ಪರಿಸರ ಪ್ರೇಮ ಬೆಳೆಸಿಕೊಳ್ಳಿ :ಸಿದ್ದರಾಮ ಮಾಹುರ
ಪರಿಸರ ಪ್ರೇಮ ಬೆಳೆಸಿಕೊಳ್ಳಿ :ಸಿದ್ದರಾಮ ಮಾಹುರ
ನಮ್ಮ ನಾಳೆಗಳು ಉತ್ತಮವಾಗಬೇಕಾದರೆ ನಾವು ಇಂದಿನಿಂದಲೇ ಪರಿಸರ ಪ್ರೇಮವನ್ನು ಬೆಳೆಸಿಕೊಳ್ಳುವತ್ತ ಸಾಗಬೇಕು ಅಂದಾಗ ನಮ್ಮ ಸುತ್ತಮುತ್ತಲು ಹಸಿರು ನಮಗೆ ವರವಾಗಿ ಪರಿಣಮಿಸಿ ಮನುಕುಲಕ್ಕೆ ಒಳಿತನ್ನ ತರುವುದು ಎಂದು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕೆಕ್ಕರಸಾವಳಗಿಯಲ್ಲಿ
ಸಾಲುಮರದ ತಿಮ್ಮಕ್ಕ ಇಕೋ ಕ್ಲಬ್ ಕಾರ್ಯಕ್ರಮವನ್ನು ಉದ್ಘಾಟಿಸಿ ಎಸ್ ಡಿ ಎಮ್ ಸಿ ಅಧ್ಯಕ್ಷ ಸಿದ್ದರಾಮ ಮಾಹುರ ಹೇಳಿದರು.
ಮಕ್ಕಳು ಪರಿಸರ ಪ್ರೇಮವನ್ನು ಹೊಂದಿ ಮರಗಳನ್ನ ಉಳಿಸಿ ಬೆಳೆಸುವಂತಹ ಮನಸ್ಸು ಮಾಡಿದರೆ ಅವರ ಭವಿಷ್ಯತ್ತಿಗೆ ಅವುಗಳೆ ಹಿತವಾಗುತ್ತವೆ. "ಮನೆಗೊಂದು ಮರ ಊರಿಗೊಂದು ವನ" ಈ ಉಕ್ತಿಯನ್ನು ಎಲ್ಲರೂ ಚಾಚು ತಪ್ಪದೇ ಪಾಲಿಸಬೇಕು ಎಂದು ಶರಣು ಸರ್ ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಹೇಳಿದರು.
ರಾಸಾಯನಿಕ ಗೊಬ್ಬರ ಮತ್ತು ಕೆಮಿಕಲ್ ಮುಕ್ತ ಬೇಸಾಯ ಆಗಬೇಕು, ರೈತರು ಹೆಚ್ಚಾಗಿ ಸಾವಯವ ಕೃಷಿಯತ್ತ ಗಮನ ಹರಿಸಬೇಕು.ಮಕ್ಕಳು ಇದರ ಬಗ್ಗೆ ಹೆಚ್ಚಿಗೆ ಗಮನಹರಿಸಬೇಕು ಜೊತೆಗೆ ನಿಮ್ಮ ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದು ಅಜೀಮ್ ಪ್ರೇಮ್ ಜಿ ಫೌಂಡೇಶನ್ ಸಂಪನ್ಮೂಲ ವ್ಯಕ್ತಿ ಶಿವಕುಮಾರ್ ಹೇಳಿದರು.
ಸಾಲುಮರದ ತಿಮ್ಮಕ್ಕ, ತುಳಸಿ ಗೌಡ ಇವರ ಪರಿಸರ ಪ್ರೇಮ ನಮಗೆಲ್ಲರಿಗೂ ಮಾದರಿಯಾಗಬೇಕು ನಾವು ಕೂಡ ಅವರಂತೆ ಪರಿಸರ ಪ್ರೇಮಿಗಳಾಗಿ ಕನಿಷ್ಠ ಐದು ಮರಗಳನ್ನು ನಮ್ಮ ಜೀವಿತಾವಧಿಯಲ್ಲಿ ಬೆಳೆಸಬೇಕು ಅಂದಾಗ ಹಸಿರಿನಿಂದ ನಮ್ಮ ಉಸಿರಿನ ಅವಧಿ ಇನ್ನು ಹೆಚ್ಚಾಗುತ್ತದೆ ಎಂದು ಮುಖ್ಯ ಗುರು ಶಶಿಕಾಂತ್ ದೊಡ್ಮನಿ ಹೇಳಿದರು ಹೇಳಿದರು.
ಈ ಸಂದರ್ಭದಲ್ಲಿ ರೇಖಾ ಗಜಕೋಶ, ಪರಮಾನಂದ ಸರಸಂಬಿ, ಜಾವೀದ ಹುಂಡೇಕಾರ ಜಿರೋಬೆ ಸುಜಾತಾ, ಬಸವರಾಜ್ ಸರ್, ಮಾರುತಿ ಸರ್ ಹಾಜರಿದ್ದರು.