ಭಾರತದಲ್ಲಿ ಮೊದಲ ಬಾರಿಗೆ ಆನೆಯಿಂದ ಧ್ವನಿ ಸುರಳಿ ಬಿಡುಗಡೆ
ಕಲಬುರಗಿ ಕಲಾ ಕುಡಿಗಳ ಕೊಡುಗೆ`ಗಣಪತಿ ಬಪ್ಪಾ' ಚಿತ್ರ ಗೀತೆಗಳು ಜನಾರ್ಪಣೆ ಮಾಡಿದ ಗಜಲಕ್ಷ್ಮಿ
ಕಲಬುರಗಿ ಎ.ಎಂ. ಫಿಲಂಸ್ ಆ್ಯಂಡ್ ಎಂಟರ್ಟೈನ್ಮೆಂಟ್ ಸಂಸ್ಥೆ ನಿರ್ಮಿಸಿದ `ಗಣಪತಿ ಬಪ್ಪಾ' ಕನ್ನಡ ಚಲನಚಿತ್ರ ಶೀಘ್ರವೇ ನಾಡಿನ ಚಲನಚಿತ್ರ ಮಂದಿರಗಳಲ್ಲಿ ಪ್ರಸಾರಕ್ಕೆ ಅಣಿ ಯಾಗಿದೆ. ಅದಕ್ಕೂ ಮೊದಲು ಆ ಚಿತ್ರದ ಹಾಡುಗಳು ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗಂಚಿಯ ಶ್ರೀ ಶಾಂತಲಿಂಗೇಶ್ವರ ಹಿರೇಮಠದಲ್ಲಿ ಶುಕ್ರವಾರ ಬೆಳಗ್ಗೆ 11ಗಂಟೆ ಶ್ರೀಮಠದ ಗಜಲಕ್ಷ್ಮಿ ಜನಾರ್ಪಣೆಗೊಳಿಸಿದ್ದಾಳೆ. ಅದು ನಾಡಿನಾದ್ಯಂತ ಗಜಾನನ ಪ್ರತಿಷ್ಠಾಪನೆ ಮುನ್ನಾ ದಿನ ಅನಾವರಣಗೊಂಡಿರುವುದು ವಿಶೇಷವಾಗಿದೆ.
ಪಕ್ಕ ಬಿಸಿಲೂರಿನ ಕಾವಿನಲ್ಲೇ ಅರಳಿದ ಯುವ ಕಲಾವಿದರುಗಳ ಕೊಡುಗೆ `ಗಣಪತಿ ಬಪ್ಪಾ' ಚಿತ್ರವಾಗಿದೆ. ಕಲಬುರಗಿಯ ಆನಂದ ವಠಾರ್ ಕಥೆ-ಚಿತ್ರಕಥೆ,-ಸಂಭಾಷಣೆ-ಸಾಹಿತ್ಯ ಹಾಗು ನಿರ್ದೇಶನದಲ್ಲಿ ಮೂಡಿ ಬಂದಿದೆ. ಈ ಚಿತ್ರಕ್ಕೆ ಅಪ್ಪಟ್ಟ ಕಲಬುರಗಿ ಜವಾರಿ ನೆಲದ ಹುಡುಗ ಮಹೇಶ್ ಅರ್ಜುನ್ ನಾಯಕರಾಗಿದ್ದಾರೆ. ಇವರ ಜೊತೆಗೆ ಮುಂಬೈ ಮೂಲದ ಪೂಜಾ ಸಾಲುಂಖೆಯವರು ನಟಿಸಿದ್ದಾರೆ. ಚಿತ್ರದ ಕೇಂದ್ರ ಬಿಂದುವಾಗಿ ಲೇಡಿ ವಿಲನ್ ಮುಂಬೈನ ಅಮಿತಾ ದೇಶಮುಖ್, ಬೆಂಗಳೂರಿನ ಡಾ. ನಾಗೇಶ ಕಾವೇಟಿ ಅಭಿನಯಿಸಿದ್ದಾರೆ. ಸಹ ಪಾತ್ರ ವರ್ಗದಲ್ಲಿ ಸೂರ್ಯ ತೇಜ್, ಶ್ರೀಕಂಠಯ್ಯ, ಸರ್ವೇಶ್ ವಠಾರ, ಅರುಣ್ ತೋರತ್, ಶರತ್ ಪೂಜಾರಿ ಮತ್ತಿತರರು ತಾರಾಗಣದಲ್ಲಿದ್ದಾರೆ.
ಈ ತೆರನಾಗಿ ಆನೆಯ ಮೂಲಕ ಹಾಡುಗಳು ಜನಾರ್ಪಣೆ ಮಾಡುತ್ತಿರುವುದು ಭಾರತದಲ್ಲೇ ಪ್ರಥಮ ಬಾರಿಗೆ. ಅದರಲ್ಲೂ `ಗಣೇಶ ಬಪ್ಪಾ' ಚಲನಚಿತ್ರದ ತಲೆಬರಹಕ್ಕೆ ತಕ್ಕಂತೆ ಗಣೇಶೋತ್ಸವದ ಸಂದರ್ಭದಲ್ಲಿ ಹಾಡುಗಳು ಆನೆ (ಗಜಾನನ) ಮೂಲಕ ಲೋಕಾರ್ಪಣೆ ಮಾಡಿರುವುದು ಕೂಡ ಅರ್ಥಪೂರ್ಣವಾಗಿದೆ. ಸಂಗೀತ ಪ್ರಯಾಶ್ ಮಜುಂದಾರ್, ಹಿನ್ನಲೆ ಸಂಗೀತ ಶ್ರೀನಿವಾಸ ನೀಡಿರುವ ಈ ಚಿತ್ರಕ್ಕೆ ಆನಂದ್ ವಠಾರ್ ಅವರು ಸಂಕಲನವಿದೆ. ಆನಂದ ವಠಾರ್ ಮತ್ತು ವಿನ್ಸೆನ್ಟ್ ಅಮಲ್ರಾಜ್ ಜಂಟಿಯಾಗಿ ಛಾಯಾಗ್ರಹಣದಲ್ಲಿ ಸಿನೇಮಾದ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಹಾಡುಗಳಿಗೆ ರಾಜೇಶ್ ಕೃಷ್ಣನ್, ಅಮಿತ್ ಮುತ್ರೇಜ್, ಶತದ್ರು ಕಬೀರ್, ಶುಭಾಂಗಿ ಕೇದಾರ್ ಅವರುಗಳು ತಮ್ಮ ಸಿರಿಕಂಠದಿಂದ ಹಾಡುಗಳು ಶ್ರೀಮಂತಗೊಳಿಸಿದ್ದಾರೆ. ಚಿತ್ರೀಕರಣ ಉತ್ತರ ಪ್ರದೇಶದ ವಾರಣಾಸಿ (ಕಾಶಿ), ಮಹಾರಾಷ್ಟçದ ಮುಂಬೈ, ಪುಣೆ, ಸೇರಿದಂತೆ ಕರ್ನಾಟಕದ ಕಲಬುರಗಿ, ಭೈರಾಮಡಗಿ, ಉಡುಪಿ, ಮುಧೋಳ್ (ಬಾಗಲಕೋಟ), ಯಾದಗಿರಿ, ಬೆಂಗಳೂರಿನ ರಮಣೀಯ ಸ್ಥಳಗಳಲ್ಲಿ ನಡೆದಿದೆ.
ಕಡಗಂಚಿಯ ಪೂಜ್ಯಶ್ರೀ ಷ.ಬ್ರ. ವೀರ ತಪಸ್ವಿ ವೀರಭದ್ರ ಶಿವಾಚಾರ್ಯ ಮಹಾಸ್ವಾಮಿಗಳ ಆಶೀರ್ವಾದದಲ್ಲಿ ನಡೆದ ಈ ಹಾಡುಗಳ ಜನಾರ್ಪಣೆ ಕಾರ್ಯಕ್ರಮದಲ್ಲಿ `ಗಣಪತಿ ಬಪ್ಪಾ' ಟೈಟಲ್ ಸಾಂಗ್‌ಗೆ ಸೇಡಂನ ಶೃತಿ ಚರಂತಿಮಠ ಭರತ ನಾಟ್ಯ ಮಾಡಿ ರಂಜಿಸಿದರು. ಆನೆ ಮಾವುತರಾಗಿರುವ ವೀರಪ್ಪ ಮತ್ತು ಬಸವರಾಜ ಅವರುಗಳು ಹಾಡುಗಳು ಅನಾವರಣಗೊಳಿಸಲು ಸಹಕರಿಸಿದರು.
ಗಣ್ಯರಾದ ಶಿವಶರಣಪ್ಪ ಜಮಾದಾರ, ನಾಗಪ್ಪ ಜಮಾದಾರ, ಅರ್ಜುನ್ ಜಮಾದಾರ, ಮಲ್ಲಿಕಾರ್ಜುನ ವಠಾರ, ಅಮೃತ್ ಪೂಜಾರಿ, ನಾಗರಾಜ್ ಗಂದಿಗುಡಿ, ಪತ್ರಕರ್ತ ಗುಂಡೂರಾವ ಕಡಣ , ಬಸವರಾಜ್ ಪಾಟೀಲ ನಿಪ್ಪಾಣ , ಶ್ರೀಕಾಂತ ಪಾಟೀಲ ದಿಕ್ಸಂಗಿ ಸೇರಿದಂತೆ ಚಿತ್ರ ತಂಡದ ಸದಸ್ಯರುಗಳಾದ ಜಗನ್ನಾಥ ಜಮಾದಾರ, ಭಾಗ್ಯವಂತ ಜಮಾದಾರ, ಸರ್ವೇಶ ವಠಾರ ಮತ್ತಿರರು ಇದ್ದರು ಶ್ರೀ ವಿಶ್ವಾರಾಧ್ಯ ಸೇವಾ ಸಮಿತಿ ನಗರ ಘಟಕದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಶೀಲವಂತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ; ಸಿದ್ದಣಗೌಡ ಕೆ. ಮಾಲಿ ಪಾಟೀಲ