ಭಕ್ತ ಮಾರ್ಕಂಡೇಶ್ವರ ಜಯಂತಿ ಹಾಗೂ ನೂಲು ಹುಣ್ಣಿಮೆ ಅದ್ದೂರಿ ಆಚರಣೆ

ಭಕ್ತ ಮಾರ್ಕಂಡೇಶ್ವರ ಜಯಂತಿ ಹಾಗೂ ನೂಲು ಹುಣ್ಣಿಮೆ ಅದ್ದೂರಿ ಆಚರಣೆ
ಕಲಬುರಗಿ, ಆ. 9: ಕಲಬುರಗಿ ಮಹಾನಗರದಲ್ಲಿರುವ ಜಿಲ್ಲಾ ಪದ್ಮಸಾಲಿ ಸಮಾಜದ ಶ್ರೀ ಭಕ್ತ ಮಾರ್ಕಂಡೇಶ್ವರರ ದೇವಸ್ಥಾನದಲ್ಲಿ ಶನಿವಾರ ಸಮಾಜದ ಆದ್ಯ ದೇವರ ಜಯಂತಿ ಹಾಗೂ ನೂಲು ಹುಣ್ಣಿಮೆ ಪ್ರಯುಕ್ತ ಅದ್ದೂರಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮದಲ್ಲಿ ಸಪ್ತ ನೇಕಾರರ ಸೇವಾ ಸಂಘದ ಅಧ್ಯಕ್ಷ ಶ್ರೀ ಶಿವಲಿಂಗಪ್ಪ ಅಷ್ಟಗಿ, ಜಿಲ್ಲಾ ತೊಗಟವೀರ ಸಮಾಜದ ಅಧ್ಯಕ್ಷ ಶ್ರೀನಿವಾಸ್ ಬಲಪೂರ್, ಕುರಹಿನ್ ಶೆಟ್ಟಿ ಸಮಾಜದ ಕಾರ್ಯದರ್ಶಿ ಮ್ಯಾಳಗಿ ಚಂದ್ರಶೇಖರ, ಸಹ-ಕಾರ್ಯದರ್ಶಿ ರಾಜಶೇಖರ್ ಸಬಸಗಿ, ಖಜಾಂಚಿ ಮಲ್ಲಿನಾಥ ಕುಂಟೋಜಿ, ಜಿಲ್ಲಾ ಸ್ವಕುಳಸಾಲಿ ಸಮಾಜದ ಅಧ್ಯಕ್ಷರಾದ ಶ್ರೀ ನಾರಾಯಣರಾವ್ ಸಿಂಗಾಡೆ, ತುಕಾರಾಮ ಕೊಂಗೆ, ಹಟಗಾರ ಸಮಾಜದ ಸುಲ್ತಾನಪುರದ ಗುರುರಾಜ್ ಚಿಮದಿ, ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟದ ಜಿಲ್ಲಾ ಪ್ರತಿನಿಧಿ ಹಾಗೂ ನ್ಯಾಯವಾದಿ ಜೇನವೆರಿ ಎಸ್. ವಿನೋದಕುಮಾರ ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡು ಭಕ್ತ ಮಾರ್ಕಂಡೇಶ್ವರರ ದರ್ಶನ ಪಡೆದರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಸಂಸ್ಥಾಪಕರು ಹಾಗೂ ಪದ್ಮಸಾಲಿ ಸಮಾಜದ ಹಿರಿಯರನ್ನೊಳಗೊಂಡ ಮೂವರಿಗೆ ಗೌರವ ಸನ್ಮಾನ ನೆರವೇರಿಸಲಾಯಿತು. ಜೊತೆಗೆ, ರಾಷ್ಟ್ರಮಟ್ಟದಲ್ಲಿ ಸೇವೆ ಸಲ್ಲಿಸಲು ಆಯ್ಕೆಗೊಂಡ ಸಮಾಜದ ಯುವ ಉದ್ಯಮಿ ಪ್ರದೀಪ್ ಸಂಗಾ ಹಾಗೂ ಜಯಂತಿ ನಿಮಿತ್ತ ಆಗಮಿಸಿದ ರಾಜ್ಯ ಸರ್ಕಾರ ಸಚಿವಾಲಯದ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಒಕ್ಕಲಿಗರ ಸಮುದಾಯದ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ರಮೇಶ್ ಸಂಗಾ ರವರಿಗೆ ಸಮಾಜದ ಜಿಲ್ಲಾಧ್ಯಕ್ಷ ನಾಗರಾಜ್ ಕುಸುಮಾ ಸನ್ಮಾನ ಸಲ್ಲಿಸಿದರು.
ನಾಗರಾಜ್ ಕುಸುಮಾ ಅವರ ನೇತೃತ್ವದಲ್ಲಿ ಅದ್ದೂರಿ ಪೂಜೆ ನೆರವೇರಿತು ಹಾಗೂ ಮಹಾಪ್ರಸಾದ ವಿತರಿಸಲಾಯಿತು. ಮಾರ್ಕಂಡೇಶ್ವರ ಶಾಖಾ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮವೂ ಜರುಗಿತು. ಭಕ್ತರಿಗೆ ನೂಲು ಹಾಗೂ ಜನಿವಾರ ವಿತರಿಸಲಾಯಿತು. ಅಕ್ಕಪಕ್ಕದ ಬಡಾವಣೆಯ ಭಕ್ತರು, ಮಹಿಳೆಯರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
ಸಮಾಜದ ಎಲ್ಲಾ ಪದಾಧಿಕಾರಿಗಳು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ್ದರು ಎಂದು ಸಂಘದ ಉಪಾಧ್ಯಕ್ಷ ಹಾಗೂ ನ್ಯಾಯವಾದಿ ಅದ ತ್ರಿವೇದಿ ವಿಜಯಕುಮಾರ ತಿಳಿಸಿದ್ದಾರೆ.