ಸ್ವಯಂ ರಕ್ಷಣೆಗೆ ಕರಾಟೆ ಅವಶ್ಯ: ಹೆಣ್ಣುಮಕ್ಕಳಿಗೆ ಬಿ.ಬಿ. ಹಿರೇಗೌಡರ ಸಂದೇಶ”
ಇಂದಿನ ದಿನಮಾನಗಳಲ್ಲಿ ಪ್ರತಿಯೊಬ್ಬ ಹೆಣ್ಣುಮಕ್ಕಳು ತಮ್ಮ ಸ್ವಯಂ ರಕ್ಷಣೆಗಾಗಿ ಕರಾಟೆ ಕಲಿಯುವುದು ತುಂಬಾ ಅವಶ್ಯವಾಗಿದೆ. ಬಿ ಬಿ ಹಿರೇಗೌಡರ.
ಯಡ್ರಾಮಿ ತಾಲೂಕಿನ ಕಣ್ಣಮೇಶ್ವರ ಸರಕಾರಿ ಪ್ರೌಢಶಾಲೆಯಲ್ಲಿ ಜೇನ ಶಿಟೋರಿಯೊ ಕರಾಟೆ ಸಂಸ್ಥೆಯ ಜೆವರ್ಗಿ ತಾಲೂಕ ಅಧ್ಯಕ್ಷರು ಹಾಗು ಮಾಧ್ಯಮದ ಪ್ರತಿನಿಧಿಯಾದ ಜೆಟ್ಟಪ್ಪ ಎಸ್ ಪೂಜಾರಿ ಬಿಳವಾರ್ ಅವರು ವಿದ್ಯಾರ್ಥಿನಿಯರಿಗೆ ಕರಾಟೆ ತರಬೇತಿಯನ್ನು ನೀಡಿದರು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಿ ಬಿ ಹಿರೇಗೌಡರ ಅವರು ವಿದ್ಯಾರ್ಥಿನಿಯರಿಗೆ ಕಿವಿಮಾತನ್ನು ಹೇಳಿದರು ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳ ಮೇಲೆ ಅಪರಾಧಿ ಕೃತ್ಯಗಳು ಹೆಚ್ಚಾಗಿ ನಡೆಯುತ್ತಿವೆ ಕಾನೂನು ಕಾಯ್ದೆಗಳು ಎಷ್ಟೇ ಕಠಿಣವಾಗಿ ಈ ನಮ್ಮ ದೇಶದಲ್ಲಿ ಜಾರಿಯಾದರೂ ಸಹಿತ ಸಮಾಜಘಾತಕ ಚಟುವಟಿಕೆಗಳು ಹಾಗೂ ಕಾನೂನು ಬಾಹಿರ ಅಪರಾಧಿ ಚಟುವಟಿಕೆಗಳು ಗುಂಡಾಗಿರಿ ಅಂತಹ ಅಪರಾಧಿ ಕೃತ್ಯಗಳು ನಡೆಯುತ್ತಿವೆ. ರಾಮ ಜನ್ಮತಾಳಿದ ಈ ಪುಣ್ಯ ಭೂಮಿಯಲ್ಲಿ. ರಾವಣಸುರ ಮಹಿಷಾಸುರ ದುರ್ಯೋಧನ ದುಶ್ಯಾಸನ ರಂತಹ ನರರಾಕ್ಷಸರು ಇಂದಿನ ಸಮಾಜದಲ್ಲಿ ನಮ್ಮ ನಿಮ್ಮ ನಡುವೆಯೆ ಇದ್ದಾರೆ ಇಂತಹ ನರ ರಾಕ್ಷಸರನ್ನು ಮಟ್ಟ ಹಾಕಬೇಕಾದರೆ. ಪ್ರತಿಯೊಂದು ಶಾಲೆಯ ಹೆಣ್ಣು ಮಕ್ಕಳು ಕರಾಟೆ ಸ್ವಯಂ ರಕ್ಷಣಾ ವಿದ್ಯೆಯನ್ನು ಕಲಿತುಕೊಳ್ಳುವ ಮುಖಾಂತರ ಆತ್ಮಸ್ಥೈರವವನ್ನು ಬೆಳೆಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಶಾಲೆಯ ಮುಖ್ಯ ಗುರುಗಳಾದ ಬಿ ಬಿ ಹಿರೇಗೌಡರ ಅವರು ವಿದ್ಯಾರ್ಥಿನಿಯರಿಗೆ ಕಿವಿ ಮಾತನ್ನು ಹೇಳಿದರು ಈ ಸಂದರ್ಭದಲ್ಲಿ ಉದ್ದಂಡಪ್ಪ ಎಂ ಸಹ ಶಿಕ್ಷಕರು ಹಾಗು ಪ್ರಭು ಯಾಳಗಿ ದೈಹಿಕ ಶಿಕ್ಷಕರು ಮತ್ತು ಶ್ರೀಮತಿ ವಿಜಯಲಕ್ಷ್ಮಿ ಪಾಟೀಲ್ ಹಾಗು ಶ್ರೀಮತಿ ಗೌರಮ್ಮ ಡಿಗ್ಗಿ ಸಹ ಶಿಕ್ಷಕಿಯರು ಮತ್ತು ನಿಂಗಣ್ಣ ದೊಡ್ಮನಿ ಸಹಶಿಕ್ಷಕರು ಹಾಗೂ ಮಹೇಶ್ ಹಾವರೆಡ್ಡಿ ದ್ವಿತೀಯ ದರ್ಜೆ ಸಹಾಯಕರು ಮತ್ತು ಶ್ರೀಮತಿ ಶ್ರೀದೇವಿ ನಾಯಕ್ ಮೇಡಂ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು
ವರದಿ ಜೇಟ್ಟೆಪ್ಪ ಏನ್ ಪೂಜಾರಿ ಇಜೇರಿ
