ಐದು ವರ್ಷಗಳಲ್ಲಿ 2ಸಾವಿರ ಶಸ್ತ್ರಚಿಕಿತ್ಸೆ

ಐದು ವರ್ಷಗಳಲ್ಲಿ 2ಸಾವಿರ ಶಸ್ತ್ರಚಿಕಿತ್ಸೆ

ಐದು ವರ್ಷಗಳಲ್ಲಿ 2ಸಾವಿರ ಶಸ್ತ್ರಚಿಕಿತ್ಸೆ

ಕಲಬುರಗಿ: ನವಜಾತ ಶಿಶುಗಳಲ್ಲಿ ಕಂಡು ಬರುವ ಹೃದಯ ಸಮಸ್ಯೆಯನ್ನು ಹೊರತು ಪಡಿಸಿ ಎಲ್ಲಾ ರೀತಿಯ ಸುಮಾರು 2ಸಾವಿರ ನವಜಾತ ಶಿಶುಗಳಿಗೆ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಪುನರ್ ಜನನ ನೀಡಲಾಗಿದೆ ಎಂದು ಅನ್ವಿಕಾ ನವಜಾತ ಶಿಶು ಮಕ್ಕಳ ಆಸ್ಪತ್ರೆಯ ಡಾ. ಶರಣ್ ಗುಬ್ಬಿ ತಿಳಿಸಿದರು.

ನಗರದ ರಿಂಗ್ ರಸ್ತೆಯಲ್ಲಿರುವ ಆಸ್ಪತ್ರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಸಮಾನ್ಯವಾಗಿ ಜನರಲ್ಲಿ 7ತಿಂಗಳಲ್ಲಿ ಜನಿಸಿದ ಮಕ್ಕಳು ಮತ್ತು ತೂಕ ಕಡಿಮೆ ಹೊಂದಿದ ಮತ್ತಿತರ ಸಮಸ್ಯೆಗಳೊಂದಿಗೆ ಜನಿಸಿದ ಮಗುವಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮತ್ತು ಆರೈಕೆ ಮಾಡುವ ಮೂಲಕ ಸುಮಾರು 2ಸಾವಿರ ಮಕ್ಕಳಿಗೆ ಪುನರ್ ಜೀವನ ನೀಡಿರುವ ಕಲ್ಯಾಣ ಕನ ರ್‌uಟಿಜeಜಿiಟಿeಜಟಕದ ಭಾಗದಲ್ಲಿ ವಿಭಿನ್ನ ಸಾಧನೆ ಮಾಡಿರುವ ಅನ್ವಿಕಾ ಆಸ್ಪತ್ರೆಯ ಬಡವರ ಆಶಾಕಿರಣವಾಗಿದೆ ಎಂದರು.

ಆಸ್ಪತ್ರೆಯಲ್ಲಿ ಉದಾ: ನವಜಾತ ಶಿಶುಗಳಲ್ಲಿ ಅನ್ನನಾಳದ ಸಮಸ್ಯೆ, ಗುಧದ್ವಾ ರವಿಲ್ಲದಿರುವ, ಅತಿಯಾದ ರಕ್ತ ಶ್ರವಿಕೆ, ಅವಧಿಗಿಂತ ಮುಂಚೆ ಜನನ ಸೇರಿ ಹಲವಾರು ಸಮಸ್ಯೆಗಳಿಂದ ಜನಿಸಿರುವ ನವಜಾತ ಶಿಶುಗಳಿಗೆ ಯಶಸ್ವಿ ಚಿಕಿತ್ಸೆ ನೀಡಿ ಶೇ. 90ಕ್ಕೂ ಹೆಚ್ಚು ಯಶಸ್ವಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿಸಿದರು.

ಕಲ್ಯಾಣ ಕರ್ನಾಟಕದ ಎಲ್ಲಾ ಜಿಲ್ಲೆಗಳ ಜನರು ಈ ಉಚಿತ ಶಸ್ತ್ರ ಚಿಕಿತ್ಸೆಯ ಲಾಭ ಹೆಚ್ಚಿನ ಜನರು ಪಡೆದುಕೊಳ್ಳಬೇಕೆಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಡಾ. ಜಯರಾಜ್ ಅವರು ಮಾತನಾಡಿ ನಮ್ಮ ಸಮಾಜದಲ್ಲಿ ಬಹುತೇಕರು ತೂಕ ಕಡಿಮೆ ಹೊಂದಿರುವ ಮಕ್ಕಳು ಬದುಕೋದಿಲ್ಲವೆಂದು ಅನಿಷ್ಟವೆಂದು ಹೀಗಳಿಯುವುದನ್ನು ಬಿಟ್ಟು ಮಕ್ಕಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರಿಗೆ ಬದುಕುವ ಅವಕಾಶ ಕಲ್ಪಿಸುವದರಲ್ಲಿ ಅಸ್ವೀಕಾ ಆಸ್ಪತ್ರೆ ಸತತ ಪ್ರಯತ್ನ ಮಾಡುತ್ತಿದೆ ಕಳೆದೈದು ವರ್ಷಗಳಿಂದ 2ಸಾವಿರ ಮಕ್ಕಳು ಉತ್ತಮ ಆರೋಗ್ಯದೊಂದಿಗೆ ಬೆಳೆಯುವಂತೆ ಮಾಡಿದ್ದು ಸಾಮಾನ್ಯವಾ ದುದಲ್ಲ ಅದು ಉಚಿತವಾಗಿ ಎಂಬುದು ಜನರು ಯೋಚಿಸದೆ ಆಸ್ಪತ್ರೆಗೆ ಭೇಟಿ ನೀಡಬೇಕೆಂದರು. ಸುದ್ದಿಗೋಷ್ಠಿಯಲ್ಲಿ ಡಾ. ಪ್ರಫುಲ್ಲ ಗುಬ್ಬಿ ಇದ್ದ

ರು.