ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು

ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಹುಬ್ಬಳ್ಳಿಯಲ್ಲಿ ಆಚರಿಸಲಾಯಿತು

 ಧಾರವಾಡ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ) ಧಾರವಾಡ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರೀಯ ಪತ್ರಿಕಾ ದಿನಾಚರಣೆ–2025 ರ ನವೆಂಬರ್ 30 ರಂದು ಶನಿವಾರ ಹುಬ್ಬಳ್ಳಿ ಮಹಾನಗರದಲ್ಲಿರುವ ಡಾ. ಡಿ. ಎಸ್. ಕರ್ಕಿ ಕನ್ನಡ ಭವನದಲ್ಲಿ 

 ಧಾರವಾಡ ಜಿಲ್ಲಾ ಅಧ್ಯಕ್ಷರಾದ ಸಂಗನಗೌಡ ಹೂವನ್ನವರ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಆಚರಿಸಲಾಯಿತು.

 ವಿವಿಧ ಕ್ಷೇತ್ರಗಳಿಂದ ಬಂದ ಗಣ್ಯರು, ರೈತ ನಾಯಕರೂ ಸೇರಿದಂತೆ ಸಮಾಜಸೇವಕರು, ಮಹಿಳಾ ಮುಖಂಡರು ಮತ್ತು ಜಿಲ್ಲೆಯಾದ್ಯಂತ ಇರುವ ಎಲ್ಲಾ ಪತ್ರಕರ್ತರ ಭರ್ಜರಿ ಉಪಸ್ಥಿತಿಯಿಂದ ಕಾರ್ಯಕ್ರಮಕ್ಕೆ ವಿಶೇಷ ಕಳೆ ತುಂಬಿತು.

ದೇಸಿ, ಸಾಂಸ್ಕೃತಿಕ ಮತ್ತು ಗೌರವ ಸಂಭ್ರಮದ ಈ ಸಮಾರಂಭದಲ್ಲಿ ಸಮಾಜಮುಖಿ ಪತ್ರಿಕಾ ಸೇವೆಯಲ್ಲಿ ತೊಡಗಿರುವ ವರದಿಗಾರರಿಗೆ ಸಂಘದ ವತಿಯಿಂದ ಗೌರವಪತ್ರ ಹಾಗೂ ಪ್ರೋತ್ಸಾಹ ಸಮ್ಮಾನಗಳನ್ನು ಪ್ರದಾನ ಮಾಡಲಾಯಿತು. 

ಸಾರ್ವಜನಿಕ ಹಿತಾಸಕ್ತಿಗಳನ್ನು ಪ್ರತಿಬಿಂಬಿಸುವಲ್ಲಿ ಮಾಧ್ಯಮಗಳ ಪಾತ್ರ ಶಕ್ತಿಶಾಲಿಯಾಗಿದೆ ಎಂದು ಉದ್ಘಾಟನೆ ನೆರವೇರಿಸಿ ಮಾತನಾಡಿದ ಕರ್ನಾಟಕ ಹೈಕೋರ್ಟ್ ನ ವಿಶ್ರಾಂತ ನ್ಯಾಯಮೂರ್ತಿಗಳಾದ ಶ್ರೀ ಅರಳಿ ನಾಗರಾಜ್ ತಮ್ಮ ಮಾತಿನಲ್ಲಿ ಪ್ರಸ್ತಾಪಿಸಿದರು.

ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಡಾ. ಚಂದ್ರಶೇಖರ ಶಿವಯೋಗಿ ರಾಜಯೋಗೇಂದ್ರ ಮಹಾಸ್ವಾಮಿಗಳು (ಅಕ್ಕಿಹೊಂಡ ಹೊಸಮಠ, ಹುಬ್ಬಳ್ಳಿ) ಹಾಗೂ

ಪರಮಪೂಜ್ಯ ಡಾ. ಮಂಜುನಾಥ ಅಪ್ಪಾಜಿಗಳವರು ಸುಕ್ಷೇತ್ರ ಕ್ಷೇತ್ರ ನೀಲಗುಂದ) ಹಾಗೂ 

ಪರಮಪೂಜ್ಯ ಸಂಗಮೇಶ್ವರ ಮಹಾಸ್ವಾಮಿಗಳು ಮಳೆಪ್ಪಜ್ಜನ ಮಠ ಸುಕ್ಷೇತ್ರ ನರೇಂದ್ರ ಆಶೀರ್ವಚನ ನೀಡಿದರು.

ಉದ್ಘಾಟನಾ ಕಾರ್ಯಕ್ರಮವನ್ನು ಅರಳಿ ನಾಗರಾಜ, ವಿಶ್ರಾಂತ ನ್ಯಾಯಮೂರ್ತಿಗಳು, ಕರ್ನಾಟಕ ಹೈಕೋರ್ಟ್, ಬೆಂಗಳೂರು ಮತ್ತು

ವೀರಭದ್ರಗೌಡ ಪಾಟೀಲ, ನ್ಯಾಯಾಲಯಾಧಿಕಾರಿ, ಕರ್ನಾಟಕ ಉಚ್ಚನ್ಯಾಯಾಲಯ ಧಾರವಾಡ ಅವರು ನೆರವೇರಿಸಿದರು.

ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಯನ್ನುಮಲ್ಲಿಕಾರ್ಜುನ ಬಂಗ್ಲೆ, ರಾಜ್ಯಾಧ್ಯಕ್ಷರು, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಅವರು ಮಂಡಿಸಿದರು.

ಡಾ. ಎಸ್. ಎಸ್. ಪಾಟೀಲ, ಸಂಪಾದಕರು – ವಿಶ್ವದರ್ಶನ ಕನ್ನಡ ದಿನಪತ್ರಿಕೆ, ಹಾಗೂ ರಾಜ್ಯ ಉಪಾಧ್ಯಕ್ಷರು – ಕಾ.ನಿ.ಪ. ಧ್ವನಿ, ಮುಖ್ಯ ಉಪನ್ಯಾಸಕರಾಗಿ ಮಾತನಾಡಿ ಪತ್ರಕರ್ತರು ನೈತಿಕತೆ, ನಿಷ್ಠೆ ಹಾಗೂ ಶುದ್ಧತೆಯನ್ನು ಕಾಪಾಡಿಕೊಂಡು ನಿಜವಾದ ಸಮಾಜದ ಧ್ವನಿಯಾಗಿ ಬೆಳಗಬೇಕೆಂದು ಒತ್ತಿಹೇಳಿದರು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿದವರು ಸಂಗನಗೌಡ ಎಫ್. ಹೂವನ್ನವರ, ಜಿಲ್ಲಾ ಅಧ್ಯಕ್ಷರು – ಕಾ.ನಿ.ಪ. ಧ್ವನಿ, ಧಾರವಾಡ ಹಾಗೂ ಉಪಸಂಪಾದಕರು, ಚೇತಕ್ ಟಿವಿ ನ್ಯೂಸ್ 24x7. ಪ್ರೈವೇಟ್ ಲಿಮಿಟೆಡ್ 

ಮುಖ್ಯ ಅತಿಥಿಗಳು:ಶ್ರೀಮತಿ ಜ್ಯೋತಿ ಪಾಟೀಲ – ಮಾನ್ಯ ಮಹಾಪೌರರು, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ

 ಭೀಮಸೇನ ನಾಯಕ – ಸಾಹಿತಿ, ಹುಬ್ಬಳ್ಳಿ ಮಹಾವೀರ ಐಹೊಳೆ – ಮ್ಯಾನೇಜಿಂಗ್ ಡೈರೆಕ್ಟರ್, ಚೇತಕ್ ಟಿವಿ ನ್ಯೂಸ್ 24x7 ಪ್ರೈ.ಲಿ., ರಾಯಬಾಗ, ಅಕ್ಟರ್ ಬೆಳಗಾಂವರ – ಹಿರಿಯ ಸಂಪಾದಕರು, ಮಂಕೇಶ್ ಪತ್ರಿಕೆ, ಹುಬ್ಬಳ್ಳಿ,ನಾಗರಾಜ ಕರೆಣ್ಣವರ – ಸಂಪಾದಕರು, ಭೂಗತ ಪ್ರಪಂಚ ಪತ್ರಿಕೆ, ಧಾರವಾಡ,ಗುರುರಾಜ ಸುಳ್ಳೊಳ್ಳಿ – ಜಿಲ್ಲಾ ವರದಿಗಾರರು, ಉದಯಕಾಲ ದಿನಪತ್ರಿಕೆ, ಧಾರವಾಡ

ಮಲ್ಲಿಕಾರ್ಜುನ ಹರ್ಲಾಪುರ – ಸೂಪರ್ ಗ್ರೇಡ್ ಗುತ್ತಿಗೆದಾರ,ಕಾಂತೇಶ್ ಎಸ್. ತುಂಬಗಿ – ಸಾಫ್ಟ್‌ವೇರ್ ಇಂಜಿನಿಯರ್, ಬೆಂಗಳೂರು

ರಾಜ್ಯದ 17 ಜಿಲ್ಲಾಧ್ಯಕ್ಷರು ಹಾಗೂ 50 ತಾಲೂಕಾಧ್ಯಕ್ಷರು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಭಾರೀ ಸ್ಫೂರ್ತಿ ನೀಡಿದರು.

ಸಂಪೂರ್ಣ ಕಾರ್ಯಕ್ರಮವು ಸಂಘದ ಅಧ್ಯಕ್ಷರಾದ ಸಂಗನಗೌಡ ಹೂವನ್ನವರ, ಉಪಾಧ್ಯಕ್ಷ ಧರ್ಮರಾಜ ಕಟಾರೆ, ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಪಾಟೀಲ್ ಮತ್ತು ತಂಡದ ಸಂಯೋಜನೆಯಿಂದ ಯಶಸ್ವಿಯಾಗಿ ನೆರವೇರಿತು. ಭಾಗವಹಿಸಿದ ಪ್ರತಿಯೊಬ್ಬರಿಗೂ ಸಂಘದ ಪರವಾಗಿ ಕೃತಜ್ಞತೆ ಸಲ್ಲಿಸಲಾಯಿತು.

ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ