ಚಂದ್ರಶೇಖರ್ ಮಂಗದ ನಿಧನ
ಚಂದ್ರಶೇಖರ್ ಮಂಗದ ನಿಧನ
ಕಾಳಗಿ: ತಾಲೂಕಿನ ತೆಂಗಳಿ ಗ್ರಾಮದ ಹಿರಿಯ ಧಾರ್ಮಿಕ ಚಿಂತಕರಾದ ಚಂದ್ರಶೇಖರ್ ಮಂಗದ (78)ನಿನ್ನೆ ತಡರಾತ್ರಿ ವಯೋಸಹಜ ವಿಧಿವಶರಾದರು.
ಗ್ರಾಮದಲ್ಲಿ ಧಾರ್ಮಿಕ, ಸಾಮಾಜಿಕ ಮತ್ತು ರಾಜಕೀಯ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದ ಅವರು,
ಶ್ರೀ ಬೀಮೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಹಾಗೂ ಅಂಬಾಭವಾನಿ ದೇವಸ್ಥಾನದಲ್ಲಿ ಖಜಾಂಚಿ ಯಾಗಿ ಶ್ರದ್ಧೆ, ನಿಷ್ಠೆ ಮತ್ತು ನೈತಿಕತೆಯಿಂದ ಸೇವೆ ಸಲ್ಲಿಸಿದರು.ಹಣಕಾಸು ವ್ಯವಹಾರಗಳಲ್ಲಿ ಅತ್ಯಂತ ಪಾರದರ್ಶಕತೆ ಹಾಗೂ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ.
ಅವರು ಅಣ್ಣ ನಾಗೇಂದ್ರ ಮಂಗದ, ಪತ್ನಿ ಕಲಾವತಿ, ಇಬ್ಬರು ಗಂಡು ಮಕ್ಕಳು ಸಿದ್ದು,ಮಲ್ಲು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಡಿಸೆಂಬರ್ 7 ರಂದು , ಮಧ್ಯಾಹ್ನ 3 ಗಂಟೆಗೆ ತೆಂಗಳಿ ಗ್ರಾಮದಲ್ಲಿಯೇ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಟ್ರಸ್ಟ್ ಕಮಿಟಿಯ ಅಧ್ಯಕ್ಷ ವೀರೇಂದ್ರ ವಾಲಿ, ಕಾರ್ಯದರ್ಶಿ ವೀರಭದ್ರಯ್ಯ ಸಾಲಿಮಠ, ಹಿರಿಯರಾದ ಧನಂಜಯ ಕುಲಕರ್ಣಿ,ಬಸವರಾಜ ತುಪ್ಪದ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಶಿವರಾಜ್ ಅಂಡಗಿ ಸೇರಿದಂತೆ ಮೃತರ ಆತ್ಮಕ್ಕೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
