ಗುತ್ತೇದಾರ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಗುತ್ತೇದಾರ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಗುತ್ತೇದಾರ್ ವಾಣಿಜ್ಯ ಸಂಕೀರ್ಣ ಉದ್ಘಾಟನೆ

ಕಲಬುರಗಿ : ಅವರಾದ (ಬಿ) ಹೋಬಳಿಯ ಪಾಳಾದಲ್ಲಿ ನೂತನವಾಗಿ ನಿರ್ಮಿಸಿದ ಗುತ್ತೇದಾರ್ ವಾಣಿಜ್ಯ ಸಂಕೀರ್ಣವನ್ನು ಪಾಳಾದ ಕಟ್ಟಿಮನಿ ಹಿರೇಮಠದ ಶಿವಮೂರ್ತಿ ಶಿವಾಚಾರ್ಯರು ಡಿ.5ರಂದು ಲಕ್ಷ್ಮೀ ಪೂಜೆ ನೆರವೇರಿಸಿ ಉದ್ಘಾಟನೆ ಮಾಡಿದರು.

   ಈ ಸಂದರ್ಭದಲ್ಲಿ ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ಮುಖ್ಯಸ್ಥರಾದ ಡಾ. ಸದಾನಂದ ಪೆರ್ಲ, ಹಿರಿಯ ಉದ್ಯಮಿಗಳಾದ ವೆಂಕಟೇಶ ಕಡೇ ಚೂರ್,ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್, ಪತ್ರಕರ್ತರಾದ ಕಾಶಿನಾಥ್ ಗುತ್ತೇದಾರ್ ಚಿತ್ತಾಪುರ, ಮಲ್ಲಯ್ಯ ಗುತ್ತೇದಾರ್, ಇಂದು ಭಾಯಿ, ಚಂದಯ್ಯ ಗುತ್ತೇದಾರ್, ಮಹಾದೇವಿ, ಕಾಶಿನಾಥ್ ಗುತ್ತೇದಾರ್,ರೇಣುಕಾ ಹಾಗೂ ಪತ್ರಕರ್ತೆ ಕಾಶಿಬಾಯಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.