ಐ ಮ್ಯಾಕ್ಸ್ ಬಿಗ್ ಸಿನಿಮಾ ಪ್ರಶಸ್ತಿ ಪಡೆದ ಸಂಗಪ್ಪ ಶೆಟ್ಟಿ ಶೆಟ್ಟಿ ಸಿನಿಮಾಸ್ ಗೆ ರಾಷ್ಟ್ರೀಯ ಪುರಸ್ಕಾರದ ಮನ್ನಣೆ

ಐ ಮ್ಯಾಕ್ಸ್ ಬಿಗ್ ಸಿನಿಮಾ ಪ್ರಶಸ್ತಿ ಪಡೆದ ಸಂಗಪ್ಪ ಶೆಟ್ಟಿ ಶೆಟ್ಟಿ ಸಿನಿಮಾಸ್ ಗೆ ರಾಷ್ಟ್ರೀಯ ಪುರಸ್ಕಾರದ ಮನ್ನಣೆ
ಕಲಬುರಗಿ: ದೇಶದ ಎರಡನೇ ಹಂತದ ನಗರ (2 ಟಯರ್ ಸಿಟಿ) ಗಳಲ್ಲಿ ಅತ್ಯುತ್ತಮ ಸಿನಿಮಾ ಥಿಯೇಟರ್ ಗಳಿಗೆ ನೀಡುವ "ಐಮ್ಯಾಕ್ಸ್ ಬಿಗ್ ಸಿನಿಮಾ 2025" ಪ್ರಶಸ್ತಿಯನ್ನು ಕಲಬುರಗಿಯ ಶೆಟ್ಟಿ ಸಿನಿಮಾಸ್ ನ ಆಡಳಿತ ನಿರ್ದೇಶಕರಾದ ಸಂಗಪ್ಪ ಶೆಟ್ಟಿ ಸ್ವೀಕರಿಸಿದ್ದಾರೆ.
ಚೆನ್ನೈನಲ್ಲಿ ಆಗಸ್ಟ್ 19ರಂದು ಮಂಗಳವಾರ ನಡೆದ ಸಮಾರಂಭದಲ್ಲಿ ಐ ಮ್ಯಾಕ್ಸ್ ಸಂಸ್ಥೆಯ ಏಷ್ಯಾ ಆಸ್ಟ್ರೇಲಿಯಾ ನ್ಯೂಜಿಲ್ಯಾಂಡ್ ಮತ್ತು ಕೊರಿಯ ಮುಂತಾದ ದಕ್ಷಿಣ ಆಗ್ನೇಯ ರಾಷ್ಟ್ರಗಳ ಉಪಾಧ್ಯಕ್ಷರಾದ ಪ್ರೀತಮ್ , ಭಾರತೀಯ ಥಿಯೇಟರ್ ವರ್ಲ್ಡ್ ನ ರಾಘವ ಅವರು ಶೆಟ್ಟಿ ಸಿನಿಮಾಸ್ ನ ಆಡಳಿತ ನಿರ್ದೇಶಕರಾದ ಸಂಗಪ್ಪ ಶೆಟ್ಟಿ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಧ್ರುವ ಬಡಿಮಿ ಅವರಿಗೆ ಪ್ರತಿಷ್ಠಿತ ಪ್ರಶಸ್ತಿಯನ್ನು ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಅಮೂಲ್ಯ ಗುತ್ತೇದಾರ್ ಗಿರಿಜಾ ಶಂಕರ್ ಶೆಟ್ಟಿ ಹಾಗೂ ಸುಜಾತ ಗಿರಿಜಾ ಶಂಕರ್ ಶೆಟ್ಟಿ ಉಪಸ್ಥಿತರಿದ್ದರು.
*ಸಿನಿ ಪ್ರೇಕ್ಷಕರಿಗೆ ಪ್ರಶಸ್ತಿಯ ಅರ್ಪಣೆ*
ಕಲ್ಯಾಣ ಕರ್ನಾಟಕದ ಕಲ್ಬುರ್ಗಿ ನಗರ ಭಾರತೀಯ ಎರಡನೇ ಹಂತದ ನಗರಗಳ ಅತ್ಯುತ್ತಮ ಸಿನಿಮಾ ಥಿಯೇಟರ್ ಗಳಿಗೆ ಒಡಮಾಡುವ ಪ್ರತಿಷ್ಠಿತ ಐ ಮ್ಯಾಕ್ಸ್ ಬಿಗ್ ಸಿನಿಮಾ ಪ್ರಶಸ್ತಿಯನ್ನು ಪಡೆದಿರುವುದಕ್ಕೆ ಸಂತಸವಾಗಿದ್ದು ಈ ಪ್ರಶಸ್ತಿಯನ್ನು ಕಲ್ಬುರ್ಗಿ ನಗರದ ಸಿನಿ ಪ್ರೇಕ್ಷಕರಿಗೆ ಅರ್ಪಣೆ ಮಾಡುತ್ತಿದ್ದೇನೆ. ಸಿನಿಪ್ರಿಯರು ನಮ್ಮ ಥಿಯೇಟರ್ ನ ಆಯ್ಕೆ ಮಾಡಿರುವುದರಿಂದ ಇಂತಹ ಗೌರವಾನ್ವಿತ ಪ್ರಶಸ್ತಿಗೆ ಭಾಜನರಾಗಲು ಸಾಧ್ಯವಾಯಿತು ಎಂದು ಆಡಳಿತ ನಿರ್ದೇಶಕರಾದ ಸಂಗಪ್ಪ ಶೆಟ್ಟಿ ತಿಳಿಸಿದ್ದಾರೆ.
ಶೆಟ್ಟಿ ಸಿನಿಮಾಸ್ 1920 ಐಷಾರಾಮಿ ಹಾಸನಗಳನ್ನು ಹೊಂದಿದ್ದು ನಾಲ್ಕು ಪರದೆಗಳಲ್ಲಿ 4 ಕೆ ಡಿಜಿಟಲ್ ಪ್ರೊಜೆಕ್ಷನ್ ಹೊಂದಿದ ಅಂತರಾಷ್ಟ್ರೀಯ ದರ್ಜೆಯ ಥಿಯೇಟರ್ ಆಗಿದೆ. ಡಾಲ್ಬಿ ಅಟ್ಮಾಸ್ ಧ್ವನಿ ವ್ಯವಸ್ಥೆ ಅತ್ಯಾಕರ್ಷಕ ಪ್ರವೇಶ ದ್ವಾರ ಸ್ವಚ್ಛ ಪರಿಸರ ಆಕರ್ಷಕ ಕಾರಿಡಾರ್ ವ್ಯವಸ್ಥೆಯನ್ನು ಹೊಂದಿರುವುದಲ್ಲದೆ ಎಫ್ ಅಂಡ್ ಬಿ ಉಪಹಾರ ವ್ಯವಸ್ಥೆ ಸಿನಿಪ್ರಿಯರನ್ನು ಆಕರ್ಷಣೆ ಮಾಡಿದೆ ಇದರಿಂದಾಗಿ ಈ ಗೌರವಾನ್ವಿತ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಸಾಧ್ಯವಾಗಿದೆ ಎಂದು ಸಂಕಲ್ಪ ಶೆಟ್ಟಿ ಹೇಳಿದರು.
ಚೆನ್ನೈಯಲ್ಲಿ ನಡೆದ ಸಮಾರಂಭದಲ್ಲಿ ಐಮ್ಯಾಕ್ಸ್ ಬಿಗ್ ಸಿನಿಮಾ ಪ್ರಶಸ್ತಿಯನ್ನು ಐ ಮ್ಯಾಕ್ಸ್ ನ ದಕ್ಷಿಣಗಳ ಉಪಾಧ್ಯಕ್ಷರಾದ ಪ್ರೀತಂ ಡ್ಯಾನಿಯಲ್ ಮತ್ತು ಭಾರತೀಯ ಥಿಯೇಟರ್ ವರ್ಲ್ಡ್ನ ರಾಘವ ಹಸ್ತಾಂತರಿಸಿದರು. ವ್ಯವಸ್ಥಾಪಕ ನಿರ್ದೇಶಕರಾದ ಧ್ರುವ ಬಿಡಿಮಿ, ಶ್ರೀಮತಿ ಅಮೂಲ್ಯ ಸಂಗಪ್ಪ ಶೆಟ್ಟಿ ಉಪಸ್ಥಿತರಿದ್ದರು .