ಯೋಗಾಭ್ಯಾಸ ದಿಂದ ದೈಹಿಕ, ಮಾನಸಿಕ ಒತ್ತಡದಿಂದ ಮುಕ್ತಿ: ಯೋಗ ಶಿಕ್ಷಕ ಯಾರಿ
ಯೋಗಾಭ್ಯಾಸ ದಿಂದ ದೈಹಿಕ, ಮಾನಸಿಕ ಒತ್ತಡದಿಂದ ಮುಕ್ತಿ: ಯೋಗ ಶಿಕ್ಷಕ ಯಾರಿ
ಚಿತ್ತಾಪುರ: ಪಟ್ಟಣದ ಶ್ರೀ ಗಂಗಾ ಪರಮೇಶ್ವರಿ ಮಹಾವಿದ್ಯಾಲಯದಲ್ಲಿ 2024-25 ನೇ ಸಾಲಿನ ಬಿಎಡ್ 2ನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಒಂದು ದಿನದ ವಿಶೇಷ "ಯೋಗಾ ಕಾರ್ಯಗಾರ" ವನ್ನು ಹಮ್ಮಿಕೊಳ್ಳಲಾಗಿತ್ತು.
ಪತಂಜಲಿ ಯೋಗ ಶಿಕ್ಷಕ ವೀರಣ್ಣ ಯಾರಿ ಸಸಿಗೆ ನಿರುಣಿಸುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಯೋಗಾಭ್ಯಾಸ ಮಾಡಿಸಿದರು.
ಈ ವೇಳ ವಿದ್ಯಾರ್ಥಿಗಳೊಂದಿಗೆ ಯೋಗ ಮತ್ತು ಆರೋಗ್ಯದ ವಿಷಯಗಳ ಬಗ್ಗೆ ಚರ್ಚಿಸುತ್ತಾ
ಯೋಗದಿಂದ ನಾವು ಆರೋಗ್ಯ ಐಶ್ವರ್ಯ, ನೆಮ್ಮದಿ, ಆನಂದ ಪಡೆಯಬಹುದಾಗಿದೆ. ದಿನನಿತ್ಯ ನಾವು ಯೋಗಾಭ್ಯಾಸ ಮಾಡುವ ಮೂಲಕ ಮಾನಸಿಕ ನೆಮ್ಮದಿ ಜೊತೆಗೆ ಓದಿನಲ್ಲಿ ಉನ್ನತ ಮಟ್ಟ ಹೆಚ್ಚಿಸಿಕೊಳ್ಳಬಹುದು ಎಂಸರು.
ಇಂದಿನ ಸ್ಪರ್ಧಾತ್ಮಕ ಮತ್ತು ತಾಂತ್ರಿಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಯೋಗ ಅತ್ಯಗತ್ಯ, ಏಕೆಂದರೆ ಇದು ಏಕಾಗ್ರತೆ, ಸ್ಮರಣೆ ಮತ್ತು ಶೈಕ್ಷಣಿಕ ಸಾಧನೆಯನ್ನು ಸುಧಾರಿಸುತ್ತದೆ.
ವಿದ್ಯಾರ್ಥಿಗಳಲ್ಲಿ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ನೀಡುತ್ತದೆ. ದೈಹಿಕವಾಗಿ ಇದು ಶಕ್ತಿ, ನಮ್ಯತೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಭಾವನಾತ್ಮಕ ನಿಯಂತ್ರಣ ಮತ್ತು ಸ್ವಯಂ-ಶಿಸ್ತನ್ನು ಬೆಳೆಸಲು ಸಹಾಯ ಮಾಡುತ್ತದೆ. ಆಧುನಿಕ ಒತ್ತಡದ ಜೀವನದಲ್ಲಿ ಆರೋಗ್ಯಕರ ಮತ್ತು ಸಮತೋಲಿತ ವ್ಯಕ್ತಿತ್ವ ವಿಕಸನಕ್ಕೆ ಯೋಗವು ಒಂದು ದಿವ್ಯ ಔಷಧಿ ಎಂದು ಹೇಳಿದರು.
ವಿದ್ಯಾರ್ಥಿಗಳು ತಮ್ಮ ದಿನಚರಿಯಲ್ಲಿ ಆರೋಗ್ಯ ಸೂತ್ರಗಳನ್ನು ಯಾವರೀತಿ ಅಳವಡಿಕೊಂಡು ಯಶಸ್ಸು ಪಡೆಯಬೇಕು ಎಂದು ವಿವರಿಸಿದರು.
ಈ ಸಂಧರ್ಭದಲ್ಲಿ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ ರಾಜಶೇಖರ ಜಿ.ಆರ್,ಪ್ರಾಧ್ಯಾಪಕರಾದ ಮುರಳಿಧರ ಪಾಟೀಲ,ಶ್ರೀಧರ ರೆಡ್ಡಿ,ಗೋಪಾಲ ಪವಾರ,ಮಲ್ಲಿಕಾರ್ಜುನ ಸರ್ ಅವರು ಉಪಸ್ಥಿತರಿದ್ದರು.
ಎಲ್ಲಾ ವಿದ್ಯಾರ್ಥಿಗಳು ಉತ್ಸವದಿಂದ ಪಾಲ್ಗೊಂಡು ಯೋಗಾಭ್ಯಾಸ ಮಾಡಿದರು.
