18ಕ್ಕೆ 'ಹಲೋ ಮಾದಿಗರೆ ಚಲೋ ಬೆಂಗಳೂರ

18ಕ್ಕೆ 'ಹಲೋ ಮಾದಿಗರೆ ಚಲೋ ಬೆಂಗಳೂರ

18ಕ್ಕೆ 'ಹಲೋ ಮಾದಿಗರೆ ಚಲೋ ಬೆಂಗಳೂರ'

ಕಲಬುರಗಿ: ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗಿಕರಣ ಜಾರಿಗಾಗಿ ಒತ್ತಾಯಿಸಿ ಇದೇ ಆಗಷ್ಟ ೧೮ ರಂದು ಮಾದಿಗರ ಮಹಾಯುದ್ದ ಬೃಹತ್ ಸಮಾವೇಶವನ್ನು ಬೆಂಗಳೂರು ನಗರದ ಫ್ರೀಡಂ ಪಾರ್ಕ್‌ನಲ್ಲಿ ಹಮ್ಮಿಕೊಳ್ಳಲಾಗಿದ್ದು ಈ ಬೃಹತ್ ಸಮಾವೇಶದಲ್ಲಿ ಪದ್ಮಶ್ರೀ ಮಂದಕೃಷ್ಣ ಮಾದಿಗ ರವರು ಭಾಗವಹಿಸಲಿದ್ದಾರೆ ಎಂದು ಮಾದಿಗ ದಂಡೋರ ರಾಜ್ಯ ಕಾರ್ಯದರ್ಶಿಗಳು, ಕಲಬುರಗಿ ಜಿಲ್ಲೆಯ ಉಸ್ತುವಾರಿಗಳಾದ ಫೆರ್ನಾಂಡಿಸ್ ಹಿಪ್ಪರಗಾಂವ ಅವರು ತಿಳಿಸಿದರು. 

     ಮಾದಿಗ ದಂಡೋರಾ,ಮಾದಿಗ ಮೀಸಲಾತಿ ಹೋರಾಟ (MRPS) ಜಿಲ್ಲಾ ಸಮಿತಿ ವತಿಯಿಂದ ನಗರದ ಪತ್ರಿಕಾ ಭವನದಲ್ಲಿಂದು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪದ್ಮಶ್ರೀ ಮಂದಕೃಷ್ಣ ಮಾದಿಗ ರವರ ನೇತೃತ್ವದಲ್ಲಿ ಸುಮಾರು ೩೦ ವರ್ಷಗಳ ಸುಧೀರ್ಘ ಒಳಮೀಸಲಾತಿ ಹೋರಾಟವನ್ನು ಹಮ್ಮಿಕೊಳ್ಳಾಗಿದ್ದು, ಈ ಹೋರಾಟದ ಹಿನ್ನಲೆಯ ಆಗಷ್ಟ ೦೧ ಒಳಮೀಸಲಾತಿ ಕುರಿತು ಸುಪ್ರೀಮ್ ಕೋರ್ಟ ನೀಡಿರುವ ತೀರ್ವನ್ನು ಅನುವಾಯ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳ ಸದನದಲ್ಲಿ ಅಂಗೀಕರಿಸಿ ಸ್ತ್ರೀ ವರ್ಗಿಕರಣವನ್ನು ಕಾಯ್ದೆ ರೂಪದಲ್ಲಿ ತಂದು ಜಾರಿ ಗೊಳಿಸಲಾಗಿದೆ. ಆದರೆ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ನೇಮಿಸಿದ ನ್ಯಾಯಮೂರ್ತಿ ಏಕ ಸದಸ್ಯ ಆಯೋಗವು ಮೂರು ಬಾರಿ ಸಮಯ ಸರ್ಕಾರಕ್ಕೆ ವರದಿ ಸಲ್ಲಿಕೆಯಾಗಿಯ ಮತ್ತು ತೆಗೆದುಕೊಂಡು ಜಾತಿ ಸಮೀಕ್ಷೆಯನ್ನು ನ ಮಾಡಿ ಬ್ಯಾಕ್‌ಲಾಕ್ ಹುದ್ದೆಗಳನ್ನು ಸರ್ಕಾರ ಒಳ ಮೀಸಲಾತಿ ಜಾರಿಗೊಳಿಸಿದ ನಂತರ ಭರ್ತಿ ಮಾಡುತ್ತೇವೆ ಎಂದು ಮುಖ್ಯಮಂತ್ರಿಳು ಹಾಗೂ ಸಮಾಜ ಕಲ್ಯಾಣ ಇಲಾಖೆ ಸಚಿವರು ಭರವಸೆ ನೀಡಿದರು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೇ ಸುಳ್ಳಿನ ಸರ್ಕಾರ ರಾತ್ರೋ ರಾತ್ರಿ ಬ್ಯಾಕ್‌ ಲಾಗ್ ಹುದ್ದೆಗಳನ್ನು ತುಂಬುತ್ತಿರುವುದು ನಾಚಿಕೆಗೇಡಿನ ಸಂಗತಿ. ಮಾದಿಗ ದಂಡೋರ, ಮಾದಿಗ ಮೀಸಲಾತಿ ಹೋರಾಟ (MRPS) ರಾಜ್ಯ ಸಮಿತಿ ಬಿ. ನರಸಪ್ಪಾ ದಂಡೋರ ೧೮-೨೦೨೫ ರವರ ನಾಯಕತ್ವದಲ್ಲಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗಿಕರಣ ಒತ್ತಾಯಿಸಿ ಆಗಸ್ಟ ಮಾದಿಗರ ಮಹಾಯುದ್ದ ಬೃಹತ್ ಸಮಾವೇಶವನ್ನು ಬೆಂಗಳೂರು ನಗರದ ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ. ಮುಂದುವರೆದು "ಮಾದಿಗರ ಮಹಾ ಯುದ್ಧ ಈ ಬೃಹತ್ ಸಮಾವೇಶದಲ್ಲಿ ಲಕ್ಷಾಂತರ ಜನರು ಭಾಗವಹಿಸಲಿದ್ದಾರೆ. ಸದರಿ ಮಳೆಗಾಲ ಅಧಿವೇಶನದಲ್ಲಿ ಮುಕ್ತಾಯವಾಗುವ ಮುಂಚಿತವಾಗಿಯೇ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ವರ್ಗಿಕರ ಜಾರಿಗೊ ಳಿಸಬೇಕೆಂದು ಒತ್ತಾಯ. ಇಲ್ಲದೇ ಹೋದಲ್ಲಿ ರಾಜ್ಯದ ರಾಜಧಾನಿಯಲ್ಲಿ ಹಂತ ಹಂತವಾಗಿ ಉಗ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹಿಪ್ಪರಗಾಂವ ಅವರು ತಿಳಿಸಿದರು. ಆದ್ದರಿಂದ ಕಲಬುರಗಿ ಜಿಲ್ಲೆಯ ಎಲ್ಲಾ ತಾಲೂಕು, ಹೊಬಳಿ, ಘಟಕಗಳು, ಗ್ರಾಮಗಳು ಅಧ್ಯಕ್ಷರು ಮತ್ತು ಪದಾಧಿಕಾರಿಗಳು, ಬುದ್ದಿ ಜೀವಿಗಳು, ವಿದ್ಯಾರ್ಥಿಗಳು ಹಾಗೂ ಸಮಾಜದ ಹೋರಾಟಗಾರರು ಕಲಬುರಗಿ ಜಿಲ್ಲೆಯಿಂದ ಸಾವಿರಾರು ಕಾರ್ಯಕರ್ತರು ಬೆಂಗಳೂರು ಈ ಒಂದು ಬೃಹತ್ ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.     

          ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಉಪಾಧ್ಯಕ್ಷ ರಾಜು ಹದನೂರ,ಜಿಲ್ಲಾಧ್ಯಕ್ಷ ಸುಂದರ ಡಿ. ಸಾಗರ, ಗೌರವ ಅಧ್ಯಕ್ಷ ಬಸವರಾಜ ಉಲ್ಲೆ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ನಾಗೀಂದ್ರಪ್ಪ ಆರ್. ದಂಡೋತಿಕರ್, ಜಿಲ್ಲಾ ಉಪಾಧ್ಯಕ್ಷ ಹಣಮಂತ ಮೇಲಿನಕೇರಿ, ದಶರಥ ದಂಡೋತಿಕರ್, ಭೀಮಶಾ ಧರಣಿ,ಮನೋಜ ಕುಮಾರ ಎಚ್. ಕಟ್ಟಿಮನಿ, ಶಿವಶರಣ ಆಲಗೂಡು,ಮಲ್ಲು ಕೊಡಂಬಲ, ಶೇಖರ ದೊಡ್ಡಮನಿ, ಸಿದ್ದಾರ್ಥ ಜಂಗಮ, ಚನ್ನವೀರ ದಸ್ತಾಪೂರ ಇದ್ದರು.