ಸಗರ ಆಧಾರ್ ನೋಂದಣಿ ಕೇಂದ್ರ ಪ್ರಾರಂಭಿಸಲು ಆಗ್ರಹ.

ಸಗರ ಆಧಾರ್ ನೋಂದಣಿ ಕೇಂದ್ರ ಪ್ರಾರಂಭಿಸಲು ಆಗ್ರಹ.

ಸಗರ ಆಧಾರ್ ನೋಂದಣಿ ಕೇಂದ್ರ ಪ್ರಾರಂಭಿಸಲು ಆಗ್ರಹ. 

ಶಹಾಪುರ : ತಾಲೂಕಿನ ಸಗರ ಗ್ರಾಮ 15 ಸಾವಿರ ಜನಸಂಖ್ಯೆ ವಾಸಿಸುವ ಬಹುದೊಡ್ಡ ಗ್ರಾಮವಾಗಿದ್ದು,ಇಲ್ಲಿ ದಿನನಿತ್ಯ ಆಧಾರ್ ನೋಂದಣಿಗಾಗಿ ಸಾರ್ವಜನಿಕರು ಪರದಾಡುವಂತಾಗಿದೆ,ಆದ್ದರಿಂದ ಸಗರ ಗ್ರಾಮದಲ್ಲಿ ನೂತನ ಆಧಾರ್ ನೋಂದಣಿ ಕೇಂದ್ರ ಪ್ರಾರಂಭಿಸಬೇಕೆಂದು ಬಿಜೆಪಿ ಯುವ ಮುಖಂಡ ಗುಂಡು ಬಸ್ಸಾನೂರ ಆಗ್ರಹಿಸಿದ್ದಾರೆ.

ಗ್ರಾಮದ ಸುತ್ತಲೂ ಹತ್ತಾರು ಹಳ್ಳಿಗಳಾದ ಶಾರದಳ್ಳಿ,ತಿಮ್ಮಾಪುರ, ವಿರುಪಾಪುರ,ಹೊಸಳ್ಳಿ,ಯಕ್ಕಗಡ್ಡಿ, ಮಹಲ್ ರೋಜಾ,ದರಿಯಾಪುರ, ಪಿಂಜಾರದೊಡ್ಡಿ, ಗಂಗನಾಳ ಶೆಟ್ಟಿಕೆರ,ಗ್ರಾಮಸ್ಥರು ತಮ್ಮ ದಿನನಿತ್ಯದ ಕೆಲಸಗಳನ್ನೆಲ್ಲ ಬಿಟ್ಟು ಆಧಾರ್ ನೋಂದಣಿಗಾಗಿ ಅಲೆದಾಡುವಂತಾಗಿದೆ, 

ಮೇ 27,2022 ರಂದು ಶಹಾಪುರ ತಾಲೂಕಿನ ರಸ್ತಾಪುರ ಗ್ರಾಮದಲ್ಲಿ ಜರುಗಿದ "ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ" ಕಾರ್ಯಕ್ರಮದಲ್ಲಿ ಈ ಕುರಿತು ಗ್ರಾಮಸ್ಥರ ಪರವಾಗಿ ಮನವಿ ಸಲ್ಲಿಸಿದರು ಯಾವುದೇ ರೀತಿಯ ಪ್ರಯೋಜನೆಯಾಗಿಲ್ಲ ಅಲ್ಲದೆ ಖುದ್ದಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಸಿಬ್ಬಂದಿಗಳ ಗಮನಕ್ಕೆ ತಂದರು ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೋಡಿಕೊಂಡರು.

ಶಹಪುರ ಗ್ರಾಮೀಣ 

ಬಸವರಾಜ ಶಿಣ್ಣೂರ

ಚಿತ್ರ ಬರಹ : ಬಿಜೆಪಿ ಯುವ ಮುಖಂಡ ಗುಂಡು ಬಸ್ಸಾನೂರ