ಗದಗ|| ಶಿಕ್ಷಕಿ ವರ್ಗಾವಣೆಯಿಂದ ದುಃಖಿತರಾದ ಮಕ್ಕಳು
ಗದಗ|| ಶಿಕ್ಷಕಿ ವರ್ಗಾವಣೆಯಿಂದ ದುಃಖಿತರಾದ ಮಕ್ಕಳು
ಗದಗ: ಜಿಲ್ಲೆಯ ಗದಗ ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನರಸಾಪೂರ , ಗ್ರಾಮೀಣ ವಲಯದಲ್ಲಿ ಜ್ಯೋತಿ ಬಡಿಗೇರ...ಸಹಶಿಕ್ಷಕಿಯರು ಸುಮಾರು ಐದಾರು ವರ್ಷಗಳ ಕಾಲ ಸೇವೆ ಸಲ್ಲಿಸಿದರು , ಮಕ್ಕಳಿಗೆ ಅಚ್ಚು ಮೆಚ್ಚಿನ ಶಿಕ್ಷಕಿಯರು ಆಗಿದ್ದರು, ಸದಾ ಮಕ್ಕಳೊಂದಿಗೆ ಮಕ್ಕಳಾಗಿ, ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿದ್ದರು, ಸುಮಾರು ಐದಾರು ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು, ಇವಾಗ ವರ್ಗಾವಣೆಗೊಂಡು, ಗದಗ ಜಿಲ್ಲೆಯ ಗದಗ ತಾಲೂಕಿನ ಕೋಟುಮಚಗಿ ಗ್ರಾಮಕ್ಕೆ ಹೆಚ್ಚುವರಿ ಶಿಕ್ಷಕಿಯರಾಗಿ ವರ್ಗಾವಣೆ ಆದೇಶ ಬಂದ ಹಿನ್ನೆಲೆಯಲ್ಲಿ ಕೋಟುಮಚಗಿ ಗ್ರಾಮಕ್ಕೆ ತೆರಳುವ ಸಂದರ್ಭದಲ್ಲಿ, ನರಸಾಪುರದ ಶಾಲೆಯ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು, ಬೇಡಿ ಟೀಚರ ಹೋಗಬೇಡಿ, ನಮ್ಮನು ಬಿಟ್ಟು ಹೋಗ್ಬೇಡಿ ಎಂದು ಮಕ್ಕಳು ಶಿಕ್ಷಕಿಯನ್ನು ಸುತ್ತುವರೆದು ಅರಳುತ್ತಿರುವ ನೋಡಿದರೆ, ಎಂತಹವರಿಗೂ ಕರುಳು ಕಿತ್ತು ಬರುವದು, ಕಣ್ಣು ಒದ್ದೆ ಆಗಿದಂತು ನಿಜ, ಸಮಾಜಕ್ಕೆ ಇಂತಹ ಶಿಕ್ಷಕರು ಬೇಕು ಎಂಬುದು ನಮ್ಮ ಆಶಯ
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
