ವಾಡಿ ಯಲ್ಲಿ ಬಣ್ಣವಿಲ್ಲದ ಗಣಪನಿಗೆ ಬೇಡಿಕೆ.
ವಾಡಿ ಯಲ್ಲಿ ಬಣ್ಣವಿಲ್ಲದ ಗಣಪನಿಗೆ ಬೇಡಿಕೆ.
ವಾಡಿ: ಪಟ್ಟಣದ ಗುರುದತ್ತ ಪತಂಜಲಿ ಅಂಗಡಿಯಲ್ಲಿ ಸುಮಾರು ಏಳು ವರ್ಷಗಳಿಂದ ಪರಿಸರ ಸ್ನೇಹಿ ಮಣ್ಣಿನ ಗಣಪತಿ ಮೂರ್ತಿಗಳ ಮಾರಾಟ ಜೋರಾಗಿದೆ.
ವ್ಯಾಪಾರಸ್ಥರು,ಯೋಗ ಶಿಕ್ಷಕರು ಹಾಗೂ ಪರಿಸರ ಪ್ರೇಮಿಗಳಾದ ವೀರಣ್ಣ ಯಾರಿ ಹಾಗೂ ಎಚ್ ಸಚಿನ್ ಅವರು ಮಣ್ಣಿನ ಗಣಪನ ಮಾರಾಟದ ಕುರಿತು ಮಾತನಾಡಿ,
ಸುಮಾರು ಏಳು ವರ್ಷಗಳಿಂದ ವಿವಿಧ ಶಾಲೆಗಳಿಗೆ ಯೋಗಾಭ್ಯಾಸ ಮಾಡಿಸುವುದರ ಜೊತೆಗೆ ಪರಿಸರ ಕಾಳಜಿ,ಪರಿಸರ ಸ್ನೇಹಿ ಗಣಪತಿಯ ವಿಶೇಷತೆ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಹೇಳುತ್ತಾ ಬಂದಿದ್ದೆವೆ.
ವಿದ್ಯಾರ್ಥಿಗಳ ಜೊತೆಗೆ ಸಾರ್ವಜನಿಕರು ಸಹ ಬಣ್ಣವಿಲ್ಲದ ಮಣ್ಣಿನ ಗಣಪನ ಆರಾಧನೆಗೆ ಹೆಚ್ಚು ಆಸಕ್ತಿ ತೋರಿದ್ದರಿಂದ ಪ್ರತಿ ವರ್ಷ ಮಣ್ಣಿನ ಗಣಪನ ಮೂರ್ತಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ ಎಂದರು.
ಈ ಪರಿಸರ ಸ್ನೇಹಿ ವಿಗ್ರಹವು ಪರಿಸರವನ್ನು ಸಂರಕ್ಷಿಸುವುದಲ್ಲದೆ ಪವಿತ್ರ ವಾತಾವರಣವನ್ನು ಸೃಷ್ಟಿಸುತ್ತದೆ.ನಮ್ಮ ದೇಶದ ಶ್ರೀಮಂತ ಪರಂಪರೆಯ ಅಭಿವೃದ್ಧಿ ಮತ್ತು ಪ್ರಚಾರಕ್ಕೆ ಕೊಡುಗೆ ನೀಡುವಂತಿದೆ.
ಗಣೇಶ ಹಬ್ಬದಲ್ಲಿ ಪ್ಲಾಸ್ಟರ್ ಆಫ್ ಪ್ಯಾರಿಸ್ ಬಳಸದಂತೆ ಇದರ ಬಳಕೆಯಿಂದಾಗಿ ನೈಸರ್ಗಿಕ ಜಲಮೂಲಗಳು ಕಲುಷಿತಗೊಳ್ಳುತ್ತವೆ. ಪ್ರಾಣಿ ಪಕ್ಷಿ ಹಾಗೂ ಜಲಚರಗಳ ಜೀವಕ್ಕೆ ಅಪಾಯವಾಗುತ್ತದೆ. ಇದಲ್ಲದೇ ಸಾರ್ವಜನಿಕ ಆರೋಗ್ಯಕ್ಕೂ ಧಕ್ಕೆಯಾಗುತ್ತದೆ. ಒಂದು ವೇಳೆ ಪಿಒಪಿ ಬಳಸಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಕಟಣೆ ಮೂಲಕ ಹೇಳುವ ಅಧಿಕಾರಿಗಳು,ತಮ್ಮ ಮುಂದೆಯೇ
ಪಿಒಪಿ ಗಣಪತಿಗಳ ಮಾರಾಟ ಭರಾಟೆ ಇದ್ದರು ಸುಮ್ಮನಿರುವ ಉದ್ದೇಶ ಅರ್ಥವಾಗುತ್ತಿಲ್ಲ.
ಆಧ್ಯಾತ್ಮಿಕವಾಗಿ ವೈಜ್ಞಾನಿಕವಾಗಿ ಮಣ್ಣಿನ ಗಣಪತಿಯ ವಿಶೇಷತೆ ಹಾಗೂ ಪಿಒಪಿ ವಿಗ್ರಹಗಳಿಂದ ಆಗುವ ಅನಾಹುತಗಳನ್ನು ಮನಗಂಡು, ನಾವೆಲ್ಲರೂ ಪರಿಸರ ಸ್ನೇಹಿ ಮಣ್ಣಿನ ಗಣಪತಿಯನ್ನು ಪ್ರತಿಷ್ಠಾಪಿಸುವುದ ನಮ್ಮ ಹಾಗೂ ನಮ್ಮ ಮುಂದಿನ ಪೀಳಿಗೆಯ ಆರೋಗ್ಯಕರ ಬದುಕಿಗೆ ಅನಿವಾರ್ಯವಾಗಿದೆ ಎಂದು ಹೇಳಿದರು.