ಅರಿವು ಶಿಕ್ಷಣ ಕೇಂದ್ರ: ಅಂಬೇಡ್ಕರ್ ತತ್ವ–ಚಿಂತನೆ ಕುರಿತು ಚರ್ಚೆ, ಪ್ರತಿಭಾವಂತರಿಗೆ ಸನ್ಮಾನ
ಅರಿವು ಶಿಕ್ಷಣ ಕೇಂದ್ರ: ಅಂಬೇಡ್ಕರ್ ತತ್ವ–ಚಿಂತನೆ ಕುರಿತು ಚರ್ಚೆ, ಪ್ರತಿಭಾವಂತರಿಗೆ ಸನ್ಮಾನ
ಅರಿವು ಶಿಕ್ಷಣ ಕೇಂದ್ರದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪುಣ್ಯಸ್ಮರಣೆ ಆಚರಣೆ
ಕಲಬುರಗಿ: ಅರಿವು ಶಿಕ್ಷಣ ಕೇಂದ್ರದಲ್ಲಿ ಇಂದು ಸಂವಿಧಾನದ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 69ನೇ ಪುಣ್ಯಸ್ಮರಣೆಯನ್ನು ಶ್ರದ್ಧೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಬಾಬಾಸಾಹೇಬರ ವಿಚಾರಧಾರೆ, ಅವರ ಭವ್ಯ ಭಾರತದ ಕನಸು ಹಾಗೂ ಸಮಾಜ ಪರಿವರ್ತನೆಗೆ ಮಾಡಿದ ಅವಿಸ್ಮರಣೀಯ ಕೊಡುಗೆ ಕುರಿತು ವಿಚಾರ ಸಂಕಿರಣವನ್ನು ಹಮ್ಮಿಕೊಳ್ಳಲಾಗಿತ್ತು.
ಬಾಬುರಾವ್ ಶೃಂಗೇರಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಾಧನೆಗಳನ್ನು ಸ್ಮರಿಸಿದರು. ಬಸವರಾಜ್ ಶೃಂಗೇರಿ ಅವರು ಮಾತನಾಡಿ,ಬಾಬಾಸಾಹೇಬರ ಸಂಕಷ್ಟಪೂರ್ಣ ಜೀವನಯಾನದ ಕುರಿತು ನೆನೆಯುತ್ತಾ ಯುವ ಪೀಳಿಗೆಗೆ ಅವರು ಮಾದರಿಯೆಂದು ಹೇಳಿದರು.
ಈ ಸಂದರ್ಭ ರಾಷ್ಟ್ರಮಟ್ಟದ ಹಾಕಿ ತಂಡಕ್ಕೆ ಆಯ್ಕೆಯಾದ ಹರ್ಷವರ್ಧನ್ ಅವರ ತಂದೆ ಕಲ್ಲಪ್ಪ ಶೃಂಗೇರಿ ಅವರನ್ನು ವಿಶೇಷವಾಗಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅತಿಥಿಗಳಾಗಿ ಬಾಬುರಾವ್ ಶೃಂಗೇರಿ, ದೇವರಾಜ್ ಕಡಗನ, ಬಸವರಾಜ್ ಶೃಂಗೇರಿ, ವಿನುತಾ ಚಿಂಚೋಳಿ, ಗೀತಾ ಕಲ್ಲಪ್ಪ ಶೃಂಗೇರಿ ಹಾಗೂ ಅರಿವು ಶಿಕ್ಷಣ ಕೇಂದ್ರದ ಸಂಸ್ಥಾಪಕ ಮಲ್ಲಿಕಾರ್ಜುನ ಶೃಂಗೇರಿ ಉಪಸ್ಥಿತರಿದ್ದರು.
ಸಂಕೇತ್ ಹಿರಿನಾಯಕ್ ಕಾರ್ಯಕ್ರಮದ ನಿರೂಪಣೆ ನಡೆಸಿದರು. ಸಾಯಿ ಕುಮಾರ್ ಶೃಂಗೇರಿ ಸ್ವಾಗತಿಸಿದರು, ಪೃಥ್ವಿರಾಜ್ ದಿಡ್ಡಿಮನಿ ಸನ್ಮಾನ ನೆರವೇರಿಸಿದರು ಮತ್ತು ಗೌತಮ್ ಶೃಂಗೇರಿ ವಂದನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಅರಿವು ಶಿಕ್ಷಣ ಕೇಂದ್ರದ ಶಿಕ್ಷಕರು ಮತ್ತು ಮಕ್ಕಳು ಹಾಡು, ಭಾಷಣಗಳ ಮೂಲಕ ಕಾರ್ಯಕ್ರಮಕ್ಕೆ ಸೊಬಗು ತುಂಬಿ ಯಶಸ್ವಿಗೊಳಿಸಿದರು.
**ವರದಿ: ಡಾ. ಅವಿನಾಶ ಎಸ್. ದೇವನೂರ**
---
