ಕನ್ನಡ ಜಾಗೃತಿ ನೂತನ ಸದಸ್ಯ ಶಿಣ್ಣೂರಿಗೆ ಸನ್ಮಾನ

ಕನ್ನಡ ಜಾಗೃತಿ ನೂತನ ಸದಸ್ಯ ಶಿಣ್ಣೂರಿಗೆ ಸನ್ಮಾನ
ಶಹಾಪುರ : ನನಗೆ ದೊರೆತ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡು,ಸಮಿತಿಯ ಆಶಯದಂತೆ ಕನ್ನಡ ಕಟ್ಟುವ ಕೆಲಸ ಮಾಡುತ್ತೇನೆ ಎಂದು ಕನ್ನಡ ಜಾಗೃತಿ ಸಮಿತಿಯ ನೂತನ ಸದಸ್ಯರಾದ ಬಸವರಾಜ ಶಿಣ್ಣೂರ ಹೇಳಿದರು.
ರಾಜ್ಯದಲ್ಲಿ ಕನ್ನಡ ಅಭಿವೃದ್ಧಿ ಕಾರ್ಯಕ್ರಮಗಳು ಮತ್ತು ಭಾಷಾ ನೀತಿ ಅನುಷ್ಠಾನಗೊಳಿಸುವಲ್ಲಿ ಪಾಲ್ಗೊಳ್ಳುವಂತೆ ಪ್ರೇರೇಪಿಸಲು, ಕನ್ನಡ ಜಾಗೃತಿ ಸಮಿತಿಗೆ ಅಧಿಕಾರೇತರ ನೂತನ ಸದಸ್ಯರನ್ನಾಗಿ ನಾಮನಿರ್ದೇಶನ ಗೊಂಡ ಪ್ರಯುಕ್ತ ಗೆಳೆಯರ ಬಳಗದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು,
ಕನ್ನಡ ನಾಡು - ನುಡಿ - ನೆಲ - ಜಲಗಳಿಗೆ ದಕ್ಕೆ ಬಂದರೆ ಸಂರಕ್ಷಣೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗಿ ಮುಂದಾಗಬೇಕು,ಇವುಗಳನ್ನ ಅಭಿಮಾನದಿಂದ ಉಳಿಸಿ ಬೆಳೆಸಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆತ್ಮೀಯರು ಹಾಗೂ ಮಾತೃ ಛಾಯಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ತಿಪ್ಪಣ್ಣ ಕ್ಯಾತನಾಳ,ಕೆಂಭಾವಿ ವಲಯ ಕಸಾಪ ಅಧ್ಯಕ್ಷ ಮಡಿವಾಳಪ್ಪ ಪಾಟೀಲ,ಶಿಕ್ಷಕ ರಂಗನಾಥ್ ದೊರೆ, ಸೆಕ್ಯುಲರ್ ವಾಯ್ಸ್ ಪತ್ರಿಕೆ ಸಂಪಾದಕ ಪ್ರಕಾಶ್ ದೊರೆ,ಆರ್,ವೈ,ದಿಗ್ಗಿ ಪದವಿ ಮಹಾವಿದ್ಯಾಲಯದ ಅಧ್ಯಕ್ಷ ಮಹೇಂದ್ರ ಕುಮಾರ್ ದಿಗ್ಗಿ ಜೊತೆಗೆ ಇತರರು ಉಪಸ್ಥಿತರಿದ್ದರು.