ಸೀರೆಯ ಸೊಬಗಿನ ಜೊತೆಗೆ ಧೋತಿ-ನವರಂಗಿನ ಅಂಗಿಯ ಸೊಬಗಕ್ಕೂ ಅವಕಾಶ ನೀಡಲಿ: ಶಿವರಾಜ ಅಂಡಗಿ

ಸೀರೆಯ ಸೊಬಗಿನ ಜೊತೆಗೆ ಧೋತಿ-ನವರಂಗಿನ ಅಂಗಿಯ ಸೊಬಗಕ್ಕೂ ಅವಕಾಶ ನೀಡಲಿ: ಶಿವರಾಜ ಅಂಡಗಿ
ಕಲಬುರಗಿ: ಪ್ರಸಿದ್ಧ ಪತ್ರಿಕೆಗಳಾದ ವಿಜಯವಾಣಿ, ವಿಜಯ ಕರ್ನಾಟಕ ಹಾಗೂ ಸಂಯುಕ್ತ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರತಿವರ್ಷ “ಸೀರೆಯ ಸೊಬಗು”, “ನವರಾತ್ರಿ ನವೋಲ್ಲಾಸ” ಎಂಬ ಶೀರ್ಷಿಕೆಗಳ ಅಡಿಯಲ್ಲಿ ದಸರಾ ಹಬ್ಬವನ್ನು ಸಾಂಸ್ಕೃತಿಕ ವೈಭವದೊಂದಿಗೆ ಆಚರಿಸುವುದರಿಂದ ಮಹಿಳೆಯರಿಗೆ ಹೆಚ್ಚಿನ ಸಂತೋಷವನ್ನು ತಂದುಕೊಡುತ್ತಿರುವುದು ಪ್ರಶಂಸನೀಯ ವಿಷಯ ಎಂದು ಸಾಮಾಜಿಕ ಹಾಗೂ ಧಾರ್ಮಿಕ ಸೇವಾ ಸಂಸ್ಥೆಯಾದ ಅಂಡಗಿ ಪ್ರತಿಷ್ಠಾನ ಟೆಂಗಳಿ ಅಧ್ಯಕ್ಷ ಶಿವರಾಜ ಅಂಡಗಿ ತಿಳಿಸಿದ್ದಾರೆ.
ಅವರು ಪತ್ರಿಕೆಯ ಸಂಪಾದಕರಿಗೆ ಮನವಿ ಸಲ್ಲಿಸಿ, “ನವರಾತ್ರಿ ನವೋಲ್ಲಾಸ ದಸರಾ ಹಬ್ಬದಲ್ಲಿ ಮಹಿಳೆಯರು ಒಂಭತ್ತು ದಿನಗಳ ಕಾಲ ಒಂಭತ್ತು ಬಣ್ಣಗಳ ಸೀರೆಯಲ್ಲಿ ಸಂಭ್ರಮಿಸುತ್ತಿರುವಂತೆ, ಈ ಬಾರಿ ಪುರುಷರಿಗೆ ಕೂಡಾ ನವರಂಗಿನ ಧೋತಿ ಹಾಗೂ ಬಣ್ಣದ ಅಂಗಿಯನ್ನು ಧರಿಸಿ ಭಾವಚಿತ್ರಗಳನ್ನು ಪ್ರಕಟಿಸುವ ಅವಕಾಶ ನೀಡಿದರೆ ಹಬ್ಬದ ಸಡಗರ ಇಮ್ಮಡಿಯಾಗುತ್ತದೆ. ಇದು ನಮ್ಮ ಸನಾತನ ಭಾರತೀಯ ಸಂಸ್ಕೃತಿಯ ಕಲೆ ಮತ್ತು ಸಂಸ್ಕೃತಿಗೆ ಹೆಚ್ಚಿನ ಮೌಲ್ಯ ನೀಡಿದಂತಾಗುತ್ತದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಪುರುಷರಿಗಾಗಿ ಹೋಳಿ ಹಬ್ಬ ಮಾತ್ರವೇ ಒಂದು ಬಣ್ಣದ ಹಬ್ಬವಾಗಿ ಉಳಿದಿದೆ. ಹೋಳಿಯ ಭಾವಚಿತ್ರಗಳನ್ನು ಪತ್ರಿಕೆಗಳು ಪ್ರಕಟಿಸುವುದನ್ನು ನಾವು ನೋಡುವೆವು, ಆದರೆ ದಸರಾ ಸಂಭ್ರಮದಲ್ಲಿ ಪುರುಷರಿಗೆ ಅವಕಾಶ ಸಿಗುತ್ತಿಲ್ಲ. ಆದ್ದರಿಂದ ಈ ಬಾರಿ ‘ಸೀರೆಯ ಸೊಬಗು’ ಜೊತೆಗೆ ‘ಧೋತಿಯ ಸೊಬಗು’ ಎಂಬ ಶೀರ್ಷಿಕೆಯಡಿಯಲ್ಲಿ ಪುರುಷರಿಗೂ ದಸರಾ ಸಂಭ್ರಮದಲ್ಲಿ ಭಾಗವಹಿಸುವ ಅವಕಾಶ ನೀಡಬೇಕು” ಎಂದು ಅವರು ವಿನಂತಿಸಿದ್ದಾರೆ.