ ದುದ್ಗಿ ಮೊದಲಾದವರು ಹಾಜರಿದ್ದರು.

ವರದಿ: ಡಾ. ಅವಿನಾಶ ಎಸ್. ದೇವನೂರ