ಸಾಲೇಬಿರನಳ್ಳಿ ಹಜರತ್ ಸೈಯದ್ ಪಾಶಾ ಹುರುಸ್ : ಡಿ. 7 ರಿಂದ ಪ್ರಾರಂಭ

ಸಾಲೇಬಿರನಳ್ಳಿ ಹಜರತ್ ಸೈಯದ್ ಪಾಶಾ ಹುರುಸ್ : ಡಿ. 7 ರಿಂದ ಪ್ರಾರಂಭ

ಸಾಲೇಬಿರನಳ್ಳಿ ಹಜರತ್ ಸೈಯದ್ ಪಾಶಾ ಹುರುಸ್ : ಡಿ. 7 ರಿಂದ ಪ್ರಾರಂಭ

ಚಿಂಚೋಳಿ : ತಾಲೂಕಿನ ಸಾಲೇಬಿರನಳ್ಳಿ ಗ್ರಾಮದ ಹಜರತ್ ಸೈಯದ್ ಪಾಶಾ ಹುರುಸ್ (ಜಾತ್ರಾ) ಮಹೋತ್ಸವವನ್ನು ಇದೇ ಡಿ. 7 ರಿಂದ ಡಿ.9 ರ ವರೆಗೆ ನಡೆಯಲಿದೆ ಎಂದು ಹಜರತ್ ದರ್ಗಾದ ಮುತ್ತುವಲಿ (ಪೂಜಾರಿ) ರಸೂಲ್ ಸಾಬ್ ಅವರು ತಿಳಿಸಿದ್ದಾರೆ. 

ಹಜರತ್ ಸೈಯದ್ ಪಾಶಾ ದರ್ಗಾದ ಹುರುಸ್ (ಜಾತ್ರೆ) ಯನ್ನು ಸುಮಾರು 150 ವರ್ಷಗಳಿಂದ ಆಚರಿಸಿಕೊಂಡು ಬರುತ್ತಿರುವ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಯ ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಸಂಭ್ರಮದಿಂದ ಆಚರಣೆ ಮಾಡಲಾಗುತ್ತದೆ. ಈ ಜಾತ್ರೆ ಮೂರು ದಿನಗಳ ನಡೆಯುವ ಜಾತ್ರೆ ಆಗಿದ್ದು, ಜಾತಿ ಭೇದ ಮರೆತು ಎಲ್ಲಾ ಜಾತಿ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಭಾವೈಕ್ಯತೆ ಮತ್ತು ಸಾಮರಸ್ಯದಿಂದ ಜಾತ್ರೆ ಆಚರಣೆ ಮಾಡಲಾಗುತ್ತದೆ. ಈ ಹಿನ್ನಲೆಯಲ್ಲಿ ಡಿ. 7 ರಿಂದ ಪ್ರಾರಂಭವಾಗುವ ಜಾತ್ರೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡು ಹಜರತ್ ಪಾಶಾ ದರ್ಶನ ಪಡೆದುಕೊಂಡು ಪುನೀತರಾಗಬೇಕೆಂದು ದರ್ಗಾದ ಮುತ್ತುವಲಿ ರಸೂಲ್ ಸಾಬ್ ತಿಳಿಸಿದ್ದಾರೆ.