ಸನ್ನತಿ ಬೌದ್ಧ ಐತಿಹಾಸಿಕ ತಾಣ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕೆಂದು ಬೌದ್ಧ ಪರಿಷತ್ ಬೇಡಿಕೆ

ಸನ್ನತಿ ಬೌದ್ಧ ಐತಿಹಾಸಿಕ ತಾಣ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕೆಂದು ಬೌದ್ಧ ಪರಿಷತ್ ಬೇಡಿಕೆ

ಸನ್ನತಿ ಬೌದ್ಧ ಐತಿಹಾಸಿಕ ತಾಣ ಅಭಿವೃದ್ಧಿಗೆ ಪ್ರಾಧಿಕಾರ ರಚಿಸಬೇಕೆಂದು ಬೌದ್ಧ ಪರಿಷತ್ ಬೇಡಿಕೆ

ಕಲಬುರಗಿ:ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ (ರಾಜ್ಯ ಘಟಕ–ಕಲಬುರಗಿ) ವತಿಯಿಂದ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ, ಬೌದ್ಧರ ಐತಿಹಾಸಿಕ ತಾಣವಾದ ಸನ್ನತಿ (ಕನಗನಹಳ್ಳಿ) ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರವನ್ನು ರಚಿಸಿ, ಕಾರ್ಯರೂಪಕ್ಕೆ ತರುವಂತೆ ಸರಕಾರವನ್ನು ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಲಾಯಿತು.

ಬೆಳಗಾವಿಯಲ್ಲಿ ಡಿಸೆಂಬರ್ 08, 2025ರಂದು ನಡೆಯುವ ಅಧಿವೇಶನದಲ್ಲಿ ಈ ವಿಷಯವನ್ನು ಮುಖ್ಯವಾಗಿ ಪರಿಗಣಿಸಿ, ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿಶೇಷ ಅನುದಾನ,ಬೌದ್ಧ ಸಂಶೋಧನಾ ಕೇಂದ್ರ, ಹಾಗೂ ರಾಜ್ಯದಲ್ಲಿರುವ 09 ಪ್ರಮುಖ ಶಿಲಾಶಾಸನಗಳ ಅಭಿವೃದ್ಧಿ ಕಾರ್ಯಗಳಿಗೆ ಬಲ ನೀಡಬೇಕೆಂದು ಪರಿಷತ್ ಮಂಡಳಿಗಳು ಮನವಿ ಸಲ್ಲಿಸಿವೆ.

ಪರಿಷತ್‌ನ ರಾಜ್ಯ ಅಧ್ಯಕ್ಷರಾದ ಸುರೇಶ್ ಎಸ್. ಕಾನೇಕರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಗವಿಸಿದ್ದಪ್ಪ ಪಾಟೀಲ, ರಾಜ್ಯ ಕೋಶಾಧ್ಯಕ್ಷ ಡಾ. ರಾಜಕುಮಾರ ಮಾಳಗೆ ಮತ್ತು ಜಿಲ್ಲಾಧ್ಯಕ್ಷ ಶ್ರೀ ಜಗನ್ನಾಥ ವಿ. ನಂದಾ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಸನ್ನತಿಯಲ್ಲಿ ದೊರೆತಿರುವ 1ನೇ ಮತ್ತು 3ನೇ ಶತಮಾನದ ಶಾತವಾಹನರ ಕಾಲದ ಅಪರೂಪದ ಶಿಲಾಶಾಸನಗಳು, ಅಶೋಕ ಚಕ್ರವರ್ತಿಯ ಶಿಲಾ ಚಿತ್ರಗಳು, ಪಾಲಿ–ಬ್ರಾಹ್ಮಿ ಶಾಸನಗಳು ವಿಶ್ವದ ಮಟ್ಟದಲ್ಲಿ ಮಹತ್ತರವಾದ ಪಾರಂಪರಿಕ ಆಸ್ತಿಯಾಗಿದೆ ಎಂದು ಹೇಳಿದರು.

* ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಿಸಲಾದ ಬೌದ್ಧ ಶೈಲಿಯ ಮ್ಯೂಸಿಯಂ, ಲೈಬ್ರರಿ, ಅತಿಥಿ ಗೃಹ, ಸಿಬ್ಬಂದಿ ವಸತಿ, ಆಂತರಿಕ ರಸ್ತೆ, ಆಲಂಕಾರಿಕ ಉದ್ಯಾನಸೇರಿದಂತೆ ಅನೇಕ ಸೌಕರ್ಯಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ.

ಕಲಬುರಗಿ ವಸ್ತುಸಂಗ್ರಹಾಲಯ ಹಾಗೂ ರಾಜ್ಯದ ಇತರ ಬೌದ್ಧ ಅವಶೇಷಗಳನ್ನು ಸನ್ನತಿಯಲ್ಲಿರುವ ಉದ್ದೇಶಿತ ಬೌದ್ಧ ವಸ್ತುಸಂಗ್ರಹಾಲಯಕ್ಕೆ ಸ್ಥಳಾಂತರಿಸಬೇಕಿದೆ.

ಹಲವು ವರ್ಷಗಳಿಂದ ಉತ್ಪನ್ನನ ಕಾರ್ಯ ಸ್ಥಗಿತವಾಗಿದ್ದು ಕೂಡಲೇ ಪುನರಾರಂಭಿಸಬೇಕಿದೆ ಎಂದು ಒತ್ತಾಯಿಸಿದರು.

, ಕಳೆದ ವರ್ಷ ಬಿಕ್ಷು ಸಂಘದ ನೇತೃತ್ವದಲ್ಲಿ ಪಂಚಶೀಲ ಪಾದಯಾತ್ರೆ (ಸನ್ನತಿಯಿಂದ ಬೆಂಗಳೂರು) ಮತ್ತು ನಂತರ ನಡೆದ ಅಮರಣಾಂತಿಕ ಉಪವಾಸ ಸತ್ಯಾಗ್ರಹಗಳ ಬಳಿಕವೂ ಸರಕಾರ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಪರಿಷತ್ ಆರೋಪಿಸಿದೆ. 2006ರಲ್ಲಿ ಪ್ರಾಧಿಕಾರ ಘೋಷಣೆಗೊಂಡಿದ್ದರೂ, ಇತರೆ ಅಭಿವೃದ್ಧಿ ಪ್ರಾಧಿಕಾರಗಳಿಗೆ ನೂರಾರು ಕೋಟಿ ಅನುದಾನ ಬಿಡುಗಡೆ ಮಾಡಿದಂತೆ ಸನ್ನತಿ ಪ್ರಾಧಿಕಾರಕ್ಕೆ ಅನುದಾನ ನೀಡದಿರುವುದು ಅಸಮಾಧಾನ ವ್ಯಕ್ತಪಡಿಸಿದರು.

“ಈ ಅಧಿವೇಶನದಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಜೀವ ತುಂಬಿ, ಅಂತರಾಷ್ಟ್ರೀಯ ಪ್ರವಾಸಿ ತಾಣ ರೂಪಿಸಲು ಅಗತ್ಯ ಅನುದಾನ ನೀಡಿ, ಯೋಜನೆಗಳನ್ನು ಜಾರಿಗೆ ತರಬೇಕೆಂಬುದು ಬೌದ್ಧ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅನುಯಾಯಿಗಳ ಏಕಮತದ ಬೇಡಿಕೆ” ಎಂದು ನಾಯಕರರು ಹೇಳಿದರು.

1. 17 ಸೆಪ್ಟೆಂಬರ್ 2024 ರಂದು ಕಲಬುರಗಿಯ ಸಚಿವ ಸಂಪುಟ ಅಧಿವೇಶನದಲ್ಲಿ ಸಲ್ಲಿಸಿದ ಮನವಿ ಪತ್ರ

2. ಪಂಚಶೀಲ ಪಾದಯಾತ್ರೆ ವೇಳೆ ಸಲ್ಲಿಸಿದ ಮನವಿ

3. ಆಮರಣಾಂತಿಕ ಉಪವಾಸ ಸತ್ಯಾಗ್ರಹ ಸಂದರ್ಭದಲ್ಲಿ ಸಲ್ಲಿಸಿದ ಮನವಿ ಪತ್ರಗಳನ್ನು ನೀಡಿದರು.