ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆರೋಪ ಸರಿಯಲ್ಲ:: ಭದ್ರೆ

ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆರೋಪ ಸರಿಯಲ್ಲ::  ಭದ್ರೆ

ಖರ್ಗೆ ಕುಟುಂಬದ ವಿರುದ್ಧ ಸುಳ್ಳು ಆರೋಪ ಸರಿಯಲ್ಲ:: ಭದ್ರೆ 

ಕಲಬುರಗಿ : ಕಲಬುರಗಿ ನಗರದಲ್ಲಿರುವ ಸಿದ್ಧಾರ್ಥ ವಿಹಾರ್ ಟ್ರಸ್ಟಿಗೆ ಹಂಚಿಕೆ ಮಾಡಿರುವ ನಾಗರಿಕ ನಿವೇಶನ ಕುರಿತು ಬಿಜೆಪಿ ಮುಖಂಡರು ಸುಳ್ಳು ಹೇಳಿಕೆ ನೀಡಿ ಖರ್ಗೆ ಅವರ ಕುಟುಂಬದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಅರ್ಜುನ್ ಭದ್ರೆ ಹೇಳಿದರು. 

30 ಆಗಸ್ಟ್ 24 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು , ಕೆಐಎಡಿಬಿ ಅಧಿಕಾರಿಗಳು ಕಾನೂನಿನಂತೆ ಭೂಮಿ ಮಂಜೂರು ಮಾಡಿದೆ ಎಂದು ಹೇಳಿದರು. 

ವಿಧಾನ ಪರಿಷತ್ ಪ್ರತಿಪಕ್ಷದ  ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಕಾಂಗ್ರೆಸ್.ನ ಅಧಿಕಾರ ಅನುಭವಿಸಿ , ಈಗ  ಖರ್ಗೆ ಅವರ ಬಗ್ಗೆ ವ್ಯಕ್ತಿಗತ ಟೀಕೆ ಮಾಡೋದು ಸರಿಯಲ್ಲ ಎಂದರು. 

ಭಾರತ ದೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಭಾವಿ ನಾಯಕರಾಗಿ ಬೆಳೆಯುತ್ತಿದ್ದಾರೆ ಇದನ್ನು ಸಹಿಸದ ಪ್ರತಿಪಕ್ಷದ ನಾಯಕರು ಖರ್ಗೆ ಅವರ ವಿರುದ್ಧ ,ದಲಿತ ನಾಯಕರನ್ನೆ ಬಳಸಿಕೊಂಡು ಸಿದ್ದಾರ್ಥ್ ವಿಹಾರ್ ಟ್ರಸ್ಟ್ ನಿವೇಶನ ಕುರಿತು ಅವರ ವಿರುದ್ಧ ಆರೋಪ ಮಾಡುತ್ತಿದ್ದಾರೆ.

ಖರ್ಗೆ ಅವರು  ದಲಿತರ ಏಳಿಗೆಗಾಗಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ . ನಾರಾಯಣಸ್ವಾಮಿ ಅವರು ಇದನ್ನು ಅರ್ಥಮಾಡಿಕೊಳ್ಳಬೇಕು  ಎಂದರು. ಅಸಮಾಧಾನಗೊಂಡರು

ಸಂಘಟನೆ ಮಲ್ಲಿಕಾರ್ಜುನ ಕ್ರಾಂತಿ ,ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಜಾತಪುರ, ಸೈಬಣ್ಣ ಕೋಟ್ನೂರ, ಕಪಿಲ್ ಸಿಂಗಿ ಗೋಷ್ಠಿಯಲ್ಲಿ ಇದ್ದರು